Advertisement

ನಂಜನಗೂಡಿಗೆ ಹೋಗಲು ಒಪ್ಪದ ಸಿಬ್ಬಂದಿ

03:31 PM Apr 07, 2020 | Suhan S |

ನಂಜನಗೂಡು:  ಕೋವಿಡ್ 19 ದಿಂದ ನಂಜನಗೂಡಿಗೆ ಹಣ್ಣು, ತರಕಾರಿ ಮಾರಾಟಕ್ಕೆ ಹೋಗಲು ಹಾಪ್‌ ಕಾಮ್ಸ್‌ ಸಿಬ್ಬಂದಿ ನಿರಾಕರಿಸಿದ್ದಾರೆ.

Advertisement

ತಾಲೂಕು ಆಡಳಿತ ಹಾಗೂ ತೊಟಗಾರಿಕೆ ಇಲಾಖೆ ಹಾಪ್‌ಕಾಮ್ಸ್‌ ಸಹಯೋಗದಲ್ಲಿ ಹಣ್ಣು, ತರಕಾರಿ ಖರೀದಿಸಿ ಶೇ.5ರಷ್ಟು ಲಾಭದಲ್ಲಿ ನಂಜನಗೂಡಿನಲ್ಲಿ ಗ್ರಾಹಕರ ಮನೆ ಮನೆಗೆ ತಲುಪಿಸುವ ಯೋಜನೆ ಇತ್ತು. ಸೋಮವಾರ ಮೈಸೂರಿನಿಂದ ಹಣ್ಣು, ತರಕಾರಿ ತರಲು ಹೋದ 2 ವಾಹನಗಳು ಸಂಜೆಯಾದರೂ ಬರಲಿಲ್ಲ. ನಂಜನಗೂಡಿಗೆ ಬರಲು ಹಾಪ್‌ಕಾಮ್ಸ್‌ ಸಿಬ್ಬಂದಿ ನಿರಾಕರಿಸಿದ ಕಾರಣ, ಹಣ್ಣು, ತರಕಾರಿ ತುಂಬಿಕೊಂಡ ವಾಹನಗಳು ಹಾಪ್‌ಕಾಮ್ಸ್‌ ಕಚೇರಿ ಬಳಿಯೇ ಇದ್ದವು.

ಅಸಹಾಯಕರಾದ ಅಧಿಕಾರಿಗಳು: ಉದಯವಾಣಿಯೊಂದಿಗೆ ಹಾಪ್‌ಕಾಮ್ಸ್‌ ಉಪ ನಿರ್ದೇಶಕ ಕೆ ರುದ್ರೇಶ ಮಾತನಾಡಿ, ನಮ್ಮಲ್ಲಿ ಸಿಬ್ಬಂದಿ ಕೊರತೆಯಿಲ್ಲ. ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಯಾರೂ ನಂಜನಗೂಡಿಗೆ ಹೊಗಲು ಸಿದ್ಧರಿಲ್ಲ. ನಂಜನಗೂಡಿನ ಜನತೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ನಾವೇಷ್ಟು ಹೇಳಿದರೂ ನಮ್ಮವರ ನಿರಾಕರಣೆಯಿಂದ ನಾವು ಕೈಚಲ್ಲುವಂತಾಗಿದೆ ಎಂದರು.

ಡೀಸಿ ಇತ್ತ ಗಮನ ಹರಿಸಿ: ತಾಲೂಕು ಅಧಿಕಾರಿಯೇ ಸ್ವತಃ ಮಾರಾಟ ಮಾಡುತ್ತಿರುವಾಗ ಸರ್ಕಾರಿ ಸಂಸ್ಥೆ ಉದ್ಯೋಗಿಗಳು ಈ ಕೆಲಸ ನಿರಾಕರಿಸಿರುವದು ಸರಿಯೇ ತಪ್ಪೇ ಎಂಬ ಕುರಿತು ಡೀಸಿ ಇತ್ತ ಗಮನ ಹರಿಸಿ, ಸಮ ಸ್ಯೆಗೆ ಪರಿಹರಿಸಬೇಕು. ನಂಜನಗೂಡಿನ ಜನರಿಗೆ ಧೈರ್ಯ ತುಂಬಬೇಕು. ಹಾಪ್‌ಕಾಮ್ಸ್‌ ಮೈಸೂರಿನಲ್ಲಿ ನೀಡುತ್ತಿರುವ ಬೆಲೆಗಿಂತ ಕಡಿಮೆ ಬೆಲೆಗೆ ಹಣ್ಣು, ತರಕಾರಿ ಪೂರೈಸುತ್ತಿದ್ದೇವೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ಅಧಿಕಾರಿ ಗುರುಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next