ಮಧುಗಿರಿ: ಚುನಾವಣೆಯಲ್ಲಿ ಅಲ್ಪಸಂಖ್ಯಾತ ಬಂಧುಗಳಿಗೆ ನೀಡಿದ ವಾಗ್ದಾನದಂತೆ ಅವರುವಾಸಿಸುವ ಬಡಾವಣೆಗಳಿಗೆ ಸುಮಾರು 8 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುತ್ತೇನೆಂದು ಶಾಸಕ ಎಂ.ವಿ. ವೀರಭದ್ರಯ್ಯ ಭರವಸೆ ನೀಡಿದರು.
ಪಟ್ಟಣದ 1, 3, 4, 11, 7 ನೇ ವಾರ್ಡಿನಲ್ಲಿ 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದಲ್ಲಿ ಯುಜಿಡಿ ( ಒಳಚರಂಡಿ ಕಾಮಗಾರಿ ) ಅನುಷ್ಠಾನ ವಾಗುತ್ತಿದ್ದು, ಹೆಚ್ಚಿನ ರಸ್ತೆ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ಯುಜಿಡಿ ಕಾಮಗಾರಿ ನಡೆಯದ ಬೀದಿಗಳಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಮುಂದಾಗಿದ್ದೇವೆಂದರು.
ಶುದ್ಧ ನೀರಿನ ಘಟಕ ಸ್ಥಾಪನೆ:2 ಕೋಟಿ ರೂ. ವೆಚ್ಚದಲ್ಲಿ 5 ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಕುಡಿ ಯುವ ನೀರಿಗೆ 50 ಲಕ್ಷ ಅನುದಾನವಿದ್ದು ನೀರಿನ ಘಟಕ ಸ್ಥಾಪನೆ ಮಾಡಬಹುದಾಗಿದೆ. ಈಗಾ ಗಲೇ ಕ್ಷೇತ್ರದಲ್ಲಿ 300 ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿ ದ್ದು, ಮಳೆ ಉತ್ತಮವಾಗಿ ಬಂದರೆ ಎಲ್ಲದ ರಲ್ಲೂ ನೀರು ಜಿನುಗಲಿದೆ. ಇದೇ ನಿಗಮದಿಂದ ಮರುವೇ ಕೆರೆ, ಮಿಡಿಗೇಶಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಹೆಚ್ಚುವರಿಯಾಗಿ ಕೊಡಿಗೇನಹಳ್ಳಿ ಹಾಗೂ ಐ.ಡಿ. ಹಳ್ಳಿಯಲ್ಲೂ ಚಾಲನೆ ನೀಡ ಲಾಗುವುದೆಂದರು.
ಮುನ್ನೆಚ್ಚರಿಕೆ: ಹಿಂದಿನ ಮುಖ್ಯಾಧಿಕಾರಿ ಲೋಹಿತ್ ಮಾಡಿದ ಮಳೆಕೊಯ್ಲು ಕಾಮಗಾರಿ ಯಿಂದ ಹಲವಾರು ಕೊಳವೆ ಬಾವಿಗೆ ಮತ್ತೆ ನೀರಿನ ಒರತೆ ಲಭ್ಯವಾಗಿದೆ. ಇದೇ ರೀತಿ ಕ್ಷೇತ್ರದಲ್ಲಿ ನೀರು ಇಂಗುವ ಕಾಮಗಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ನೂರಾರು ಚೆಕ್‌ಡ್ಯಾಂ ನಿರ್ಮಾಣ ಮಾಡಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ಸದಸ್ಯ ಆನಂದ ಪುಟ್ಟಮ್ಮ ಮಾತನಾಡಿ, ಬೇರೆ ವಾರ್ಡಿಗೆ ಸೇರಿದಂತೆ ತನ್ನ ವಾರ್ಡಿಗೂ ಪಕ್ಷಬೇಧ ಮರೆತು ಅನುದಾನ ನೀಡಿರುವ ಶಾಸಕರಿಗೆ ಅಭಿನಂದನೆಗಳು. ಹಾಗೂ ಇಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಇಲ್ಲಿ ಬಡವರು ನಿರ್ಮಿಸಿ ಕೊಳ್ಳುತ್ತಿರುವ ವಸತಿ ಮನೆಗಳ ಅನುದಾನ ಅರ್ಧಕ್ಕೆ ನಿಂತಿದ್ದು, ಅನುದಾನ ಬಿಡುಗಡೆ ಮಾಡಿಸಿ ಕೊಡುವಂತೆ ಮನವಿ ಸಲ್ಲಿಸಿದ್ದೇನೆ. ಶಾಸಕರು ಸರಿಪಡಿಸುವ ಭರವಸೆ ನೀಡಿದ್ದಾರೆಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಂದೀಶ್, ಪುರಸಭೆ ಮಾಜಿ ಸದಸ್ಯೆ ಸಲೀಂವುನ್ನೀಸಾ, ಅಹ್ಮದ್, ತಾಪಂ ಸದಸ್ಯ ನಾಗಭೂಷಣ್, ಜೆಡಿಎಸ್ ಮುಖಂಡರಾದ ಡಾ.ಶಿವಕುಮಾರ್, ತಾಸು, ದಾದು, ಇಲಿಯಾಜ್, ಜಮೀರ್, ಫಾಜಿಲ್, ಸಾದಿಕ್, ಜಬೀ, ಕಾಳೇಗೌಡ ಇದ್ದರು.