Advertisement

ರೈತ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿ

04:50 PM Nov 24, 2020 | Suhan S |

ಕೋಲಾರ: ದೇಶದ ಬೆನ್ನೆಲುಬು ರೈತರ ಸಮಗ್ರ ಏಳಿಗೆಗಾಗಿ ರೈತ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಡಿಯ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿ ಸ್ನೇಹಾ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

Advertisement

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಆ ಬಳಿಕ ಅಧಿಕಾರದಲ್ಲಿದ್ದಾಗ ರೈತರ ಸಮಸ್ಯೆ ಕಣ್ಣಿಗೆ ಕಾಣಿಸುವುದಿಲ್ಲ.ಇತ್ತೀಚಿನ ದಿನಗಳಲ್ಲಿ ಯಾವ ಕಾರಣಕ್ಕಾಗಿ ಜಾತಿಗೆ ಒಂದು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುತ್ತಿದ್ದಾರೆ ಎನ್ನುವುದು ಯಾರಿಗೂ ಅರ್ಥವಾಗದ ವಿಚಾರವೆಂದರು.

ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡಮಾತನಾಡಿ, ರೈತರ ಸಮಗ್ರ ಏಳಿಗೆಗಾಗಿರೈತ ಅಭಿವೃದ್ಧಿ ಪ್ರಾಧಿಕಾರವನ್ನುಮೊದಲು ಸರ್ಕಾರ ರಚನೆ ಮಾಡಲಿ. ಇದುವರೆಗಿನ ಸರ್ಕಾರಗಳು ರೈತರಅನುಕೂಲಕ್ಕಾಗಿ ಹೇಳಿಕೊಳ್ಳುವಂತಹಯಾವುದೇ ಕೆಲಸ ಮಾಡಿಕೊಟ್ಟಿಲ್ಲ.ಈಗಿನ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದಿದ್ದೇ ಆದಲ್ಲಿ ಜಾತಿಗೊಂದು ಅಭಿವೃದ್ಧಿ ಪ್ರಾಕಾರ ರಚಿಸುವ ಮುನ್ನ ರೈತರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಿ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸ್ನೇಹ, ಮನವಿಯನ್ನು ಕೂಡಲೇ ಸರ್ಕಾರಕ್ಕೆಕಳುಹಿಸುವ ಭರವಸೆ ನೀಡದರು. ತಾಲೂಕಾಧ್ಯಕ್ಷ ಈಕಂಬಳ್ಳಿ ಮಂಜು ನಾಥ್‌, ಬಂಗಾರಪೇಟೆ ತಾಲೂಕಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌, ಚಾಂದ್‌ ಪಾಷಾ, ನವಾಜ್‌, ಜಮೀರ್‌, ಕಿರಣ್‌, ಜಾವೇದ್‌, ಸ್ವಸ್ತಿಕ್‌ ಶಿವು, ಪೊಮ್ಮರಹಳ್ಳಿ ನವೀನ್‌ ಮತ್ತಿತರರಿದ್ದರು.

26ಕ್ಕೆ ಜಿಲ್ಲಾ ಬಂದ್‌: ರೈತಸಂಘ :

Advertisement

ಶ್ರೀನಿವಾಸಪುರ: ಕೇಂದ್ರ-ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಯಿಂದ ಕೃಷಿ ರಂಗ ದಿವಾಳಿಯಾಗುತ್ತಿದೆ ಎಂದು ಅಖೀಲ ಭಾರತ ಕ್ರಿಯಾ ಸಮಿತಿ ಮುಖಂಡ ಪಿ.ಆರ್‌.ಸೂರ್ಯನಾರಾಯಣ ವಿಷಾದಿಸಿದರು.

ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ, ಹಸಿರು ಸೇನೆ ಸಂಯಕ್ತಾಶ್ರಯದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆಗೆಮುನ್ನಮೋದಿಅವರುಸುಮಾರು ಬಹಿರಂಗ ಸಭೆಗಳಲ್ಲಿ ರೈತರನ್ನು ಉದ್ಧಾರ ಮಾಡುವುದಾಗಿ ಹೇಳಿ ರೈತರಿಗೆ ಮಾರಕವಾಗುವ ಸುಗ್ರೀವಾಜ್ಞೆ ಜಾರಿ ಮಾಡಿದ್ದಾರೆ. ಈ ಬಗ್ಗೆ ರೈತಪರಸಂಘಟನೆಗಳು ಈಗಾಗಲೇ ದೇಶವ್ಯಾಪ್ತಿ ಪ್ರತಿಭಟನೆ ನಡೆಸಿ ಖಂಡಿಸಿವೆ. ಹೀಗಾಗಿ ಸುಗ್ರೀವಾಜ್ಞೆ ಹಿಂಪಡೆಯಬೇಕೆಂದು  ಒತ್ತಾಯಿಸಿ ನ.26 ರಂದು ಅಖೀಲ ಭಾರತ ಬಂದ್‌ಕರೆಮೇರೆಗೆಜಿಲ್ಲೆಯನ್ನುಬಂದ್‌ ಮಾಡಲಾಗುತ್ತದೆ. ನ.27 ರಂದು ಜಿಲ್ಲಾ ಕೇಂದ್ರಗಳ ಕೇಂದ್ರ ಸರ್ಕಾರಿ ಕಚೇರಿಗಳ ಮುಂದೆ ಪಿಕೆಟಿಂಗ್‌ ನಡೆಸಲಾಗುತ್ತದೆ ಹೇಳಿದರು.

ರೈತ ಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷ ಎನ್‌.ಜಿ.ಶ್ರೀರಾಮರೆಡ್ಡಿ ಮಾತನಾಡಿ, ನ.26 ರಂದು ರೈತರ ಬೇಡಿಕೆಗಳಿಗಾಗಿ, ಸುಗ್ರೀವಾಜ್ಞೆ ಹಿಂತೆಗೆದುಕೊಳ್ಳ ಬೇಕೆಂದುಒತ್ತಾಯಿಸಿ ಬಂದ್‌ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 50 ಕಡೆ ಹಾಗೂ ತಾಲೂಕಿನಲ್ಲಿ 7 ಕಡೆ ರಾಜ್ಯ ಹೆದ್ದಾರಿ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.ಬಂದ್‌ದಿನ ಸಾರ್ವಜನಿಕರು ಸಹಕಾರ ನೀಡಬೇಕೆಂದರು.ಪಾತಕೋಟೆ ನವೀನ್‌ ಕುಮಾರ್‌, ನಂಜಪ್ಪ, ಎನ್‌ .ನಾಗಭೂಷಣ್‌, ಮಂಜುಳಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next