Advertisement

ರಂಜಾನ್‌ ಆರ್ಥಿಕ ನೆರವು ಕಾರ್ಯಕ್ರಮ ವೇಳೆ ಕಾಲ್ತುಳಿತ: 80 ಅಧಿಕ ಮಂದಿ ಮೃತ್ಯು

09:03 AM Apr 20, 2023 | Team Udayavani |

ಸನಾ(ಯೆಮೆನ್):  ರಂಜಾನ್‌ ಹಬ್ಬದ ಪ್ರಯುಕ್ತ ಆರ್ಥಿಕ ನೆರವು ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ 80 ಕ್ಕೂ ಹೆಚ್ಚಿನ ಮಂದಿ ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ಯೆಮನ್‌ ದೇಶದ ಸನಾದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಸ್ಥಳೀಯ ಆಡಳಿತದ ಸಹಾಯವಿಲ್ಲದೆ, ವ್ಯಾಪಾರಿಗಳು ಬಡವರಿಗೆ ಆರ್ಥಿಕವಾಗಿ ನೆರವು ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ರಂಜಾನ್‌ ಮಾಸದ ಪ್ರಯುಕ್ತ, ಹಬ್ಬ ಸಮೀಪವಾಗುತ್ತಿರುವುದರಿಂದ ಬಡ ಜನರಿಗೆ ಸಹಾಯವಾಗಲೆಂದು ಚಾರಿಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆರ್ಥಿಕ ನೆರವನ್ನು ಪಡೆಯಲು ನೂರಾರು ಮಂದಿ ಧಾವಿಸಿ ಬಂದಿದ್ದಾರೆ. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಹೌತಿಯ ಗೃಹ ಸಚಿವಾಲಯ ಘಟನೆ ಬಗ್ಗೆ ಹೇಳಿದೆ.

ರಾಜಧಾನಿ ಸನಾದ ಬಾಬ್ ಅಲ್-ಯೆಮೆನ್ ಜಿಲ್ಲೆಯಲ್ಲಿ ಚಾರಿಟಿಯ ಹಣ ಪಡೆಯಲು ಬರುವ ವೇಳೆ ಕಾಲ್ತುಳಿತ ಉಂಟಾಗಿ 80 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 385 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು 13 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೌತಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೌತಿಯ ಸೈನಿಕರು ಪರಿಸ್ಥಿತಿಯನ್ನು ನಿಯಂತ್ರಿಸಲು, ಜನರ ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡು ವಿದ್ಯುತ್‌ ತಂತಿಗೆ ತಗುಲಿ  ಸ್ಫೋಟಗೊಂಡಿದೆ. ಈ ವೇಳೆ ಜನರ ಭೀತಿಯಿಂದ ಓಡುವಾಗ ಕಾಲ್ತುಳಿತ ಉಂಟಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Kota: ಮನೆಯ ಅನ್ನ ಸಾಂಬಾರ್ ನಲ್ಲಿ ಗಾಜಿನ ಚೂರು… ನೆರೆಮನೆಯ ಯುವಕನ ಕೃತ್ಯ ಬಯಲು

Advertisement

ಘಟನೆಯ ಬಳಿಕ ಇಬ್ಬರು ಆಯೋಜಕರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ ಹೌತಿ ಆಂತರಿಕ ಸಚಿವಾಲಯ ಹೇಳಿದೆ.

2014 ರಿಂದ ಯೆಮೆನ್‌ನ ರಾಜಧಾನಿಯು ಇರಾನ್ ಬೆಂಬಲಿತ ಹೌತಿಗಳ ನಿಯಂತ್ರಣದಲ್ಲಿದೆ.

ಬ್ರಿಗೇಡಿಯರ್ ಅಬ್ದುಲ್-ಖಾಲೆಕ್ ಅಲ್-ಅಘರಿ ಈ ಬಗ್ಗೆ ಪ್ರತಿಕ್ರಿಯಿಸಿ, ಆಯೋಜಕರು ಸ್ಥಳೀಯ ಆಡಳಿತದ ಯಾವುದೇ ನೆರವು ಇಲ್ಲದೆ, ಮನಬಂದಂತೆ ಎಲ್ಲರಿಗೂ ಹಣ ಹಂಚಿದ್ದೇ ಈ ದುರ್ಘಟನೆಗೆ ಕಾರಣವೆಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next