ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಗೃಹ ಸಾಲದ ಬಡ್ಡಿ ದರವನ್ನು ಇಳಿಕೆ ಮಾಡಿರುವುದಾಗಿ ಸೋಮವಾರ ಘೋಷಿಸಿದೆ.
ಸಾಲದ ಬಡ್ಡಿದರವನ್ನು (ಎಂಸಿಎಲ್ ಆರ್) ಶೇ.10 ಬೇಸಿಸ್ ಅಂಶಗಳಷ್ಟು(0.10)ಇಳಿಕೆ ಮಾಡಿರುವುದಾಗಿ ಎಸ್ ಬಿಐ ತಿಳಿಸಿದೆ.
ಒಂದು ವರ್ಷದ ಎಸ್ ಬಿಐನ ಎಂಸಿಎಲ್ ಆರ್ ನ ಬಡ್ಡಿದರ ಶೇ.825ರಿಂದ ಶೇ.8.15ಕ್ಕೆ ಇಳಿಕೆಯಾಗಲಿದ್ದು, ಸೆಪ್ಟೆಂಬರ್ 10ರಿಂದ ಪರಿಷ್ಕೃತ ಬಡ್ಡಿದರ ಅನ್ವಯವಾಗಲಿದೆ ಎಂದು ವಿವರಿಸಿದೆ.
ಇದರೊಂದಿಗೆ 2019-20ನೇ ಸಾಲಿನ ಎಂಸಿಎಲ್ ಆರ್ ಬಡ್ಡಿದರ ಐದನೇ ಬಾರಿಗೆ ಕಡಿತ ಮಾಡಿದಂತಾಗಿದೆ ಎಂದು ಎಸ್ ಬಿಐ ಹೇಳಿದೆ.
ಎಸ್ ಬಿಐನಲ್ಲಿನ ಠೇವಣಿ ಬಡ್ಡಿದರವೂ 20ರಿಂದ 25 ಬೇಸಿಸ್ ಪಾಯಿಂಟ್ ನಷ್ಟು ಇಳಿಕೆಯಾಗಿದ್ದು, ಸ್ಥಿರ ಠೇವಣಿ ಬಡ್ಡಿದರ ಶೇ.6.70ರಿಂದ ಶೇ.6.50ಕ್ಕೆ ಇಳಿಕೆಯಾಗಿದೆ.