Advertisement

ರಸ್ತೆ ಕಾಮಗಾರಿಗೆ ಕೊನೆಗೂ ಚಾಲನೆ

12:38 PM Oct 07, 2019 | Suhan S |

ಮಾಯಕೊಂಡ: ಹೆದ್ನ-ರಾಂಪುರ ರಸ್ತೆ ದುರಸ್ತಿಗೆ ಆಗ್ರಹಿಸಿ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಈಗ ಪ್ರತಿಫಲ ದೊರಕುತ್ತಿದೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್‌ ಹೇಳಿದರು.

Advertisement

ಮಾಯಕೊಂಡ ಹೋಬಳಿಯ ಹೆದ್ನ-ರಾಂಪೂರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ಸಂಸದನಾಗಿದ್ದರೂ ರಾಜ್ಯದಲ್ಲಿ ಬೇರೆ ಸರ್ಕಾರ ಇರುತ್ತಿತ್ತು. ಆದ್ದರಿಂದ ಕಾಮಗಾರಿಗೆ ತೊಡಕು ಉಂಟಾಗಿತ್ತು. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ರಸ್ತೆ ಮೆಟಿಗ್‌ ಕಾಮಗಾರಿಗೆ 30-40 ಲಕ್ಷ ರೂ. ನೀಡಲಾಗಿತ್ತು. ಅಂದಿನಿಂದಲೂ ಡಾಂಬರೀಕರಣಕ್ಕೆ ಆಗ್ರಹಿಸಿ ಚುನಾವಣೆ ಬಹಿಷ್ಕರಿಸುತ್ತ ಹೋರಾಟ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಲಾಗಿತ್ತಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮತದಾನ ಮಾಡುವಂತೆ ಮನವೊಲಿಸಿದ್ದರು. ಈಗ ಹೆದ್ನ- ರಾಂಪುರ ರಸ್ತೆ ನಿರ್ಮಾಣಕ್ಕೆ 1.79 ಕೋಟಿ ರೂ. ಬಿಡುಗಡೆಯಾಗಿದೆ ಎಂದರು. ಈ ಮಧ್ಯೆ ಹೆದ್ನ ಗ್ರಾಮಸ್ಥರೊಬ್ಬರು ಮಾತನಾಡಿ, ಮಾಯಕೊಂಡ ರೈಲ್ವೆ ನಿಲ್ದಾಣದಿಂದ ಹೆದ್ನ ಗೆ ಬರುವ ರಸ್ತೆಗೆ ಹಣ ಬಿಡುಗಡೆಯಾಗಿದೆ. ಇನ್ನೂ ಸ್ವಲ್ಪ ರಸ್ತೆ ಆಗಲೀಕರಣ ಮಾಡುವಂತೆ ಕೋರಿದಾಗ, ಸಂಸದ ಮತ್ತು ಶಾಸಕರು ಸ್ಥಳದಲ್ಲಿದ್ದ ಎಂಜಿನಿಯರ್‌ಗೆ ರಸ್ತೆ ಆಗಲೀಕರಣ ಮಾಡುವಂತೆ ಸೂಚಿಸಿ, ಕಾಮಗಾರಿ ಕಳಪೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಶಾಸಕ ಪ್ರೊ| ಎನ್‌. ಲಿಂಗಣ್ಣ ಮಾತನಾಡಿ, ಈಗಿನ ಕಾಲದಲ್ಲಿಯೂ ಇಂತಹ ರಸ್ತೆಗಳು ಇವೆ ಎಂಬುದನ್ನು ಉಹಿಸಿಕೊಳ್ಳಲೂ ಸಾಧ್ಯವಿಲ್ಲ. ರಸ್ತೆಗಾಗಿ ಹೋರಾಟ ಮಾಡಿದರೂ ಯಾರೂ ನಿಮ್ಮ ಮನವಿಗೆ ಸ್ಪಂದಿಸಲಿಲ್ಲ. ಈಗ ಕಾಲ ಕೂಡಿ ಬಂದಿದೆ ಎಂದರು.

ಸಂಸದ ಮತ್ತು ಶಾಸಕರು ಮಾಯಕೊಂಡದ ಉಪತಹಶೀಲ್ದಾರ್‌ ಕಚೇರಿ ನೂತನ ಕಟ್ಟಡಕ್ಕೆ ಮತ್ತು ಮುಖ್ಯ ರಸ್ತೆಯಿಂದ ಆಸ್ಪತ್ರೆವರೆಗೆ ಸಿಮೇಂಟ್‌ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಮಾಯಕೊಂಡ ರೈಲ್ವೆ ನಿಲ್ದಾಣದಿಂದ ಹೆದ್ನ ಗ್ರಾಮದವರೆಗೂ 2 ಕಿ.ಮೀ ಕಾಲ್ನಡಿಗೆಯಲ್ಲಿ ಬಂದ ಸಂಸದರು ಮತ್ತು ಶಾಸಕರು ಹೆದ್ನ-ರಾಂಪುರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹೆದ್ನ ಮುರುಗೇಂದ್ರಪ್ಪ, ಬಸವಪುರ ರಮೇಶ್‌ ಮಾತನಾಡಿದರು. ದಾವಣಗೆರೆ ತಹಶೀಲ್ದಾರ್‌ ಸಂತೊಷ್‌ ಕುಮಾರ್‌, ಕಂದಾಯ ನಿರೀಕ್ಷಕ ರವಿಕುಮಾರ್‌, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಜೀವನಮೂರ್ತಿ, ಮಂಡಲ ಅಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜು, ತಾ.ಪಂ ಸದಸ್ಯರಾದ ನಾಗರಾಜು, ಉಮೇಶ್‌ ನಾಯ್ಕ, ಎಪಿಎಂಸಿ ಸದಸ್ಯ ಸುಧಾ ರುದ್ರೇಶ್‌, ಮಾಯಕೊಂಡ ಗ್ರಾಪಂ ಅಧ್ಯಕ್ಷೆ ರೂಪ, ಹೆದೆ° ಗ್ರಾಂಪ ಆದ್ಯಕ್ಷ ಮಂಜುನಾಥ, ಸದಸ್ಯರಾದ ರುದ್ರೇಶ್‌, ಮಲ್ಲಿಕಾರ್ಜುನ, ಗಂಗಾಧರ ರಾಜಶೇಖರ್‌, ಸುಲೋಚನಮ್ಮ, ಗಿರಿಜಮ್ಮ, ಜಿಪಂ ಮಾಜಿ ಸದಸ್ಯ ಎಸ್‌. ವೆಂಕಟೇಶ್‌, ಮುಖಂಡರಾದ ದಿವಾಕರ, ನೀರಘಂಟಿ ಶ್ರೀನಿವಾಸ, ಜಯಪ್ರಕಾಶ್‌, ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next