ಕೋಲಾರ: ಸರ್ಕಾರದ ಅನುದಾನವನ್ನು ಗ್ರಾಮ ಪಂಚಾಯ್ತಿಗಳ ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರವೇ ಗ್ರಾಮಗಳ ಅಭಿ ವೃದ್ಧಿ ಸಾಧ್ಯ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.ತಾಲೂಕಿನ ಚೆಲುವನಹಳ್ಳಿಯಲ್ಲಿ ಹೆದ್ದಾರಿಯಲ್ಲಿ ಎಂಎಲ್ಸಿ ಮನೋಹರ್ ಅನುದಾನದಲ್ಲಿ ಬಸ್ ತಂಗುದಾಣಕ್ಕೆ ಭೂಮಿ ಪೂಜೆ ಹಾಗೂ ತಾಪಂ ಸದಸ್ಯೆ ರತ್ನಮ್ಮ ನಂಜುಂಡಗೌಡರ ಅನುದಾನದಲ್ಲಿ ಹೆದ್ದಾರಿ ಯಿಂದ ಗ್ರಾಮಕ್ಕೆ ಬೀದಿದೀಪ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು.
ಉದ್ಯೋಗ ಖಾತ್ರಿಯಿಂದ ರೈತರು ತಮ್ಮ ತೋಟದ ಕೆಲಸಗಳನ್ನು ನಿರ್ವಹಿಸಿಕೊಳ್ಳಲು ನೆರವಾಗುತ್ತಿದೆ, ಗ್ರಾಮಗಳಲ್ಲಿ ಹಿರಿಯರು ದೂರದೃಷ್ಟಿಯಿಂದ ನಿರ್ಮಿಸಿದ ಕೆರೆ, ಕಲ್ಯಾಣಿ, ಕುಂಟೆಗಳ ರಕ್ಷಣೆಗೆ ಉದ್ಯೋಗ ಖಾತ್ರ ಬಳಕೆ ಯಾಗಲಿ ಎಂದರು.
ಗ್ರಾಮದಲ್ಲಿ ರಸ್ತೆ, ಚರಂಡಿ ಶಾಲಾ ಕಾಂಪೌಂಡ್, ಆಟದ ಮೈದಾನದ ಅಭಿವೃದ್ಧಿ ಯನ್ನು ನರೇಗಾದಿಂದ ಮಾಡಬಹುದಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮಗಳು ನಗರವನ್ನು ಮೀರಿ ಬೆಳೆಯಲಿವೆ. ಜನತೆ ನಗರಗಳ ಕಡೆ ವಲಸೆ ಹೋಗುವುದನ್ನು ಬಿಡಬೇಕು, ಗ್ರಾಮದಲ್ಲೇ ಆರ್ಥಿಕಾಭಿವೃದ್ಧಿಗೆ ದಾರಿಗಳನ್ನು ಹುಡುಕಿಕೊಳ್ಳಬೇಕು ಎಂದ ಅವರು, ಮಕ್ಕಳಿಗೆ ಮೊದಲು ಶಿಕ್ಷಣ ನೀಡಿ ಎಂದರು.
ಜನತೆ ಬಸ್‌ಗಾಗಿ ಗೇಟ್‌ಗೆ ಬಂದಾಗ ಮಳೆ,ನೆರಳಿನಿಂದ ರಕ್ಷಣೆ ಅಗತ್ಯವಿದೆ, ಈ ನಿಟ್ಟಿನಲ್ಲಿ ಬಸ್ ತಂಗುದಾಣವನ್ನು ಸುಂದರವಾಗಿ ಮತ್ತು ಕಳಪೆ ಕಾಮಗಾರಿಗೆ ಅವಕಾಶವಿಲ್ಲದಂತೆ ನಿರ್ಮಿಸಿ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಆರ್.ದಯಾ ನಂದ್, ಕೋಚಿಮುಲ್ ನಿರ್ದೇಶಕ ಡಿ.ವಿ. ಹರೀಶ್, ವಕ್ಕಲೇರಿ ರಾಮು, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಚೆಲುವನಹಳ್ಳಿ ನಾಗರಾಜ್, ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮುಂರಾಂಡಹಳ್ಳಿ ಗೋಪಾಲ್, ತಾಪಂ ಸದಸ್ಯರಾದ ರತ್ನಮ್ಮ ನಂಜುಂಡಗೌಡ, ಗ್ರಾಪಂ ಸದಸ್ಯರಾದ ಗೋವಿಂದಪ್ಪ, ಸರಿತಾ, ಮುಖಂ ಡರಾದ ಜಯರಾಮೇಗೌಡ, ತಿಮ್ಮೇಗೌಡ, ಚಿಕ್ಕೇಗೌಡ, ಮುನೇಗೌಡ, ರಾಮೇಗೌಡ, ನಾಗೇಶ್, ಉದ್ಯಮಿ ಶಂಕರರೆಡ್ಡಿ, ಪ್ರೊ.ಶ್ರೀ ರಾಮ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮುರಳಿ ಗೌಡ, ಪ್ರಧಾನ ಕಾರ್ಯದರ್ಶಿ ಮುರಳಿ ಉಪಸ್ಥಿತರಿದ್ದರು.
Advertisement
ಉದ್ಯೋಗ ಖಾತ್ರಿ ಗ್ರಾಮೀಣಾಭಿವೃದ್ಧಿಗೆ ವರದಾನವಾಗಿದೆ. ಗ್ರಾಪಂಗೆ ಇದೀಗ ಅನು ದಾನ ಬಳಕೆಗೆ ಹೆಚ್ಚಿನ ಅಧಿಕಾರ ನೀಡಿರುವು ದರಿಂದ ಇಂತಹ ಯೋಜನೆಗಳನ್ನು ಬಳಸಿ ಕೊಂಡು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
Related Articles
ರೈತ ಬೆಳೆ ಬೆಳೆಯುವುದ ನಿಲ್ಲಿಸಿದ್ರೆ ಉಳಿಗಾಲವಿಲ್ಲ:
ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ದೇಶದಲ್ಲಿ ಯಾವುದೇ ಉದ್ಯಮ ನಿಂತರು ಬದುಕು ಸಾಗಿಸಬಹುದು ಆದರೆ, ರೈತ ಬೆಳೆ ನಿಲ್ಲಿಸಿದರೆ ಉಳಿಗಾಲವಿಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಹೇಳಿದರು. ಗ್ರಾಮಗಳಲ್ಲಿ ರೈತ ಕುಟುಂಬಗಳು ನೆಮ್ಮದಿಯ ಬದುಕು ಸಾಗಿಸಲು ಮತ್ತಷ್ಟು ಸೌಲಭ್ಯಗಳನ್ನು ಸರ್ಕಾರ ನೀಡಬೇಕು, ಸ್ವಾಭಿಮಾನದ ಬದುಕು ನಡೆಸಲು ಸರ್ಕಾರ ಜಾರಿಗೆ ತರುವ ಯೋಜನೆಗಳು ಸದ್ಬಳಕೆಯಾಗಬೇಕು ಎಂದರು. ಹೆದ್ದಾರಿ ಪಕ್ಕದಲ್ಲಿ ಜಮೀನು ಇರುವುದರಿಂದ ಉತ್ತಮ ಬೆಳೆ ಸಿಗುತ್ತದೆ ಎಂದು ಹಣಕ್ಕೆ ಆಸೆ ಬಿದ್ದು, ಮಾರಿಕೊಳ್ಳದಿರಿ, ಮತ್ತೆ ಇಂತಹ ಜಮೀನನ್ನು ನೀವು ಸಂಪಾದಿಸಲು ಸಾಧ್ಯವಿಲ್ಲ ಎಂದ ಅವರು, ಅನ್ನ ನೀಡುವ ಭೂಮಿಯನ್ನು ಮಾರದಿರಿ ಎಂದರು. ಸರ್ಕಾರಗಳು ಯಾವುದೇ ಇರಲಿ ರೈತಪರ ಕಾಳಜಿ ಹೊಂದಿರಬೇಕು ಎಂದ ಅವರು, ಕೇವಲ ಹೈಟೆಕ್ ಮಾದರಿ ನಗರಗಳ ಅಭಿವೃದ್ಧಿಗೆ ಒತ್ತು ನೀಡುವುದಲ್ಲ, ಗ್ರಾಮಗಳ ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ ನೀಡುವಂತಾಗಬೇಕುಲ ಎಂದರು.
ಕೆ.ಸಿ. ವ್ಯಾಲಿಯಿಂದ ಜಿಲ್ಲೆಯ ಕೃಷಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ:
ಕೆ.ಸಿ. ವ್ಯಾಲಿ ನೀರು ಹರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೃಷಿ ಜಿಲ್ಲೆಯಲ್ಲಿ ಉತ್ತಮ ಸ್ಥಿತಿಗೆ ಬರಲಿದೆ, ಅಂತರ್ಜಲ ವೃದ್ಧಿಯಾದರೆ ನಮ್ಮ ರೈತರು ಬದುಕು ಸರಿಹೋಗಲಿದ್ದು, ಜಮೀನು ಮಾರಾಟ ಮಾಡುವ ಆಲೋಚನೆ ಬಿಟ್ಟು, ಅನ್ನದಾತರು ಕೃಷಿ ಮುಂದುವರಿಸಬೇಕು ಎಂದು ಶಾಸಕ ಶ್ರೀನಿವಾಸಗೌಡ ಸಲಹೆ ನೀಡಿದರು. ಜಿಲ್ಲೆಗೆ ಎತ್ತಿನ ಹೊಳೆ ನೀರು ಹರಿಯಲಿದೆ, ಯಾವುದೇ ಅನುಮಾನ ಬೇಡ, ಕೋಲಾರ ನಗರಕ್ಕೆ ಕುಡಿಯುವ ನೀರು ಒದಗಿಸುವ ಯರಗೋಳು ಕಾಮಗಾರಿಯೂ ವೇಗವಾಗಿ ಮುಂದುವರೆದಿದೆ ಎಂದರು.
Advertisement