Advertisement

ಅಂಗನವಾಡಿಯಿಂದಲೇ ಆಂಗ್ಲ ಮಾಧ್ಯಮ ಆರಂಭಿಸಿ

01:29 PM Jul 08, 2019 | Team Udayavani |

ಶಿರಾ: ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್‌ ಮೀಡಿಯಂ ಯೋಜನೆ ಅಂಗನವಾಡಿಗಳ ಮೂಲಕವೇ ಕಾರ್ಯಗತಗೊಳಿಸಲಿ ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

Advertisement

ಕಾರ್ಯಕರ್ತೆ ಕಲಾವತಮ್ಮ ರಾಷ್ಟ್ರೀಯ ಶಿಶು ಅಭಿವೃದ್ಧಿ ಯೋಜನೆ ಕಳೆದ 40 ವರ್ಷದಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಯೋಜನೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಕಲಿಸಲು ತಕ್ಕ ಮಟ್ಟಿನ ಜ್ಞಾನ ಹೊಂದಿದ್ದಾರೆ. ತರಬೇತಿ ನೀಡಿ, ಈಗ ನೀಡುತ್ತಿರುವ ವೇತನ ಮೊದಲಾದ ಸೌಲಭ್ಯ ಸ್ವಲ್ಪ ಹೆಚ್ಚಿಸುವ ಮೂಲಕ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯವಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಸಂಘದ ಸದಸ್ಯೆ ಸರಳಾದೇವಿ ಮಾತ ನಾಡಿ, ಎಲ್ಕೆಜಿಗೆ ಸೇರಿಸಲು ಮಗುವಿಗೆ 3 ವರ್ಷ 10 ತಿಂಗಳಾಗಬೇಕಿದ್ದು, ನಾವು 3 ವರ್ಷಕ್ಕೆ ಮಕ್ಕಳನ್ನು ಅಂಗನವಾಡಿಗೆ ಸೇರಿಸಿಕೊಳ್ಳುತ್ತೇವೆ. ಅಂಗನವಾಡಿಗಳ ಬಗ್ಗೆ ಕೀಳರಿಮೆ ಹೋಗಲಾಡಿಸಲು, ಅವುಗಳಲ್ಲೇ ಎಲ್ಕೆಜಿ ಮತ್ತು ಯುಕೆಜಿ ಅಭ್ಯಾಸಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ವಿವಿಧ ಬೇಡಿಕೆ ಈಡೇರಿಸುವಂತೆ ಚುನಾವಣಾ ಶಿರಸ್ತೆದಾರ್‌ ಲಕ್ಷಿ ್ಮೕಕಾಂತ್‌ಗೆ ಮನವಿ ಸಲ್ಲಿಸಲಾಯಿತು. ಎಐಟಿಯುಸಿಯ ವಿವಿಧ ಪದಾಧಿಕಾರಿಗಳು, ನೂರಾರು ಕಾರ್ಯಕರ್ತೆಯರು, ಸಹಾಯಕಿ ಯರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next