Advertisement
ದೇಶದ ಮೊದಲ ಸರ ಕಾರಿ ಮಾಂಟೆಸ್ಸರಿ ತರಗತಿಗೆ ಬೆಂಗಳೂರಿನ ಪಟ್ಟೆಗಾರ ಪಾಳ್ಯದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತ ನಾಡಿದರು.ಮೊದಲ ಹಂತದಲ್ಲಿ ಬೆಂಗಳೂರಿನ 250, ರಾಜ್ಯದ ಉಳಿದ ಭಾಗಗಳಲ್ಲಿ 5 ಸಾವಿರ ಅಂಗನವಾಡಿಗಳಲ್ಲಿ ಸರಕಾರಿ ಮಾಂಟೆಸ್ಸರಿ ಆರಂಭಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಶಿಕ್ಷಣ ಇಲಾಖೆಯಿಂದ ಆರಂಭಿಸುವ ಯೋಜನೆ ಇತ್ತು. ಅದಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಆಕ್ಷೇಪವಿತ್ತು. ಅವರ ಒತ್ತಡದಿಂದಾಗಿಯೇ ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಇಂದಿರಾ ಗಾಂಧಿ ಅವರು 49 ವರ್ಷಗಳ ಹಿಂದೆ ಮಕ್ಕಳಿಗೆ ಪೌಷ್ಟಿಕ ಆಹಾರ, ಆಟದ ಜತೆಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ದೇಶದಲ್ಲಿ ಮೊದಲ ಬಾರಿಗೆ ಮೈಸೂರಿನ ಟಿ. ನರಸೀಪುರದಲ್ಲಿ ಅಂಗನವಾಡಿಯನ್ನು ಪ್ರಾರಂಭಿಸಿದ್ದರು. ಅದೇ ಇತಿಹಾಸ ಮರುಕಳಿಸುತ್ತಿದೆ ಎಂದು ಹೇಳಿದರು. ಸುಮಾರು 5 ದಶಕಗಳ ಕಾಲ ಚಾಲ್ತಿಯಲ್ಲಿದ್ದ ಅಂಗನವಾಡಿಗೆ ಈಗ ಸರಕಾರಿ ಮಾಂಟೆಸ್ಸರಿ ಎಂದು ಮರುನಾಮಕರಣ ಮಾಡಲಾಗಿದೆ. ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ಸರಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗಿದೆ ಎಂದರು.
Related Articles
ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯಾದರೆ ಆಯಾಯ ಜಿಲ್ಲೆಗಳ ಡಿಡಿ, ಸಿಡಿಪಿಒಗಳನ್ನು ಅಮಾನತು ಮಾಡಲಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ನಮ್ಮ ಸರಕಾರ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ಇದಕ್ಕೆ ತಕ್ಕಂತೆ ನಿಮ್ಮ ಕೌಶಲ ಹೆಚ್ಚಿಸಿಕೊಂಡು, ಗುಣಮಟ್ಟದ ಶಿಕ್ಷಣ ನೀಡಲು ಸನ್ನದ್ದರಾಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಅಂಗನವಾಡಿ ಕಾರ್ಯಕರ್ತರಿಗೆ ಸಲಹೆ ನೀಡಿದರು.
Advertisement
ವಿಶೇಷಗಳೇನು?ಮಕ್ಕಳಿಗೆ ಒಂದು ಜತೆ ಸಮವಸ್ತ್ರ, ಬ್ಯಾಗ್, ಪೆನ್ಸಿಲ್ ಬಾಕ್ಸ್ ಕೊಡಲಾಗುತ್ತದೆ
ಮುಂದಿನ ಶಿಕ್ಷಣಕ್ಕೆ ನೆರವಾಗಲು ಯುಕೆಜಿ ಮುಗಿದ ಕೂಡಲೇ ಟಿ.ಸಿ. ವಿತರಣೆ
ಪಿಯು, ಪದವಿ, ತರಬೇತಾದ ಕಾರ್ಯಕರ್ತೆಯರ ನೇಮಕ