ಗುರುಮಠಕಲ್: ಜನರ ಬಿಸಿಲ ಬೇಗೆ ತಣಿಸಲು ತಾಲೂಕಿನ ಜೈಭೀಮ್ ಸಂಸ್ಥೆ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಕುಡಿವ ನೀರು ಒದಗಿಸಲು ಅರವಟ್ಟಿಗೆ ತೆರೆದಿದೆ. ಈ ಮೂಲಕ ಜನರ ದಾಹ ನೀಗಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಹೇಳಿದರು.
ಪಟ್ಟಣದಲ್ಲಿ ಜೈಭೀಮ್ ಸೇವಾ ಸಂಸ್ಥೆ ವತಿಯಿಂದ ಉಚಿತ ಶುದ್ಧ ಕುಡಿವ ನೀರಿನ ಅರವಟ್ಟಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗದಲ್ಲಿ ಬಿಸಿಲು ಹೆಚ್ಚಿರುವುದರಿಂದ ಕೆಲಸಕ್ಕಾಗಿ ಬಂದ ಗ್ರಾಮೀಣ ಜನರು ನೀರಿಗೆ ಪರದಾಡುತ್ತಿರುತ್ತಾರೆ. ಹೋಟೆಲ್‌ಗಳಲ್ಲಿ ತಿಂಡಿ, ಟೀ, ಕಾಫಿ ತೆಗೆದುಕೊಂಡರೆ ಮಾತ್ರ ನೀರು ಕೊಡುತ್ತಾರೆ. ಗ್ರಾಮೀಣ ಜನರ ಸಂಕಷ್ಟ ಅರ್ಥ ಮಾಡಿಕೊಂಡು ಟ್ರಸ್ಟ್ ವತಿಯಿಂದ ಶುದ್ಧ ಕುಡಿವ ನೀರನ್ನು ವರ್ಷದಲ್ಲಿ 3 ರಿಂದ 4 ತಿಂಗಳು ನಿರಂತರ ವಿತರಿಸುವ ಸಂಕಲ್ಪ ಸಂಸ್ಥೆಯವರು ಮಾಡಿದ್ದಾರೆ ಎಂದರು.
ಈ ವೇಳೆ ಸಂಸ್ಥೆ ಅಧ್ಯಕ್ಷ ಗುರುನಾಥ ತಲಾರಿ, ಶರಣು ಅವುಂಟಿ, ಪ್ರಕಾಶ ನಿರೇಟಿ, ಸಾಯಪ್ಪ ದಾಸರಿ, ರಾಘು ದಾಸರಿ, ಬಾಲು ದಾಸರಿ, ಪಯಾಜ್, ಅನ್ವರ್ ಹೈಮದ್, ವೆಂಕಟಪ್ಪ ಅವಂಗಾಪೂರ್, ಚಂದುಲಾಲ್ ಚೌದ್ರಿ, ಬಾಬು ತಲಾರಿ, ನಾಗೇಶ ಗದ್ದಿಗಿ, ಲಾಲಪ್ಪ ತಲಾರಿ, ಕಾಶಪ್ಪ ದೊರೆ, ನವಾಜರೆಡ್ಡಿ ಗವಿನೋಳ, ನರಸಿಂಹಲು ಗಂಗನೋಳ, ಅನೀಲ ಕುಮಾರ ಇದ್ದರು.