Advertisement

ವಾರದ ತಾರೆ: ಯಶಸ್ವಿ ಸಾಧಕ ಜೈಸ್ವಾಲ್‌

10:10 AM Feb 09, 2020 | mahesh |

ಭರವಸೆಯ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌. ಹೆಸರಿನಲ್ಲಿಯೇ ಯಶಸ್ವಿ ಇದೆ. ಕಿರಿಯ ವಯಸ್ಸಿನಲ್ಲಿಯೇ ಸಾಧನೆಯು ಉತ್ತುಂಗದಲ್ಲಿದೆ. ಪ್ರಸಕ್ತ ನಡೆಯುತ್ತಿರುವ ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಯಶಸ್ವಿ ಜೈಸ್ವಾಲ್‌ ಅತೀ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಮಂಗಳವಾರ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಅಜೇಯ 105 ರನ್‌ ಸಿಡಿಸಿದ್ದರು.

Advertisement

ಇವರ ಸಾಹಸದಿಂದ ಭಾರತೀಯರು 10 ವಿಕೆಟ್‌ ಜಯ ಸಾಧಿಸಿ ಫೈನಲ್‌ ಹಂತಕ್ಕೆ ಪ್ರವೇಶಿಸಿದರು. ಯಶಸ್ವಿ ಜೈಸ್ವಾಲ್‌ ಒಟ್ಟಾರೆ ಪ್ರಸಕ್ತ 19 ವಯೋಮಿತಿ ವಿಶ್ವಕಪ್‌ ಕೂಟದಲ್ಲಿ 5 ಇನಿಂಗ್ಸ್‌ನಿಂದ 312 ರನ್‌ ಬಾರಿಸಿದ್ದಾರೆ. 6 ಇನಿಂಗ್ಸ್‌ನಿಂದ 286 ರನ್‌ ಹೊಡೆದ ಶ್ರೀಲಂಕಾದ ರವಿಂದ್ರ ರಸಂತಾ 2ನೇ ಹಾಗೂ ದಕ್ಷಿಣ ಆಫ್ರಿಕಾದ ಬ್ರಿಸ್‌ ಪಾರ್ಸನ್ಸ್‌ 5 ಇನಿಂಗ್ಸ್‌ನಿಂದ 259 ರನ್‌ಗಳಿಸಿ ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್‌ ಬಾಲ್ಯದಿಂದಲೂ ಅದೆಷ್ಟೋ ಕಷ್ಟಗಳನ್ನು ಅನುಭವಿಸಿ ಇಂದು ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಯಶಸ್ವಿ ಜೈಸ್ವಾಲ್‌ ಉತ್ತರ ಪ್ರದೇಶದವರು. ಇವರ ತಂದೆ ಪಾನಿಪೂರಿ ವ್ಯಾಪಾರ ಮಾಡುತ್ತಾರೆ. ಬಿಡುವಿನಲ್ಲಿ ಯಶಸ್ವಿ ಜೈಸ್ವಾಲ್‌ ಕೂಡ ಅಪ್ಪನಿಗೆ ಸಹಾಯ ಮಾಡುತ್ತಾರೆ. ಈ ಹಿಂದೆ ವಿವಿಧ ಮಾಧ್ಯಮಗಳಲ್ಲಿ ಇದು ಭಾರೀ ಸುದ್ದಿಯಾಗಿದ್ದವು. ಸದ್ಯ ಮುಂಬೈ ಪರ ಕ್ರಿಕೆಟ್‌ ಆಡುತ್ತಿದ್ದಾರೆ. 1 ಪ್ರಥಮ ದರ್ಜೆ, 13 ಲಿಸ್ಟ್‌ ಎ ಕ್ರಿಕೆಟ್‌ ಕೂಟಗಳನ್ನು ಆಡಿದ್ದಾರೆ. ಈ ಸಾಧನೆಯಿಂದ 2020 ಐಪಿಎಲ್‌ ಟಿ20 ಕ್ರಿಕೆಟ್‌ ಕೂಟಕ್ಕೆ ಜೈಸ್ವಾಲ್‌ ಅವರನ್ನು 2.4 ಕೋಟಿ ರೂ.ಗೆ ರಾಜಸ್ಥಾನ್‌ ರಾಯಲ್ಸ್‌ ತಂಡ ಖರೀದಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next