Advertisement

ನಿಮ್ಮ ಕಾಲ ಮೇಲೆ ನಿಲ್ಲಿ: ಶರದ್‌ ಚಿತ್ರ ಬಳಸಿದ ಅಜಿತ್‌ಗೆ ಸುಪ್ರೀಂ ಚಾಟಿ

11:20 PM Nov 13, 2024 | Team Udayavani |

ಹೊಸದಿಲ್ಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಶರದ್‌ ಪವಾರ್‌ ಫೋಟೋ ಬಳಕೆ ಮಾಡದಂತೆ ಅಜಿತ್‌ ಪವಾರ್‌ ಬಣದ ಎನ್‌ಸಿಪಿಗೆ ಸೂಚಿಸಿರುವ ಸುಪ್ರೀಂ ಕೋರ್ಟ್‌, “ನಿಮ್ಮ ಕಾಲ ಮೇಲೆ ನೀವು ನಿಲ್ಲಿ’ ಎಂದು ಹೇಳಿದೆ.

Advertisement

“ನೀವು ಶರದ್‌ ಪವಾರ್‌ ಜತೆ ಸೈದ್ಧಾಂತಿಕ ಭಿನ್ನತೆ ಹೊಂದಿದ್ದರೂ, ಪ್ರಚಾರದಲ್ಲಿ ಅವರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿರುವುದೇಕೆ ಎಂದು ನ್ಯಾಯಪೀಠ ಪ್ರಶ್ನಿಸಿದೆ. ಜತೆಗೆ, ಶರದ್‌ ಫೋಟೋ, ವೀಡಿಯೋ ಬಳಕೆಗೆ ನಿರ್ಬಂಧವನ್ನೂ ಹೇರಿದೆ. ಇದಕ್ಕೂ ಮೊದಲು ಚುನಾವಣ ಪ್ರಚಾರದಲ್ಲಿ ಬಳಸುವ ಜಾಹೀರಾತು ಗಳಲ್ಲಿ ಡಿಸ್‌ಕ್ಲೇಮರ್‌ ಹಾಕುವಂತೆ ಸೂಚಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next