ಬೆಂಗಳೂರು: ಕೋವಿಡ್ 19 ವೈರಸ್‌ಗೆ ಬೆದರಿ ಗೂಡು ಸೇರಿದ್ದ ಲೋಹದ ಹಕ್ಕಿಗಳು ಸೋಮವಾರದಿಂದ ಮತ್ತೆ ರೆಕ್ಕೆಬಿಚ್ಚಿ ಆಗಸಕ್ಕೆ ಚಿಮ್ಮಲಿವೆ. ಆದರೆ, ಅವುಗಳ ಹಾರಾಟ ಅಂತಾರಾಜ್ಯಗಳಿಗೆ ಮಾತ್ರ ಸೀಮಿತವಾಗಿರಲಿದೆ. ಲಾಕ್‌ಡೌನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ದೇಶೀಯ ವಿಮಾನಗಳ ಸೇವೆ ಮೇ 25ರಿಂದ ಪುನಾರಂಭಗೊಳ್ಳಲಿದೆ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ದ ಒಟ್ಟಾರೆ ಸಾಮರ್ಥ್ಯದ ಶೇ. 33ರಷ್ಟು ಅಂದರೆ, ಅಂದಾಜು 200 ವಿಮಾನಗಳು ಮೊದಲ ದಿನ ಹಾರಾಟ ನಡೆಸುವ ಸಾಧ್ಯತೆ ಇದೆ.
ಅದೂ ಆಸನಗಳ ಬುಕಿಂಗ್ ಅನ್ನು ಅವಲಂಬಿಸಿದೆ. ಬೆಳಗಿನ ಜಾವ 5.5ಕ್ಕೆ ಮೊದಲ ವಿಮಾನ (ಇಂಡಿಗೊ) ಮುಂಬೈ ಗೆ ಹಾರಲಿದೆ. ಅದೇ ರೀತಿ ಬೆಳಿಗ್ಗೆ 7.35ಕ್ಕೆ ಚೆನ್ನೈನಿಂದ ಬೆಂಗಳೂರಿಗೆ ಬಂದಿಳಿ ಯಲಿದೆ. ಇತ್ತ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅತ್ತ ಭಾನುವಾರ ರಾತ್ರಿವರೆಗೂ ವಿಮಾನಗಳ ಬುಕಿಂಗ್, ಅನು ಸೂಚಿಗಳ ಪಟ್ಟಿ ಸಿದಟಛಿಪಡಿಸುವ ಕಾರ್ಯ ನಡೆದಿತ್ತು. 10 ಗಂಟೆ ವರೆಗೂ ವೇಳಾಪಟ್ಟಿ ಅಂತಿಮ ಗೊಂಡಿರಲಿಲ್ಲ. ಇದನ್ನು ಸ್ವತಃ ಬಿಐಎಎಲ್ ವಕ್ತಾರರು “ಉದಯ ವಾಣಿ’ಗೆ ಸ್ಪಷ್ಟಪಡಿಸಿದರು. ಈ ಮಧ್ಯೆ ದೇಶೀಯ ವಿಮಾನ ಕಾರ್ಯಾಚರಣೆಗೆ ಬಿ ಎಎಲ್ ಸಿದತೆ ಮಾಡಿಕೊಂಡಿದೆ.
ಸೋಂಕು ಯಂತ್ರಿಸಲು ಸಿಬ್ಬಂದಿ ಹಾಗೂ ಪ್ರಯಾ ಣಿಕರ ಸುರಕ್ಷತೆ ದೃಷ್ಟಿಯಿಂದ ವಿಮಾನ ನಿಲ್ದಾಣದ ವಾಹನ ಪಾರ್ಕಿಂಗ್‌ನಿಂದ ವಿಮಾನದ ಬೋರ್ಡಿಂಗ್‌ವರೆಗೂ ಪ್ರತಿ ಹಂತದಲ್ಲೂ ಸುರಕ್ಷತೆಗೆ ಹಲವು ಕ್ರಮ ಕೈಗೊಂಡಿದೆ. ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಕೆಐಎಎಲ್‌ಗೆ ಭಾನುವಾರ ಭೇಡಿ ಪರಿಶೀಲನೆ ನಡೆಸಿದರು. ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲು ನಡೆಸಿರುವ ಸಿದಟಛಿತೆಗಳನ್ನು ವೀಕ್ಷಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಸಿಪಿ ಭೀಮಾಶಂಕರ ಗುಳೇದ ಹಾಜರಿದ್ದರು.
ಬೋರ್ಡಿಂಗ್ ಪಾಸ್ ಸ್ಕ್ಯಾನ್: ಪ್ರಯಾಣಿಕರು ಟರ್ಮಿನಲ್ ಪ್ರವೇಶಿಸಿದ ಬಳಿಕ ಸ್ವಯಂ ಸೇವಾ ಕಿಯೋಸ್ಕ್ಗಳಲ್ಲಿ ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಬೇಕು. ಸೆನ್ಸರ್ ಮೂಲಕ ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಿದ ನಂತರ ವಿಮಾನ ಸಂಸ್ಥೆ ಸಿಬ್ಬಂದಿ ಬ್ಯಾಗ್ ಸ್ವೀಕರಿಸಲಿದ್ದಾರೆ. ರಾಜ್ಯಕ್ಕೆ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ವಿಮಾನ, ರೈಲು ಅಥವಾ ರಸ್ತೆ ಮೂಲಕ ಬರುವವರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಬೇಕು.
ಟ್ಯಾಕ್ಸಿ ಸೇವೆಯಲ್ಲಿ ಸುರಕ್ಷತೆಗೆ ಒತ್ತು: ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಸೇವೆ ನೀಡುವ ಚಾಲಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿ ಟ್ರಿಪ್ ಗೊಮ್ಮೆ ಥರ್ಮಲ್ ಸ್ಕ್ರೀನಿಂಗ್ ಒಳಗಾಗಬೇಕು. ಕ್ಯಾಬ್‌ನೊಳಗೆ ಸ್ವತ್ಛತೆ ಕಾಯ್ದುಕೊಳ್ಳಬೇಕು. ಸ್ವಯಂ ಚಾಲನೆ ಕಾರು ಹೊಂದಿರುವ ಪ್ರಯಾಣಿಕರು ಪಾರ್ಕಿಂಗ್ ಸ್ಥಳದ ಆಗಮನ ದ್ವಾರದಲ್ಲಿ ಯಂತ್ರದ ಮೂಲಕ ಟಿಕೆಟ್ ಪಡೆಯಬೇಕು. ಈ ಟಿಕೆಟ್‌ನಲ್ಲಿ ಸಮಯ ಹಾಗೂ ದಿನಾಂಕ ಇರುತ್ತದೆ. ನಿರ್ಗಮನದ ವೇಳೆ ಯಂತ್ರದ ಮೂಲಕ ಟಿಕೆಟ್ ಸ್ಕ್ಯಾನ್ ಮಾಡಬೇಕು. ಹಣಪಾವತಿಗೆ ಡಿಜಿಟೆಲ್, ಕಾರ್ಡ್ ಪಾವತಿಗೂ ಅವಕಾಶ ಕಲ್ಪಿಸಲಾಗಿದೆ.