Advertisement

ಗೌಡ್ರು ಹೋಟೆಲ್‌ಗೆ ವೇದಿಕಾ

11:27 AM Mar 13, 2017 | Team Udayavani |

“ಗೌಡ್ರು ಹೋಟೆಲ್‌’ ಎಂಬ ಸಿನಿಮಾವೊಂದು ತಯಾರಾಗುತ್ತಿರುವ ಬಗ್ಗೆ ನೀವು ಇದೇ ಬಾಲ್ಕನಿಯಲ್ಲಿ ಓದಿದ್ದೀರಿ. ಆದರೆ, ಆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಅವರು ವೇದಿಕಾ. ಹೌದು, ವೇದಿಕಾ “ಗೌಡ್ರು ಹೋಟೆಲ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. “ಶಿವಲಿಂಗ’ ಚಿತ್ರದ ನಂತರ ವೇದಿಕಾ ಮಾಡುತ್ತಿರುವ ಕನ್ನಡ ಸಿನಿಮಾವಿದು. ಭಾನುವಾರ ಈ ಸಿನಿಮಾ ಆರಂಭವಾಗಿದ್ದು, ವೇದಿಕಾಗೆ ಇಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆಯಂತೆ.

Advertisement

ಈ ಚಿತ್ರವನ್ನು ಪಿ.ಕುಮಾರ್‌ ನಿರ್ದೇಶನ ಮಾಡುತ್ತಿದ್ದಾರೆ. ವೇದಿಕಾಗೆ ಜೋಡಿಯಾಗಿ ರಚನ್‌ ಚಂದ್ರ ಎಂಬ ಹೊಸ ನಟ ನಾಯಕರಾಗಿ ನಟಿಸುತ್ತಿದ್ದಾರೆ. ಸಹಜವಾಗಿಯೇ ವೇದಿಕಾ ಖುಷಿಯಾಗಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಪಾತ್ರಗಳು ಸಿಗುತ್ತಿರುವ ಬಗ್ಗೆ ಅವರಿಗೆ ಖುಷಿ ಇದೆಯಂತೆ. ಈ ಹಿಂದೆ ಶಿವರಾಜಕುಮಾರ್‌ ಜೊತೆ ನಟಿಸಿದ “ಶಿವಲಿಂಗ’ ಚಿತ್ರ ವೇದಿಕಾಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಸುಳ್ಳಲ್ಲ.

ಈಗ “ಗೌಡ್ರು ಹೋಟೆಲ್‌’ ಕೂಡಾ ಅದೇ ರೀತಿಯ ಭಿನ್ನ ಪಾತ್ರವಿರುವ ಸಿನಿಮಾವಾಗಿದ್ದು, ಈ ಪಾತ್ರದ ಮೂಲಕ ಮತ್ತಷ್ಟು ಹೆಸರು ಸಿಗುವ ವಿಶ್ವಾಸ ವೇದಿಕಾಗಿದೆ. “ನಾನು ನಿರ್ದೇಶಕ ಕುಮಾರ್‌ ಅವರ “ವಿಷ್ಣುವರ್ಧನ’, “ಚಾರುಲತಾ’ ಸಿನಿಮಾಗಳನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಮಾಡಿದ್ದಾರೆ. ಕಲಾವಿದರಿಗೆ ಒಳ್ಳೆಯ ನಿರ್ದೇಶಕರು ಸಿಗೋದು ಕೂಡಾ ತುಂಬಾ ಮುಖ್ಯ. ಈ ಸಿನಿಮಾದಲ್ಲಿ ಕುಮಾರ್‌ ಸಿಕ್ಕಿದ್ದಾರೆ. ಇದು ಕೂಡಾ ಒಂದು ವಿಭಿನ್ನ ಸಿನಿಮಾವಾಗುತ್ತದೆ ಎಂಬ ವಿಶ್ವಾಸವಿದೆ’ ಎನ್ನುವುದು ವೇದಿಕಾ ಮಾತು.

ಅಂದಹಾಗೆ, ಕನ್ನಡ ಅಲ್ಲದೇ ವೇದಿಕಾ ತಮಿಳು ಹಾಗೂ ಮಲಯಾಳಂನಲ್ಲಿ “ವಿನೋದನ್‌’ ಎಂಬ ಸಿನಿಮಾ ಮಾಡುತ್ತಿದ್ದಾರೆ.  ಇನ್ನು, “ಗೌಡ್ರು ಹೋಟೆಲ್‌’ ಚಿತ್ರ ಮಲಯಾಳಂನ “ಉಸ್ತಾದ್‌ ಹೋಟೆಲ್‌’ನ ರೀಮೇಕ್‌ ಆಗಿದ್ದು, ಮೂಲ ಚಿತ್ರದ ಒನ್‌ಲೈನ್‌ ಇಟ್ಟುಕೊಂಡು ಉಳಿದಂತೆ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗುತ್ತದೆಯಂತೆ. ಚಿತ್ರಕ್ಕೆ ಯುವನ್‌ ಶಂಕರ್‌ ರಾಜಾ ಸಂಗೀತ, ಶಿವ ಛಾಯಾಗ್ರಹಣವಿದೆ. 

Advertisement

Udayavani is now on Telegram. Click here to join our channel and stay updated with the latest news.

Next