Advertisement

ಸಮುದಾಯ ಭವನ ಕಾಮಗಾರಿಗೆ ಚಾಲನೆ

04:09 PM Oct 20, 2019 | Team Udayavani |

ದೋಟಿಹಾಳ: ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಸಮುದಾಯ ಭವನದ ಕಟ್ಟಡದ ಮುಂದುವರಿದ ಕಾಮಗಾರಿಗೆ ಶನಿವಾರ ಸಂಸದ ಕರಡಿ ಸಂಗಣ್ಣ ಅವರು ಭೂಮಿಪೂಜೆ ಮಾಡಿ ಚಾಲನೆ ನೀಡಿದರು.

Advertisement

ಈ ವೇಳೆ ಗ್ರಾಮದ ದೇವಾಂಗ ಸಮಾಜದ ಗುರು-ಹಿರಿಯರು ನಮ್ಮ ಸಮಾಜ ಬಡಕುಟುಂಬಗಳ ಸಮಾಜವಾಗಿದೆ. ನೇಕಾರಿಕೆ ನಮ್ಮ ಕಸುಬುವಾಗಿದೆ. ಸಮಾಜದ ಸಮುದಾಯ ಭವನದ ಕಟ್ಟಡದ ಅರ್ಧಕ್ಕೆ ನಿಂತಿದೆ. ಸಮಾಜದವರು ಮದುವೆ ಸಮಾರಂಭ ಮಾಡಲು ತೊಂದರೆ ಆಗುತ್ತಿದೆ. ಹೀಗಾಗಿ ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಹಣ ನೀಡಬೇಕು ಎಂದು ಸಮಾಜದ ಗುರು-ಹಿರಿಯರು ಸಂಸದ ಕರಡಿ ಸಂಗಣ್ಣ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿ ಮಾತನಾಡಿದ ಸಂಸದರು, ಈ ಸಮುದಾಯ ಭವನಕ್ಕೆ ಐದು ಲಕ್ಷ ರೂ. ಅನುದಾನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಯಾವುದೇ ತೊಂದರೆಗಳಿಂದ ಸದ್ಯ ಮೂರು ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಣ ನೀಡುತ್ತೇನೆ ಎಂದು ಸಮಾಜದ ಹಿರಿಯರಿಗೆ ಭರವಸೆ ನೀಡಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌, ಜಿಪಂ ಸದಸ್ಯರಾದ ಕೆ. ಮಹೇಶ, ವಿಜಯ ನಾಯ್ಕ, ನೇಮಣ್ಣ ಮೆಲಸಕ್ರಿ, ತಾಪಂ ಸದಸ್ಯ ಮಹಾಂತೇಶ ಬಾದವಿ, ವೇದಮೂರ್ತಿ ಶ್ರೀ ವಿವೇಕಾನಂದ ಸ್ವಾಮಿಗಳು, ಸಮಾಜದ ಮುಖಂಡರಾದ ಬಾಳಪ್ಪ ಅರಳಿಕಟ್ಟಿ, ಶಿವಪ್ಪ ಮಾಳಗಿ, ನಾರಾಯಣಪ್ಪ ಕೊಳ್ಳಿ, ರಾಮನಗೌಡ ಬಿಜ್ಜಲ್‌, ಅಮರೇಗೌಡ ಬಿಜ್ಜಲ್‌, ಮಲ್ಲಪ್ಪ ಮೆದಿಕೇರಿ, ಮಹೇಶ ಕಾಳಗಿ, ಚನ್ನಪ್ಪ ಸಕ್ರಿ, ಹಿರಣಯ್ಯ ಸಕ್ರಿ, ಮಾರುತಿ ಹುಬ್ಬಳ್ಳಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next