Advertisement
ನಗರದ ಕೆಲ ಪ್ರಮುಖ ವೃತ್ತಗಳು ಹೊರತುಪಡಿಸಿ ಬಹುತೇಕ ಕಡೆ ಟ್ರಾಫಿಕ್ ನಿಯಮಗಳಿಗೆ ನಯಾಪೈಸೆ ಕಿಮ್ಮತ್ತಿಲ್ಲ. ಕೇಂದ್ರ ಬಸ್ ನಿಲ್ದಾಣದಿಂದ ತೀನ್ ಕಂದಿಲ್‌ಗೆ ಹೋಗುವ ಮಾರ್ಗದಲ್ಲಿ ರಸ್ತೆ, ಪಾದಚಾರಿ ಮಾರ್ಗ ಮಧ್ಯೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಮನಬಂದಂತೆ ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳ ಮಾಲಿಕರನ್ನು ತಡೆದು ಪ್ರಶ್ನಿಸುವವರಿಲ್ಲ. ಒಂದು ಬದಿ ಮಾತ್ರ ಬೈಕ್ ಪಾರ್ಕ್ ಮಾಡಬೇಕು ಎಂಬ ನಿಯಮ ಇದೆಯಾದರೂ ಪಾಲನೆಯಾಗುತ್ತಿಲ್ಲ.
ಭಾರೀ ವಾಹನಗಳ ಸಂಚಾರ: ನಗರದಲ್ಲಿ ಈ ಹಿಂದೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅದಕ್ಕೂ ಕಾಲಾವಕಾಶ ನಿಗದಿ ಮಾಡಿ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದರು. ಆದರೆ, ಅಂಥ ಆದೇಶಗಳಿಗೆ ಮಾನ್ಯತೆ ಇಲ್ಲದಾಗಿದೆ. ಸ್ಟೇಶನ್ ರಸ್ತೆ, ಪಟೇಲ ರಸ್ತೆಗಳಲ್ಲಿ ಭಾರೀ ವಾಹನಗಳ ಓಡಾಟ ಯಾವಾಗಲೂ ಇದ್ದೇ ಇರುತ್ತದೆ. ಒಂದು ವಾಹನ ಇಕ್ಕಟ್ಟಿನ ರಸ್ತೆಯಲ್ಲಿ ಸಿಲುಕಿದರೆ ಕನಿಷ್ಠ 15 ನಿಮಿಷ ಟ್ರಾಫಿಕ್ ಸಮಸ್ಯೆ ತಲೆದೋರಲಿದೆ.
Related Articles
ಠಾಣೆ ಉನ್ನತೀಕರಣ ಕನಸು ಜನಸಂಖ್ಯೆ ಆಧರಿಸಿ ಅಥವಾ ಅಪಘಾತ ಪ್ರಕರಣಗಳನ್ನು ಆಧರಿಸಿ ಇರುವ ಟ್ರಾಫಿಕ್
ಠಾಣೆಗಳನ್ನು ಉನ್ನತೀಕರಿಸಲಾಗುತ್ತದೆ. ಆದರೆ, ನಗರದ ವ್ಯಾಪ್ತಿ ವಿಸ್ತರಿಸುತ್ತಿದ್ದರೂ ಠಾಣೆ ವ್ಯಾಪ್ತಿ ವಿಸ್ತರಿಸುತ್ತಿಲ್ಲ. ಲಿಂಗಸುಗೂರು ರಸ್ತೆಯಲ್ಲಿ ಅಸ್ಕಿಹಾಳ, ಹೈದರಾಬಾದ್ ರಸ್ತೆಯಲ್ಲಿ ರಿಮ್ಸ್‌ಗೆ ಸೀಮಿತಗೊಳಿಸಲಾಗಿದೆ. ಕನಿಷ್ಠ
ವರ್ಷಕ್ಕೆ 200 ಪ್ರಕರಣ ದಾಖಲಾಗಬೇಕು ಎಂಬ ಗುರಿ ತಲುಪದ ಕಾರಣ ಉನ್ನತೀಕರಣ ಭಾಗ್ಯ ಇಲ್ಲದಾಗಿದೆ. ಆ ನೆಪದಲ್ಲಾದರೂ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ಸಿಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.
Advertisement
ನಗರದಲ್ಲಿ ಪ್ರಮುಖ ರಸ್ತೆಗಳು ಬಿಟ್ಟರೆ ಉಳಿದ ಬಹುತೇಕ ಭಾಗದಲ್ಲಿ ಸಂಚಾರ ನಿಯಮಗಳಿಗೆ ಮಾನ್ಯತೆಯೇ ಇಲ್ಲ. ನಗರವನ್ನು ಮಾದರಿ ಮಾಡಬೇಕಿರುವ ಟ್ರಾಫಿಕ್ ಪೊಲೀಸರು ಅದ್ಯಾವುದನ್ನು ಗಂಭೀರವಾಗಿ ಪರಿಗಣಿಸಿಲ್ಲಎನ್ನಲಿಕ್ಕೆ ಸಾಕಷ್ಟು ನಿದರ್ಶನ ಸಿಗುತ್ತವೆ. ಇದರಿಂದ ಸಾಮಾನ್ಯರು ತೊಂದರೆಗೆ ಸಿಲುಕುವಂತಾಗಿದೆ. ಇನ್ನಾದರೂ ಸಂಚಾರಿ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ಇಲಾಖೆ ಪಂಕ್ತಿ ಹಾಕಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಸೆ 30 ವರ್ಷದ ಹಿಂದೆಯಿದ್ದ ಜನಸಂಖ್ಯೆಗನುಗುಣವಾಗಿ ಟ್ರಾಫಿಕ್ ಪೊಲೀಸರಿದ್ದಾರೆ. ಸರ್ಕಾರ ಮೊದಲು ನಗರಕ್ಕೆ ಹೆಚ್ಚುವರಿ ಠಾಣೆಯನ್ನಾದರೂ ನೀಡಲಿ, ಇಲ್ಲವೇ ಈಗಿರುವ ಠಾಣೆಯನ್ನು ಉನ್ನತೀಕರಿಸಲಿ. ಬೇಕಾಬಿಟ್ಟಿ ಪಾರ್ಕಿಂಗ್, ಬೀದಿ ಬದಿ ವ್ಯಾಪಾರಿಗಳ ಹಾವಳಿಗೆ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನಾದರೂ ಸರ್ಕಾರ ರಾಯಚೂರಿನ ಬಗ್ಗೆ ಗಮನ ಹರಿಸಿ ಹೆಚ್ಚುವರಿ ಠಾಣೆ ಮಂಜೂರಿಗೆ ಕ್ರಮ ಕೈಗೊಳ್ಳಲಿ.
ಅಶೋಕಕುಮಾರ ಜೈನ, ಕರವೇ ಜಿಲ್ಲಾಧ್ಯಕ
ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಒಂದು ವಿನ್ಯಾಸ ರಚಿಸಿ ಅಂತಿಮ ಒಪ್ಪಿಗೆಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ಇನ್ನೂ ಸಮ್ಮತಿ ಸಿಕ್ಕಿಲ್ಲ. ಆದರೆ, ಈಗ ಸಾಧ್ಯವಾದಷ್ಟು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇವೆ. ಆದರೆ, ಫುಟ್‌ಪಾತ್‌ಗಳ ಮೇಲೆ ವಾಹನ ನಿಲ್ಲಿಸದಂತೆ, ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿ ದಂಡವನ್ನೂ ಹಾಕಲಾಗಿದೆ. ಅದರ ಜತೆಗೆ ಅವರಿಗೆ ಪರ್ಯಾಯ ಸ್ಥಳಾವಕಾಶ ಕಲ್ಪಿಸುವಂತೆ ನಗರಸಭೆ, ಜಿಲ್ಲಾಡಳಿತಕ್ಕೆ ಮನವಿ ಕೂಡ ಮಾಡಿದ್ದೇವೆ. ವಿಧಿಇಲ್ಲದೇ ದಂಡ ಹಾಕಿ ಸುಮ್ಮನಾಗುತ್ತೇವೆ. ಟ್ರಾಫಿಕ್ ಸಮಸ್ಯೆಗೆ ಸಂಬಂಧಿಸಿದ ಎಲ್ಲ ತಪ್ಪುಗಳಿಗೂ ಪೊಲೀಸರನ್ನು ದೂಷಿಸುವುದು ಸರಿಯಲ್ಲ.
ಸಿದ್ಧರಾಮೇಶ್ವರ ಗಡೇದ, ಟ್ರಾಫಿಕ್ ಪಿಎಸ್‌ಐ ಸಿದ್ಧಯ್ಯಸ್ವಾಮಿ ಕುಕನೂರು