ಅಂಕೋಲಾ: ಸಿಬರ್ಡ್ ನೌಕಾನೆಲೆ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಹೊನ್ನಳ್ಳಿ ಗಂಗಾವಳಿ ನದಿ ಕಿಂಡಿ ಅಣೆಕಟ್ಟು ಯೋಜನೆ ಸ್ಥಳೀಯರ ವಿರೋಧದ ನಡುವೆಯು ಕಾಮಗಾರಿ ಆರಂಭವಾಗಿದೆ.
ಸುಮಾರು 158.60ಲಕ್ಷ ರೂಗಳ ಯೋಜನೆ ಇದಾಗಿದ್ದು ಮಹಾರಾಷ್ಟ್ರದ ಸ್ವಾಮಿ ಸಮರ್ಥ ಕಂಪನಿ ಕಾಮಗಾರಿ ಕೈಗೆತ್ತಿಕೊಂಡಿದೆ. 7ಮೀ ಎತ್ತರದ ಕಿಂಡಿ ಅಣೆಕಟ್ಟಿನ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿ ನಡೆಯುವ ಸ್ಥಳಕ್ಕೆ ಸಾಮಾಗ್ರಿ ಮತ್ತು ಯಂತ್ರೋಪಕರಣಗಳನ್ನು ತಂದಿರಿಸಲಾಗಿದೆ. ಯೋಜನಾ ಪ್ರದೇಶದ ಲೈನ್‌ಔಟ್ ಮುಗಿದಿದ್ದು ಸುತ್ತಲಿನ ಪ್ರದೇಶದ ಗಡಿ ಗುರುತಿಸುವ ಸರ್ವೇ ಕಾರ್ಯ ನಡೆಯುತ್ತಿದೆ.
ಈ ಯೋಜನೆಯಿಂದ ಅಂಕೋಲಾ ಮತ್ತು ಕಾರವಾರ ತಾಲೂಕಿನ 12 ಗ್ರಾಪಂಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಜೊತೆಗೆ ಸೀಬರ್ಡ್ ನೌಕಾನೆಲೆ ಪ್ರದೇಶಕ್ಕೂ ನೀರಿನ ಸರಬರಾಜು ಆಗುತ್ತದೆ.
ಯೋಜನೆಗೆ ಭಾರೀ ವಿರೋಧ: ಅಗಸೂರು, ವಾಸರಕುದ್ರಿಗೆ, ಹಿಲ್ಲೂರು, ಅಚವೆ, ಮೊಗಟಾ, ಸುಂಕಸಾಳ, ಡೊಂಗ್ರಿ ಭಾಗದ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧಿಸಿದ್ದರು. ವರ್ಷಂಪ್ರತಿ ಮಳೆ ಬಂದಾಗಲೂ ಅನೇಕ ಗ್ರಾಮಗಳು ಗಂಗಾವಳಿ ನದಿ ನೀರಿನಿಂದ ಜಲಾವ್ರತ್ತಗೊಳ್ಳುತ್ತವೆ. ಪ್ರಸಕ್ತ ಸಾಲಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ನೆರೆ ಬಂದಾಗ ರಾಷ್ಟ್ರೀಯ ಹೆದ್ದಾರಿಯಿಂದ ಹಿಡಿದು ಅನೇಕ ಹಳ್ಳಿಗಳ ರಸ್ತೆಗಳು ಸ್ಥಗಿತಗೊಂಡು ಸುತ್ತಮುತ್ತಲಿನ ಗ್ರಾಮದ ಜನತೆ ನಡುಗಡ್ಡೆಯಲ್ಲಿ ವಾಸಿಸು ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದಲ್ಲಿ ಅಗಸೂರಿಗಿಂತ ಮೇಲ್ಭಾಗದಲ್ಲಿ ಇರುವ ಗ್ರಾಮಗಳು ಜಲಾವ್ರತ್ತಗೊಳ್ಳಬಹು¨
ಇದನ್ನೂ ಓದಿ:ಶಾಲೆ ಆರಂಭಿಸದಿದ್ದರೆ ಸಮಾರಂಭಕ್ಕೆ ಬಾಡಿಗೆ!
ಹೊನ್ನಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟು ಯೋಜನೆ ಅಪಾಯಕಾರಿ ಮತ್ತು ಅವೈಜ್ಞಾನಿಕ ಯೋಜನೆ. ಈ ಯೋಜನೆ ವಿರುದ್ಧ ನ್ಯಾಯಾಲಯದ ಮೊರೆ ಹೊಗಿದ್ದೇವೆ. 2008ರಲ್ಲಿ ಜಿ.ಪಂ ಸಭೆಯಲ್ಲಿ ಯೋಜನೆ ಕೈ ಬಿಡಬೇಕು ಎಂದು ಒಕ್ಕೊರೊಲ ನಿರ್ಣಯ ಮಾಡಿ ಸರಕಾರಕ್ಕೂ ಪತ್ರ ಬರೆಯಲಾಗಿದೆ. ಅದಾಗಿಯೂ ಯೋಜನೆ ಮುಂದುವರೆಸಿದ್ದಾರೆ. ಪಂಚಾಯತ್ ಚುನಾವಣೆ ಬಳಿಕ ಯೋಜನಾ ಸ್ಥಳದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು.
ಜಿ.ಎಂ. ಶೆಟ್ಟಿ, ಜಿ.ಪಂ ಮಾಜಿ ಸದಸ
ಅರುಣ ಶೆಟ್ಟಿ