Advertisement
ಇವುಗಳಲ್ಲಿ ಮುಂಬಯಿ-ತಮಿಳುನಾಡು ನಡುವಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಬಹುದೆಂಬುದು ಕ್ರಿಕೆಟ್ ಅಭಿಮಾ ನಿಗಳ ನಿರೀಕ್ಷೆ. ತವರಿನ ಪಂದ್ಯವಾದ ಕಾರಣ ಮುಂಬಯಿಗೆ ಹೆಚ್ಚಿನ ಲಾಭವಾ ದೀತೆಂಬುದು ಮತ್ತೂಂದು ಲೆಕ್ಕಾಚಾರ. ಮುಂಬಯಿ ಕೊನೆಯ ತನಕವೂ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ ಎಂಬುದಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ನಿದರ್ಶನ ಸಿಕ್ಕಿದೆ. ತನುಷ್ ಕೋಟ್ಯಾನ್ ಮತ್ತು ತುಷಾರ್ ದೇಶಪಾಂಡೆ 10ನೇ, 11ನೇ ಕ್ರಮಾಂಕದಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಹಾಗೆಯೇ ಒನ್‌ಡೌನ್ ಬ್ಯಾಟರ್ ಮುಶೀರ್ ಖಾನ್ ಅಜೇಯ ದ್ವಿಶತಕ ದಾಖಲಿಸಿದ್ದರು. ಇದು ತಮಿಳುನಾಡು ಪಾಲಿಗೊಂದು ಎಚ್ಚರಿಕೆಯ ಗಂಟೆ.
ತಮಿಳುನಾಡಿನ ಕ್ವಾಲಿಟಿ ಸ್ಪಿನ್ ಆಕ್ರಮಣ ವನ್ನು ಹೇಗೆ ನಿಭಾಯಿಸೀತು ಎಂಬುದರ ಮೇಲೆ ಮುಂಬಯಿಯ ಭವಿಷ್ಯ ಅಡಗಿದೆ. ಸಾಯಿ ಕಿಶೋರ್ (47 ವಿಕೆಟ್) ಮತ್ತು ಎಡಗೈ ಸ್ಪಿನ್ನರ್ ಎಸ್. ಅಜಿತ್ ರಾಮ್ (41 ವಿಕೆಟ್) ತಮಿಳುನಾಡಿನ ಎರಡು ಪ್ರಬಲ ಬೌಲಿಂಗ್ ಅಸ್ತ್ರಗಳು. ಈ ಸೀಸನ್‌ನ ಅಗ್ರ ಬೌಲಿಂಗ್ ಸಾಧಕರು. ಮುಂಬಯಿಯ ಯಾವುದೇ ಬೌಲರ್ ಟಾಪ್-10 ಯಾದಿಯಲ್ಲಿಲ್ಲ. 32 ವಿಕೆಟ್ ಉರುಳಿಸಿರುವ ಮೋಹಿತ್ ಅವಸ್ಥಿ 13ನೇ ಸ್ಥಾನಿಯಾಗಿದ್ದಾರೆ. ಟೀಮ್ ಇಂಡಿಯಾದಿಂದ ಬೇರ್ಪಟ್ಟಿರುವ ಶ್ರೇಯಸ್ ಅಯ್ಯರ್ ಮುಂಬಯಿ ತಂಡಕ್ಕೆ ಮರಳಿದ್ದಾರೆ. ಇವರ ಫಾರ್ಮ್ ನಿರ್ಣಾಯಕ. ಹಾಗೆಯೇ 6 ಪಂದ್ಯಗಳಲ್ಲಿ ಕೇವಲ ಒಂದು ಫಿಫ್ಟಿ ಹೊಡೆದಿರುವ ನಾಯಕ ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್ ಫಾರ್ಮ್ ತೋರಬೇಕಿದೆ. ಓಪನರ್‌ಗಳಾದ ಪೃಥ್ವಿ ಶಾ, ಭೂಪೇನ್ ಲಾಲ್ವಾನಿ ಉತ್ತಮ ಅಡಿಪಾಯ ನಿರ್ಮಿಸಬೇಕಾದ ಅಗತ್ಯವಿದೆ.
Related Articles
Advertisement
ಮಧ್ಯ ಪ್ರದೇಶಕ್ಕೆ ವಿದರ್ಭ ಸವಾಲುನಾಗ್ಪುರ: ಇನ್ನೊಂದು ರಣಜಿ ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ವಿದರ್ಭ ತವರಿನಂಗಳದಲ್ಲಿ ಮಧ್ಯ ಪ್ರದೇಶ ವಿರುದ್ಧ ಸೆಣಸಲಿದೆ. ಪ್ರಸಕ್ತ ಋತುವಿನಲ್ಲಿ “ವಿಸಿಎ’ಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ವಿದರ್ಭ ಮೂರನ್ನು ಗೆದ್ದಿದೆ. ಸೌರಾಷ್ಟ್ರ ವಿರುದ್ಧ ಸೋಲನುಭವಿಸಿದೆ. ಬ್ಯಾಟರ್‌ಗಳ ಸಾಂಘಿ ಕ ಆಟ ವಿದರ್ಭದ ಹೆಚ್ಚುಗಾರಿಕೆ. ಕರ್ನಾಟಕವನ್ನು ತೊರೆದು ಹೋದ ಕರುಣ್ ನಾಯರ್ (515), ದಿಲ್ಲಿಯಿಂದ ಬಂದ ಧ್ರುವ ಶೋರಿ (496 ರನ್), ಓಪನರ್ ಅಥರ್ವ ತೈಡೆ (488 ರನ್), ನಾಯಕ ಅಕ್ಷಯ್ ವಾಡ್ಕರ್ (452 ರನ್) ಬೇರೆ ಬೇರೆ ಸಂದರ್ಭಗಳಲ್ಲಿ ಕ್ರೀಸ್ ಆಕ್ರಮಿಸಿಕೊಂಡು ತಂಡದ ರಕ್ಷಣೆಗೆ ನಿಂತಿದ್ದಾರೆ.
ನಾಗ್ಪುರ ಪಿಚ್ ವಿದರ್ಭದ ಪೇಸರ್ ಆದಿತ್ಯ ಠಾಕರೆ, ಎಡಗೈ ಸ್ಪಿನ್ನರ್ ಆದಿತ್ಯ ಸರ್ವಟೆ ಅವರಿಗೆ ಭಾರೀ ನೆರವು ನೀಡುವ ಸಾಧ್ಯತೆ ಇದೆ. ಎಂಪಿ ಅದೃಷ್ಟಶಾಲಿ ತಂಡ
2022ರ ಚಾಂಪಿಯನ್ ಮಧ್ಯ ಪ್ರದೇಶ ಇಲ್ಲಿಯ ತನಕ ಬಂದದ್ದೇ ಅದೃಷ್ಟದ ಬಲದಿಂದ. ಆಂಧ್ರ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಇನ್ನೇನು ಸೋತೇ ಹೋಯಿತು ಎನ್ನುವಾಗ 4 ರನ್ನುಗಳ ರೋಚಕ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ವೆಂಕಟೇಶ್ ಅಯ್ಯರ್ (528 ರನ್), ಹಿಮಾಂಶು ಮಂತ್ರಿ (513), ಯಶ್ ದುಬೆ (510 ರನ್) ಮಧ್ಯ ಪ್ರದೇಶದ ಪ್ರಮುಖ ಬ್ಯಾಟರ್. ಆದರೆ ರಜತ್ ಪಾಟಿದಾರ್ ಟೆಸ್ಟ್ ತಂಡದಲ್ಲಿರುವ ಕಾರಣ ಲಭ್ಯರಿರುವುದಿಲ್ಲ.
ಎಡಗೈ ಸ್ಪಿನ್ನರ್ ಕುಮಾರ ಕಾರ್ತಿಕೇಯ (38 ವಿಕೆಟ್), ಹಿರಿಯ ಆಫ್ಸ್ಪಿನ್ನರ್ ಸಾರಾಂಶ್ ಜೈನ್ (27 ವಿಕೆಟ್), ಎಡಗೈ ಪೇಸ್ ಬೌಲರ್ ಕುಲ್ವಂತ್ ಖೆಜೊÅàಲಿಯ (26 ವಿಕೆಟ್) ತಂಡದ ಬೌಲಿಂಗ್ ಪ್ರಮುಖರು.