Advertisement

G-20: ಔತಣಕೂಟದಲ್ಲಿ ಮಿಂಚಿದ ಸ್ಟಾಲಿನ್‌, ಸುಖು, ಸೊರೇನ್‌

12:27 AM Sep 11, 2023 | Team Udayavani |

ಜಿ20 ದೇಶಗಳ ನಾಯಕರಿಗೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ರಾತ್ರಿ ಆಯೋಜಿಸಿದ್ದ ಔತಣಕೂಟದಲ್ಲಿ ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಭಾಗವಹಿಸಿ ಗಮನ ಸೆಳೆದರು.

Advertisement

ಹಿಮಾಚಲ ಪ್ರದೇಶ ಸಿಎಂ ಸುಖ್ವೀಂದರ್‌ ಸಿಂಗ್‌ ಸುಖು, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಅವರು ಉಲ್ಲಸಿತರಾಗಿ ಓಡಾಡುತ್ತಿದ್ದರು. ಪುತ್ರ ಉದಯನಿಧಿ ಸ್ಟಾಲಿನ್‌ ಅವರ “ಸನಾತನ ಧರ್ಮ’ ವಿವಾದದ ನಡುವೆಯೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಉಪಸ್ಥಿತಿ ಔತಣಕೂಟದಲ್ಲಿ ಕಂಡುಬಂತು. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರೊಂದಿಗೆ ಹಸ್ತಲಾಘವ ಮಾಡಿದ ಸ್ಟಾಲಿನ್‌, ನಂತರ ಪ್ರಧಾನಿ ಮೋದಿ ಮತ್ತು ಉಪರಾಷ್ಟ್ರಪತಿ ಧನ್‌ಕರ್‌ರೊಂದಿಗೆ ಫೋಟೋಗೆ ಪೋಸ್‌ ನೀಡಿದರು.

ವಿಶೇಷವೆಂದರೆ, ಸ್ಟಾಲಿನ್‌ ಅವರು ಶನಿವಾರದ ಔತಣಕೂಟದಲ್ಲಿ ಪಾಲ್ಗೊಂಡ ದಕ್ಷಿಣ ಭಾರತದ ಏಕೈಕ ಸಿಎಂ ಆಗಿದ್ದರು. ಆಂಧ್ರಪ್ರದೇಶ ಸಿಎಂ ಜಗನ್‌ಮೋಹನ್‌ ರೆಡ್ಡಿ ಅವರು ವಿದೇಶದಲ್ಲಿದ್ದರೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರಿಗೆ ಆಹ್ವಾನವಿದ್ದರೂ, ಅವರು ಭಾಗಿಯಾಗಿರಲಿಲ್ಲ. ಸಿದ್ದರಾಮಯ್ಯ ಮಾತ್ರವಲ್ಲದೇ, ಕಾಂಗ್ರೆಸ್‌ ಮುಖ್ಯಮಂತ್ರಿಗಳಾದ ಛತ್ತೀಸ್‌ಗಡದ ಭೂಪೇಶ್‌ ಬಘೇಲ್‌ ಮತ್ತು ರಾಜಸ್ಥಾನದ ಅಶೋಕ್‌ ಗೆಹ್ಲೋಟ್‌ ಅವರೂ ಈ ಹೈಪ್ರೊಫೈಲ್‌ ಔತಣಕೂಟಕ್ಕೆ ಬರಲು ನಿರಾಕರಿಸಿದ್ದರು.

ಆದರೆ, ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಮತ್ತು ಕೇಂದ್ರ ಸರಕಾರದ ನೆರವಿನ ಅಗತ್ಯ ಎದುರಿಸುತ್ತಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವೀಂದರ್‌ ಅವರು ಔತಣಕೂಟದಲ್ಲಿ ಭಾಗಿಯಾಗಿದ್ದರು. ಸುಖು ಅವರನ್ನು ಆಲಿಂಗಿಸಿಕೊಂಡ ಕೆಲವು ಫೋಟೋಗಳನ್ನು ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next