ಹಾಸನ: ಬೆಂಗಳೂರು, ಮೈಸೂರು ಮತ್ತು ಬೆಂಗಳೂರಿಗೆ ಹಾಸನದ ಮೂಲಕ ಸಂಚರಿ ಸುತ್ತಿದ್ದ ರೈಲುಗಳನ್ನು ಪುನಾರಂಭಿಸಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಮುಕ್ತಾಯವಾಗಿದ್ದು ಜನ ಜೀವನ ಸಹಜ ಸ್ಥಿತಿಗೆ ಬಂದಿದೆ.
ಈಗಾಗಲೇ ಬೆಳಗಾವಿ – ಬೆಂಗಳೂರು, ಶಿವಮೊಗ್ಗ – ಬೆಂಗಳೂರು ನಡುವೆ ರೈಲುಗಳ ಸಂಚಾರ ಆರಂಭವಾಗಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜಿಲ್ಲೆಗಳಿಂದ ಮಾತ್ರ ಈಗ ರೈಲುಗಳು ರಾಜಧಾನಿ ಬೆಂಗಳೂರಿಗೆ ಸಂಚರಿಸುತ್ತಿವೆ. ಹಾಗೆಯೇ ಹಾಸನದಿಂದಲೂ ಬೆಂಗಳೂರು, ಮೈಸೂರು ಮತ್ತು ಬೆಂಗಳೂರಿಗೆ ರೈಲುಗಳ ಸಂಚಾರ ಆರಂಭಿಸಬೇಕು ಎಂದರು.
ಬಸ್ ಪ್ರಯಾಣ ದರ ದುಬಾರಿ: ಹಾಸನ – ಬೆಂಗಳೂರು, ಅರಸೀಕೆರೆ – ಮೈಸೂರು, ಮಂಗಳೂರು – ಬೆಂಗಳೂರು ನಡುವೆ ರೈಲು ಗಳ ಸಂಚಾರವನ್ನು ಆರಂಭಿಸುವುದರಿಂದ ಜನ ಸಾಮಾನ್ಯರ ಸಂಚಾರಕ್ಕೆ ಅನುಕೂಲ ವಾಗುತ್ತದೆ. ಬಸ್ ಪ್ರಯಾಣ ದರ ದುಬಾರಿಯಾಗಿದೆ. ರೈಲುಗಳಲ್ಲಿ ಕಡಿಮೆ ದರದಲ್ಲಿ ಸಂಚರಿಸಬಹುದು. ಬಸ್ಸುಗಳಿಗಿಂತಲೂ ರೈಲು ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂಚರಿಸುವುದು ಸುಲಭ. ಹಾಗಾಗಿ ರೈಲುಗಳ ಸಂಚಾರ ಆರಂಭಿಸಬೇಕು . ಈ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ತಾವು ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿಯೂ ಹೇಳಿದರು.
ಹಾಸನದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಯನ್ನು ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದ ರೇವಣ್ಣ ಅವರು ಬಿ.ಎಂ.ರಸ್ತೆಯ ಹಾಸನ ಡೇರಿ ಸಮೀಪ ಹಾಗೂ ಹಾಸನ – ಗೊರೂರು ರಸ್ತೆ ಸಂತೆಪೇಟೆಯ ರೈಲ್ವೆ ಮೇಲ್ಸೇ ತುವೆಗಳನ್ನು ವಿಸ್ತರಿಸಬೇಕು ಎಂದರು. ರೈತರು ಬಿತ್ತನೆ ಮಾಡಿರುವ ಆಲೂಗೆಡ್ಡೆ ನಾಶವಾಗಿರುವ ದೂರುಗಳ ಬಗ್ಗೆ ತಕ್ಷಣ ಪರಿಶೀಲಿಸಿ ವರದಿ ಸಿದಟಛಿಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಶಾಲೆಗಳ ಮುಚ್ಚಿಸುವ ಹುನ್ನಾರ: ರಾಜ್ಯದಲ್ಲಿ ಖಾಸಗಿ ಶಾಲೆಗಳ ಲಾಬಿ ಹೆಚ್ಚು ತ್ತಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖಾಸಗಿ ಶಾಲೆಗಳ ಮುಖ್ಯಸ್ಥರ ಸಲಹೆ ಕೇಳಿ ನಿರ್ಧಾರ ತೆಗೆದುಕೊಳ್ಳುವ ಮಟ್ಟದಲ್ಲಿದ್ದಾರೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಿಸುವ ಹುನ್ನಾರ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಮುಂದಿನ 3 ವರ್ಷದ ಅಧಿಕಾರವಧಿಯಲ್ಲಿ ರಾಜ್ಯದ ಶೇ. 90ರಷ್ಟು ಸರ್ಕಾರಿ ಪ್ರಾಥಮಿಕ ಶಾಲೆ ಗಳು ಮಚ್ಚಿದರೂ ಅಚ್ಚರಿಯಿಲ್ಲ ಎಂದರು.