Advertisement

ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ

02:28 PM Apr 21, 2022 | Team Udayavani |

ಭಾಲ್ಕಿ: ತಾಲೂಕಿನ ವರವಟ್ಟಿ(ಬಿ) ಗ್ರಾಮದ ಪಿಕೆಪಿಎಸ್‌ ಉಪಕೇಂದ್ರದಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

Advertisement

ವರವಟ್ಟಿ(ಬಿ) ಗ್ರಾಮದ ಪ್ರಾಥಮಿಕ ಕೃಷಿ ಪತ್ರಿನ ಸಹಕಾರ ಸಂಘದ ಮೂಲ ಸ್ಥಾನ ನಾವದಗಿ ಗ್ರಾಮದಲ್ಲಿದೆ. ಹೀಗಾಗಿ ಪ್ರತಿವರ್ಷ ನೂರಾರು ರೈತರು ಬೆಳೆದ ಆಹಾರ ಧಾನ್ಯಗಳನ್ನು ನಾವದಗಿಯ ಪಿಕೆಪಿಎಸ್‌ಗೆ ತೆಗೆದಿಕೊಂಡು ಹೋಗಿ ಬೆಂಬಲ ಬೆಲೆಯಲ್ಲಿ ಮಾರಬೇಕಾಗಿತ್ತು. ಇದನ್ನು ಮನಗಂಡ ಶಾಸಕ ಈಶ್ವರ ಖಂಡ್ರೆಯವರು, ಗ್ರಾಮದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ವರವಟ್ಟಿ(ಬಿ) ಗ್ರಾಮಸ್ಥರು ಸ್ವ ಗ್ರಾಮದಲ್ಲಿನ ಪಿಕೆಪಿಎಸ್‌ ಉಪಕೇಂದ್ರದಲ್ಲಿಯೇ ಖರೀದಿ ಕೇಂದ್ರ ನಡೆಸುವಂತೆ ಸೂಚಿಸಿದರು.

ಶಾಸಕರ ಆದೇಶದಂತೆ ಬುಧವಾರದಿಂದಲೇ ವರವಟ್ಟಿ(ಬಿ)ನಲ್ಲಿ ಖರೀದಿ ಕೇಂದ್ರ ಆರಂಭವಾಗಿದೆ. ಈ ಸಂದರ್ಭದಲ್ಲಿ ಪಿಕೆಪಿಎಸ್‌ ಅಧ್ಯಕ್ಷ ಬಾಲಾಜಿ ಶೇಡೊಳೆ, ನಿರ್ದೇಶಕರಾದ ಶಿವಾಜಿರಾವ ಹುಲಸೂರೆ, ಸಂತೋಷ ರಾಜೋಳೆ, ದಯನಂದ ರವಬಾವೆಳೆ, ವಿಜಯಕುಮಾರ ನಿರಗುಡೆ, ಸುರೇಶ ನಾವದಗೆ, ಅರ್ಜುನ ಬೆಲ್ಲಾಳೆ, ಶೆಕಾವತ ಪಟೇಲ, ಪ್ರಮುಖರಾದ ಪ್ರದೀಪ ಪಾಟೀಲ, ಸುರೇಶ ನಿರುಗಡೆ, ಶತ್ರುಘನ ಬಿರಾದಾರ, ಭಜರಂಗ ಮಾನ, ನರಸಿಂಗರಾವ ನಿರಗುಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next