Advertisement

ಪ್ರಖ್ಯಾತ ಹಾಸ್ಯ ಲೇಖಕ,ಮಾರ್ವೆಲ್‌ ಕಾಮಿಕ್ಸ್‌ನ  ಸ್ಟಾನ್‌ಲೀ ವಿಧಿವಶ 

09:52 AM Nov 13, 2018 | Team Udayavani |

ಲಾಸ್‌ ಎಂಜಲೀಸ್‌: ಪ್ರಖ್ಯಾತ ಲೇಖಕ , ಹಾಸ್ಯ ಬರಹಗಳ ದಿಗ್ಗಜ ಸ್ಪೈಡರ್‌ ಮ್ಯಾನ್‌ ಖ್ಯಾತಿಯ ಸ್ಟಾನ್‌ ಲೀ ಅವರು ಸೋಮವಾರ ಇಹಲೋಕ ತ್ಯಜಿಸಿದ್ದಾರೆ.ಅವರಿಗೆ 95 ವರ್ಷ ವಯಸ್ಸಾಗಿತ್ತು. 

Advertisement

ಮಾರ್ವೆಲ್‌ ಕಾಮಿಕ್ಸ್‌ನ ಸಂಪಾದಕರಾಗಿದ್ದ ಅವರು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿ ಖ್ಯಾತ ನಾಮ ಲೇಖಕರಲ್ಲಿ ಒಬ್ಬರಾಗಿದ್ದರು. 

ಬ್ಲ್ಯಾಕ್‌ ಪ್ಯಾಂಥರ್‌,ಸ್ಪೈಡರ್‌ ಮ್ಯಾನ್‌, ಎಕ್ಸ್‌ ಮೆನ್‌ , ಮೈಟಿ ಥೋರ್‌, ಐರನ್‌ ಮ್ಯಾನ್‌, ಫೆಂಟಾಸ್ಟಿಕ್‌ ಫೋರ್‌, ಇನ್‌ಕ್ರೆಡಿಬಲ್‌ ಹಲ್ಕ್ , ಡೇರ್‌ಡೆವಿಲ್‌ ಆಂಟ್‌ ಮೆನ್‌ ಮೊದಲಾದವು ಸ್ಟಾನ್‌ ಲಿ ಅವರ ಜನಪ್ರಿಯ ಕೃತಿಗಳು. 

ಸ್ಟಾನ್‌ ಲಿ ನಿಧನಕ್ಕೆ ಅಪಾರ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next