Advertisement

ತಿನ್ನೆಘಾಟ ಅಖೇತಿ ಕೂಡು ರಸ್ತೆ ಕಾಮಗಾರಿ ಆರಂಭ

07:48 PM Jan 25, 2021 | Team Udayavani |

ಜೋಯಿಡಾ: ತಾಲೂಕಿನ ತಿನ್ನೆಘಾಟ ಅಖೇತಿ ಹದಗೆಟ್ಟಿದ್ದ ಕೂಡು ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಆರಂಭಿಸಿದೆ. ಆದರೆ ರಾಮನಗರ ಅನಮೋಡ ಸಂಚಾರದ ಎಲ್ಲಾ ವಾಹನಗಳು ಇಲ್ಲಿಂದಲ್ಲೆ ಸಂಚರಿಸುವುದರಿಂದ ಕಾಮಗಾರಿಗೆ ತೊಡಕುಂಟಾಗುತ್ತಿದೆ.

Advertisement

ಬೆಳಗಾವಿ ಗೋವಾ ರಾಷ್ಟ್ರೀಯ ಹೆದ್ದಾರಿ ರಾಮನಗರದಿಂದಅನಮೋಡ ವರೆಗೆ ಅಗಲಿಕರಣ ಕಾಮಗಾರಿ ಆರಂಭಗೊಂಡಂದಿನಿಂದ ಈ ಹೆದ್ದಾರಿ ಮೇಲೆ ಓಡಾಡುವ  ಎಲ್ಲಾ ವಾಹನಗಳು ಬೈಪಾಸ್‌ ರಸ್ತೆಯಾದ ಅಖೇತಿ-ತಿನ್ನೆಘಾಟ ಗ್ರಾಮೀಣ ರಸ್ತೆಯನ್ನೇ ಅವಲಂಬಿಸಿ ಸಂಚರಿಸಿದ್ದರ ಪರಿಣಾಮ ಈ ರಸ್ತೆ ಸಂಪೂರ್ಣ ಹಾಳಾಗಿ ಹೋಗಿತ್ತು.

ಇದನ್ನೂ ಓದಿ:ಸೋಡಿಗದ್ದೆ ಜಾತ್ರೆಯಲ್ಲಿ ಕೆಂಡ ಸೇವೆ

ಈ ಬಗ್ಗೆ ಸ್ಥಳೀಯರು ಹಾಗೂ ಪತ್ರಿಕೆಗಳು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಅಖೇತಿ-ತಿನ್ನೆಘಾಟ ಹೊಸ ರಸ್ತೆ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ. ಆದರೆ ಈ ಮಾರ್ಗದ ಮೂಲಕ ಸಂಚರಿಸುವ ಬೃಹತ್‌ ವಾಹನಗಳ ದಟ್ಟಣೆ ಮಾತ್ರ ನಿಲ್ಲುತ್ತಿಲ್ಲ. ಇದರಿಂದಾಗಿ ರಸ್ತೆಕಾಮಗಾರಿ ನಡೆಸಲು ಕಷ್ಟಕರವಾಗುತ್ತಿದೆ ಎನುವ ಗೋಳಿ ಗುತ್ತಿಗೆದಾರನದಾಗಿದ್ದು, ಕೂಡಲೆ ಈ ಬಗ್ಗೆ ಇಲಾಖೆ ಕ್ರಮಕೈಗೊಂಡು ಸ್ಥಳಿಯರಿಗೆ ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next