Advertisement

ಸ್ಟಾರ್ಟ್‌ ಆ್ಯಕ್ಷನ್‌!: ರಿಸೆಷನ್‌ನಲ್ಲಿ ಶುರುವಾದ ಕಂಪನಿಗಳು

05:05 AM May 25, 2020 | Lakshmi GovindaRaj |

ಆರ್ಥಿಕತೆ ಸಂಕಷ್ಟದಲ್ಲಿರುವ ಸಮಯದಲ್ಲಿ, ಹಲವು ತೊಂದರೆಗಳು ಎದುರಾಗುತ್ತವೆ. ಅಚ್ಚರಿಯ ಸಂಗತಿಯೆಂದರೆ, ಇಂಥ ಸಂಕಷ್ಟದ ಸಮಯದಲ್ಲೇ ಅನೇಕ ಸಂಸ್ಥೆಗಳು ಹುಟ್ಟಿಕೊಂಡು, ಲಕ್ಷಾಂತರ ಉದ್ಯೋಗಗಳ ಸೃಷ್ಟಿಗೂ ಕಾರಣ  ಆಗಿವೆ. ಇಂದು ಇರುವ ಅನೇಕ ಬಹುರಾಷ್ಟ್ರೀಯ ಕಂಪನಿಗಳು, ಆರ್ಥಿಕ ಮಹಾಕುಸಿತದ ಸಮಯದಲ್ಲೇ ಸ್ಥಾಪನೆಯಾದವು ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಆ ಕಂಪನಿಗಳ ಹುಟ್ಟಿಕೊಂಡ ಸಂದರ್ಭ ಮತ್ತು ಅವುಗಳ ವಿವರ ಇಂತಿದೆ…

Advertisement

ಪ್ರಾಕ್ಟರ್‌ ಅಂಡ್‌ ಗ್ಯಾಂಬಲ್‌: ದಿನನಿತ್ಯ ನಾವು ಬಳಸುವ ಸೋಪು, ಟೂತ್‌ಪೇಸ್ಟ್, ಶ್ಯಾಂಪೂ ಮುಂತಾದ ಹತ್ತು ಹಲವು ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆ ಪ್ರಾಕ್ಟರ್‌ ಅಂಡ್‌ ಗ್ಯಾಂಬಲ. ಇದು, 18ನೇ ಶತಮಾನದಲ್ಲಿ, ಅಮೆರಿಕ ಕಂಡ  ಆರ್ಥಿಕ ಕುಸಿತದ ಸಮಯದಲ್ಲಿ ಸ್ಥಾಪನೆಗೊಂಡಿತ್ತು.  ಶುರುವಿನಲ್ಲಿ ಇದು ಸೋಪು ತಯಾರಿಕಾ ಸಂಸ್ಥೆಯಷ್ಟೇ ಆಗಿತ್ತು. ಆದರೆ ಇಂದು, ಜಗತ್ತಿನ ಅತಿದೊಡ್ಡ ಕನ್ಸೂಮರ್‌ ಗೂಡ್ಸ್ ತಯಾರಕ ಕಂಪನಿಯಾಗಿ ಬೆಳೆದು ನಿಂತಿದೆ. ಹೆಡ್‌  ಅಂಡ್‌ ಶೋಲ್ಡರ್ಸ್‌, ಟೈಡ್‌, ಜಿಲೆಟ್‌, ಓಲೇ ಮುಂತಾದ ಬ್ರ್ಯಾಂಡ್‌ಗಳು ಇದೇ ಸಂಸ್ಥೆಗೆ ಸೇರಿವೆ. 183  ರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆ, ಬಹಳಷ್ಟು ಆರ್ಥಿಕ ಕುಸಿತಗಳನ್ನು ಯಶಸ್ವಿಯಾಗಿ ಮೆಟ್ಟಿನಿಂತಿದೆ.

ಜನರಲ್‌ ಮೋಟಾರ್ಸ್‌: ಜಗತ್ತಿನ ಅತಿದೊಡ್ಡ ಅಟೊಮೊಬೈಲ್‌ ತಯಾರಕ ಸಂಸ್ಥೆ ಎನಿಸಿಕೊಂಡಿರುವ ಜನರಲ್‌ ಮೋಟಾರ್ಸ್‌ ಸ್ಥಾಪನೆಯಾಗಿದ್ದು, 1908ರಲ್ಲಿ. ಆಗ ಜಗತ್ತು ಆರ್ಥಿಕ ಮಹಾಕುಸಿತವನ್ನು ಎದುರಿಸುತ್ತಿದ್ದಿತು. ಆ ಸಮಯದಲ್ಲಿ ಕಂಪನಿ,  ಕಾರು ಮಾರಲು ಸಾಕಷ್ಟು ತೊಂದರೆಗಳನ್ನು ಎದುರಿಸಿತು. ಆದರೆ, ಆನಂತರದಲ್ಲಿ ಹತ್ತಾರು ಸಣ್ಣಪುಟ್ಟ ಕಾರುತಯಾರಕ ಕಂಪನಿಗಳನ್ನು ವಶಪಡಿಸಿಕೊಂಡು, ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿತು. ಭಾರತದಲ್ಲಿ ಈ ಸಂಸ್ಥೆ ಶೆವರೋಲೆಟ, ಓಪೆಲ್‌ ಮಾಡೆಲ್‌ನ ಕಾರುಗಳನ್ನು ಪರಿಚಯಿಸಿತ್ತು.

ಎಚ್‌ ಪಿ: “ದಿ ಗ್ರೇಟ್‌ ಡಿಪ್ರಷನ್‌’ ಎಂದೇ ಕುಖ್ಯಾತಿ ಪಡೆದ, 1937ರ ಆರ್ಥಿಕ ಮಹಾಕುಸಿತದ ಸಮಯದಲ್ಲೇ, ಎಚ್‌ಪಿ ಸಂಸ್ಥೆ ಸ್ಥಾಪನೆಯಾಗಿದ್ದು. ಕಂಪ್ಯೂಟರ್‌, ಪ್ರಿಂಟರ್‌ ಸೇರಿದಂತೆ, ಹಲವು ಎಲೆಕ್ಟ್ರಾನಿಕ್‌  ಉತ್ಪನ್ನಗಳನ್ನು ತಯಾರಿಸುವ  ಈ ಸಂಸ್ಥೆ, ಶುರುವಿನಲ್ಲಿ ರೇಡಿಯೊ ಆಸಿಲೇಟರ್‌ ಎನ್ನುವ ಉಪಕರಣವನ್ನು ತಯಾರಿಸುತ್ತಿತ್ತು. ಧ್ವನಿಗ್ರಹಣ ತಂತ್ರಜ್ಞಾನದಲ್ಲಿ ಬಳಸುವ ಉಪಕರಣಗಳ ಪರೀಕ್ಷೆಗಾಗಿ, ರೇಡಿಯೊ ಆಸಿಲೇಟರ್‌ ನ ಅಗತ್ಯವಿತ್ತು. ಎಚ್‌ ಪಿ ಸಂಸ್ಥೆ ಕಂಪ್ಯೂಟರ್‌ ಕ್ಷೇತ್ರಕ್ಕೆ ಕಾಲಿಟ್ಟಿದ್ದು, 1966ರಲ್ಲಿ.

ಮೈಕ್ರೊಸಾಫ್ಟ್‌: ಆಫೀಸು, ಶಾಲೆ, ಬ್ಯಾಂಕು, ಹೀಗೆ ಎಲ್ಲಾ ಕಡೆಗಳಲ್ಲಿ ಮೈಕ್ರೊಸಾಫ್ಟ್‌ ಕಂಪ್ಯೂಟರ್‌, ಆಪರೇಟಿಂಗ್‌ ಸಿಸ್ಟಂಗಳನ್ನು ನೋಡಬಹುದು. ಅದಿಲ್ಲದೇ ಕೆಲಸಗಳೇ ನಡೆಯುವುದಿಲ್ಲ. ಈ ಕಂಪನಿ ಸ್ಥಾಪನೆಗೊಂಡಿದ್ದು 1975ರಲ್ಲಿ.  ಆಗ ಅಮೆರಿಕದಲ್ಲಿ ರಿಸೆಷನ್‌ ಕಾಡುತ್ತಿತ್ತು. ಆರಂಭದಲ್ಲಿ ಸಾಫ್ಟ್‌ವೇರ್‌ ಮಾತ್ರ ತಯಾರಿಸುತ್ತಿದ್ದ ಸಂಸ್ಥೆ, ಐದು ವರ್ಷಗಳ ನಂತರ, ಮೊದಲ ಪರ್ಸನಲ್‌ ಕಂಪ್ಯೂಟರ್‌ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಇದರಿಂದ ಕಂಪನಿ  ಎಷ್ಟು ಲಾಭ ಸಂಪಾದಿಸಿತೆಂ ದರೆ, ಬಿಲ್‌ ಗೇಟ್ಸ್‌ ಇಂದು ಮೈಕ್ರೊ ಸಾಫ್ಟ್‌ ಮುಖ್ಯಸ್ಥನ ಹುದ್ದೆಯಿಂದ ಕೆಳಕ್ಕಿಳಿದಿದ್ದರೂ, ಜಗತ್ತಿನ ಎರಡನೇ ಅತಿದೊಡ್ಡ ಶ್ರೀಮಂತ ಎಂದು ಗುರುತಿಸಲ್ಪಡುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next