Advertisement

ರಂಗಾಯಣದ ತಲ್ಲಣಗಳ ಬಗ್ಗೆ ಸಂವಾದಕ್ಕೆ ನಿರಾಕರಣೆ

11:37 AM Dec 11, 2021 | Team Udayavani |

ಮೈಸೂರು: ನೆಲೆ-ಹಿನ್ನೆಲೆ ಸಂಸ್ಥೆಯು ಬುದ್ಧಿ ಜೀವಿ ಗಳೊಂ ದಿಗೆ ರಂಗಾಯಣದ ಬಗ್ಗೆ ಶನಿವಾರ ಏರ್ಪಡಿಸಿ ರುವ ಸಂವಾದ ಇದೀಗ ವಿವಾದಕ್ಕೆ ಎಡೆ ಮಾಡಿದೆ. ರಂಗಾಯಣದ ತಲ್ಲಣಗಳ ಬಗ್ಗೆ ಕಲಾಮಂದಿರದ ಆವರಣದಲ್ಲಿನ ಚಿಂತನಾ ಚಾವಡಿಯಲ್ಲಿ ಬುದ್ಧಿ ಜೀವಿಗಳೊಂದಿಗೆ ನೆಲೆ-ಹಿನ್ನೆಲೆ ಸಂಸ್ಥೆಯು, ಸಂವಾದ ಏರ್ಪಡಿಸಿದೆ.

Advertisement

ಆದರೆ, ಸರ್ಕಾರದ ಜಾಗದಲ್ಲಿ ಸರ್ಕಾ ರದ ಅಂಗ ಸಂಸ್ಥೆಯ ವಿರುದ್ಧವೇ ಸಂವಾದ ಏರ್ಪಡಿಸಿರುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಇದಕ್ಕೆ ಕಾರ್ಯಕ್ರಮ ಆಯೋಜಕರು ಮತ್ತು ಬುದ್ಧಿ ಜೀವಿಗಳು ಆಕ್ರೋಶಗೊಂಡು ಶನಿವಾರ ಸಂಜೆ ಸ್ಥಳಕ್ಕೆ ತೆರಳಿ ಏನು ಮಾಡಬೇಕು ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ವಿವಾದಕ್ಕೀಡು ಮಾಡಿದೆ.

ಇದನ್ನೂ ಓದಿ:- 22ರಂದು ಡಾ| ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ

ರಂಗಾಯಣ ಆವರಣದಲ್ಲಿ ಡಿ.10ರಂದು ನಡೆಯ ಬೇ ಕಿದ್ದ 2021ರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಕಲಾವಿದೆ ಮಾಳವಿಕ ಅವಿನಾಶ್‌ ಹಾಗೂ ಸಮಾಜ ಸೇವಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಮೈಸೂರು ರಂಗಾ ಯಣ ಆಹ್ವಾನಿಸಿತ್ತು. ಆದರೆ, ಇದಕ್ಕೆ ವಿಚಾರವಾದಿ ಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

ಜೊತೆಗೆ ರಂಗಾ ಯಣ ನಿರ್ದೇಶಕರ ವಿರುದ್ಧ ಕಿಡಿಕಾರಿದ್ದರು. ಇದರ ಬೆನ್ನಲ್ಲೆ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮೈಸೂರು ರಂಗಾಯಣಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಪ್ರತಿಕ್ರಿಯಿಸಿದ್ದರು. ಇದರ ಮುಂದುವರಿದ ಭಾಗವಾಗಿ ಮೈಸೂರಿನ ನೆಲೆ ಹಿನ್ನೆಲೆ ಸಂಸ್ಥೆಯು ಆಯ್ದ ಬುದ್ಧಿ ಜೀವಿಗಳನ್ನೊಳಗೊಂಡು ರಂಗಾಯಣದ ತಲ್ಲಣಗಳ ಬಗ್ಗೆ ಸಂವಾದ ಏರ್ಪಡಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

Advertisement

“ನೆಲೆ ಹಿನ್ನೆಲೆ ಸಂಸ್ಥೆ ಕಲಾಮಂದಿರ ಆವರಣದಲ್ಲಿ ಸಂವಾದ ನಡೆಸಲು ಅನುಮತಿ ಕೇಳಿತ್ತು. ಆದರೆ ತಾಂತ್ರಿಕ ಕಾರಣಗಳಿಂ ದಾಗಿ ಹಾಗೂ ಸಂವಾದದ ಉದ್ದೇಶ ವಿವಾದಕ್ಕೀಡಾಗುವ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅನುಮತಿ ನೀಡಿಲ್ಲ.” ●ಎಚ್‌. ಚೆನ್ನಪ್ಪ, ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು.

“ಕಲಾಮಂದಿರ ಆವರಣದಲ್ಲಿ ಸಂವಾದ ನಡೆಸಲು ಅನುಮತಿ ಕೇಳಿದ್ದೇವೆ. ಶನಿವಾರ ಸ್ಥಳಕ್ಕೆ ಹೋಗುತ್ತೇವೆ. ಒಂದು ವೇಳೆ ಅನುಮತಿ ನೀಡದಿದ್ದರೆ, ಪ್ರಗತಿಪರ ಸಂಘಟನೆಗಳ ಜೊತೆ ಚರ್ಚೆ ನಡೆಸಿ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ.” ●ಕೆ.ಆರ್‌. ಗೋಪಾಲಕೃಷ್ಣ, ನೆಲೆ ಹಿನ್ನೆಲೆ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next