Advertisement
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಿಟ್ಟುಸಿರಿನ ಸಂಭ್ರಮವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. “ಅಮೆರಿಕ ¨ ಲ್ಲಿ ಮೊದಲ ಲಸಿಕೆ ನೀಡುವಿಕೆ ಶುರುವಾಗಿದೆ. ಅಮೆರಿ ಕನ್ನರಿಗೆ ವಂದನೆ ಗಳು, ಜಗತ್ತಿಗೂ ಶುಭಾಶಯಗಳು’ ಎಂದು ಟ್ರಂಪ್ ಟ್ವೀಟಿಸಿದ್ದಾರೆ.
ಚೆನ್ನೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್‌ನ ಕ್ಯಾಂಪಸ್‌ನಲ್ಲಿ 104 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳು. ಹೀಗಾಗಿ, ಕ್ಯಾಂಪಸ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಐಟಿ ಕ್ಯಾಂಪಸ್‌ನಲ್ಲಿ ಡಿ.1 ರಿಂದ 12ರ ವರೆಗೆ 444 ಸ್ಯಾಂಪಲ್‌ಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 104 ಮಂದಿಗೆ ಸೋಂಕು ದೃಢಪಟ್ಟಿದೆ. ಪ್ರಾಧ್ಯಾಪಕರಿಗೆ ಮತ್ತು ಇತರ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ.