Advertisement

Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ

11:35 AM Nov 07, 2024 | Team Udayavani |

ಹುಬ್ಬಳ್ಳಿ: ಕಬ್ಬು ಕಟಾವು ಕಾರ್ಯವನ್ನು ಈ ಹಂಗಾಮಿನಲ್ಲಿ ಏಳು ದಿನಗಳ ಮುಂಚೆ ಆರಂಭಿಸಲು ನಿರ್ಧರಿಸಿದ್ದು, ನ.8 ರಿಂದ ಕಟಾವು ಕಾರ್ಯ ಆರಂಭವಾಗಲಿದೆ. ಈ ಹಿಂದೆ ನ.15 ಕಟಾವಿಗೆ ದಿನ ನಿಗದಿ ಮಾಡಲಾಗಿತ್ತು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಭಾಗದಲ್ಲಿ ಜುಲೈ ತಿಂಗಳಿನಿಂದ ಕಟಾವು ನಡೆಯುತ್ತಿದೆ. ನ.8 ಉತ್ತರ ಕರ್ನಾಟಕ ಭಾಗಕ್ಕೆ ಅನ್ವಯಿಸಲಿದೆ. ಆದರೆ ಇಲ್ಲಿನ ರೈತರು ಹಾಗೂ ಕಾರ್ಖಾನೆ ಮಾಲೀಕರು ಕಟಾವು ಆರಂಭಿಸಲು ಮನವಿ ಮಾಡಿದ ಮೇರೆಗೆ ನಿಗದಿ ಪೂರ್ವದಲ್ಲೇ ಕಟಾವು ಆರಂಭಿಸಲಾಗುತ್ತಿದೆ. ಹಿಂದಿನ ವರ್ಷ 3150 ರೂ ಪ್ರತಿ ಟನ್ ಬೆಂಬಲ ಬೆಲೆಯಿತ್ತು. ಈ ವರ್ಷ 3400ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಏಕಕಾಲಕ್ಕೆ ಕಟಾವು ಆರಂಭವಾಗುತ್ತಿತ್ತು. ಈ ಬಾರಿ ದಿನಾಂಕ ಬದಲು ಮಾಡಿದ ಕಾರಣ ಮಹಾರಾಷ್ಟ್ರ ಸರಕಾರಕ್ಕೂ ನಾವು ನಿಗದಿ ಮಾಡಿದ ದಿನದ ಬಗ್ಗೆ ಮನವಿ ಮಾಡಲಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಅವರು ದಿನ ಬದಲು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯಾದ್ಯಂತ 80 ಕಾರ್ಖಾನೆಗಳು ಕಬ್ಬು ಅರೆಯಲಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next