ಮಂಡ್ಯ: ತೀವ್ರ ಮಳೆಯಿಂದ ಉಂಟಾಗಿರುವ ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಕಟ್ಟಡಗಳ ದುರಸ್ತಿ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೀಘ್ರ ಪ್ರಾರಂಭಿಸಿ: ಮಳೆಯಿಂದ ಹಾನಿಯಾಗಿರುವ 260 ಶಾಲೆ ಪೈಕಿ 233 ಶಾಲೆ ದುರಸ್ತಿ ಕಾಮಗಾರಿಗೆ ಎಸ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 466 ಲಕ್ಷ ರೂ., 36 ಆಸ್ಪತ್ರೆಗಳ ಪೈಕಿ 25 ಆಸ್ಪತ್ರೆ ದುರಸ್ತಿಗೆ 50 ಲಕ್ಷ ರೂ.ಗೆ ಅನುಮೋದನೆ ನೀಡಲಾಗಿದೆ. ಕಾಮಗಾರಿ ಅನುಷ್ಠಾನ ಮಾಡುವ ಇಲಾಖೆ, ಸಂಸ್ಥೆ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದರು.
ಸಚಿವರ ಗಮನಕ್ಕೆ ತನ್ನಿ: ಮಳೆ ಹಾನಿ ರಸ್ತೆ, ಸೇತು ವೆ, ಪೈಪ್‌ಲೈನ್, ಕೆರೆ ಮುಂತಾದ ಸ್ಥಳಗಳಲ್ಲಿ ತಾ ತ್ಕಾಲಿಕ ಕಾಮ ಗಾರಿ ಕೈಗೊಳ್ಳಲಾಗಿದೆ. ಶಾಶ್ವತ ಕಾಮ ಗಾರಿಗೆ ಸರ್ಕಾರ ಅಥವಾ ಕೇಂದ್ರ ಕಚೇರಿಗೆ ಬರೆದಿ ರುವ ಪತ್ರಗಳ ಬಗ್ಗೆ ಹಿರಿಯ ಅಧಿಕಾರಿಗಳು, ಸಚಿವರ ಗಮನಕ್ಕೆ ತರಲು ತಿಳಿಸಿದರು. ಪಾವತಿ: ಮನೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆ ಯಲ್ಲಿ 571 ಮನೆಗೆ ಹಾನಿಯಾಗಿದ್ದು, 361 ಮನೆ ಪರಿಹಾರ ಪಾವತಿ ಮಾಡಲಾಗಿದೆ. 210 ಮನೆಗಳ ಪರಿಹಾರ ಪಾವತಿ ಬಾಕಿ ಇದೆ. ಪರಿಹಾರ ಪಾವತಿ ಮಾಡಲು ತಾಲೂಕುಗಳಲ್ಲಿ ಬೇಕಿರುವ ಅನುದಾನದ ವರದಿ ಪಡೆದು ಬಿಡುಗಡೆ ಮಾಡಲಾಗುವುದು. ಪರಿಹಾರ ಹಣವನ್ನು ಶೀಘ್ರ ಪಾವತಿ ಮಾಡಬೇಕೆಂದರು. ಪಿಡಬ್ಲ್ಯುಡಿ ಇಲಾಖೆ ವತಿಯಿಂದ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ಅಂದಾಜು 91.70 ಲಕ್ಷ ರೂ.ಗಳ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು.
ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪ ವಿಭಾಗಾಧಿಕಾರಿಗಳಾದ ಎಚ್.ಎಸ್. ಕೀರ್ತನಾ, ಅಹಮದ್ ಅಕ್ರಮ್ ಷಾ, ಜಿಲ್ಲಾಧಿ ಕಾರಿಗಳ ಕಚೇರಿ ಸಹಾಯಕ ಸ್ವಾಮಿಗೌಡ, ಇತರೆ ಇಲಾಖೆಗಳ ಅಧಿಕಾರಿಗಳಿದ್ದರು.