Advertisement

ಕರುಣಾನಿಧಿ ಬರ್ತ್‌ಡೇ ಇನ್ನು ಸರ್ಕಾರಿ ಕಾರ್ಯಕ್ರಮ: ಎಂ.ಕೆ.ಸ್ಟಾಲಿನ್‌

07:02 PM Apr 26, 2022 | Team Udayavani |

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಕರುಣಾನಿಧಿ ಅವರ ಜನ್ಮದಿನವಾಗಿರುವ ಜೂ.3ನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮಂಗಳವಾರ ಘೋಷಿಸಿದ್ದಾರೆ.

Advertisement

ಐದು ಬಾರಿ ಸಿಎಂ ಆಗಿ ಆಡಳಿತ ನಡೆಸಿದ್ದ ಕರುಣಾನಿಧಿ ಅವರು ಮಹಿಳೆಯರ ಸಬಲೀಕರಣ, ಸಾಮಾಜಿಕ ಸುಧಾರಣೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಒಂದು ವೇಳೆ ಜನರು ನಾರಾಯಣ ಗುರುಗಳ ಸಂದೇಶ ಪಾಲಿಸಿದ್ದರೆ ದೇಶದಲ್ಲಿ ಒಗ್ಗಟ್ಟು: ಪ್ರಧಾನಿ ಮೋದಿ

ಹಾಗೆಯೇ ಒಮಂದುರಾರ್‌ ಎಸ್ಟೇಟ್‌ನಲ್ಲಿ ನಿರ್ಮಿಸಲಾಗಿರುವ ಕರುಣಾನಿಧಿ ಪುತ್ಥಳಿಯನ್ನೂ ಅನಾವರಣಗೊಳಿಸುವುದಾಗಿ ಅವರ ಪುತ್ರ ಸ್ಟಾಲಿನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next