Advertisement

ಸಿಬ್ಬಂದಿ ವಜಾ ಕಾನೂನು ಬಾಹಿರ

12:12 PM Jun 23, 2019 | Team Udayavani |

ಕುಷ್ಟಗಿ: ವಜಾಗೊಂಡ ಟೋಲ್ ಪ್ಲಾಜಾ ಕೆಲಸಗಾರರ ಪುನರ್‌ ನೇಮಕದಲ್ಲಿ ಭಾರತೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಯೋಜನಾ ನಿರ್ದೇಶಕ ವಿಜಯಕುಮಾರ ಮಣಿ ನಿಷ್ಕ್ರೀಯವಾಗಿರುವ ಹಿನ್ನೆಲೆಯಲ್ಲಿ ಜೂ. 25ರಂದು ದೆಹಲಿಯಲ್ಲಿ ಸಂಬಂಧಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹಾಗೂ ಭಾರತೀಯ ಹೆದ್ದಾರಿ ಪ್ರಾಧಿಕಾರ ಮುಖ್ಯಸ್ಥರಿಗೆ ದೂರು ಸಲ್ಲಿಸಲಾಗುವುದು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

Advertisement

ರಾಷ್ಟ್ರೀಯ ಹೆದ್ದಾರಿ ಕ್ರಾಸ್‌ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಟೋಲ್ ಪ್ಲಾಜಾ ವಜಾಗೊಂಡ ಕೆಲಸಗಾರರ ಅಹವಾಲು ಆಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವಜಾಗೊಂಡಿರುವ ಕೆಲಸಗಾರರನ್ನು ಪುನರ್‌ ನೇಮಕ ಸ್ಥಳೀಯ ಮಟ್ಟದಲ್ಲಿ ಬಗೆಹರಿಯುವ ವಿಚಾರ. ಆದರೆ ಈ ಅಧಿಕಾರಿ ರಜೆ ಇದೆ, ಇದು ತಮಗೆ ಸಂಬಂಧಿಸಿಲ್ಲ. ಈ ಕಂಪನಿಯ ಗುತ್ತಿಗೆದಾರರಿಗೂ ತಮಗೂ ಸಂಬಂಧವೇ ಇಲ್ಲ ಎಂದು ಅಸಹಾಯಕರಾಗಿ ಪ್ರಸ್ತಾಪಿಸಿದ್ದು, ಇದನ್ನೇ ಲಿಖೀತವಾಗಿ ನೀಡುವಂತೆ ತಿಳಿಸಿರುವೆ ಎಂದರು.

ವಜಾಗೊಂಡ ಕೆಲಸಗಾರರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಆರೋಗ್ಯದಲ್ಲಿ ವ್ಯತ್ಯಾಸವಾದರೆ ಯಾರು ಹೊಣೆ? ಇಲ್ಲಿ ಗುತ್ತಿಗೆದಾರರ ಏಕಸ್ವಾಮ್ಯ ನಡೆಯುತ್ತಿದ್ದು, ಕಂಪನಿಯವರೇ ಸುಪ್ರೀಂ ಆಗಿದ್ದು, ಇದನ್ನೆಲ್ಲ ಪರಿಹರಿಸಬೇಕಾದ ಜವಾಬ್ದಾರಿ ಅಧಿಕಾರಿ ವಿಜಯಕುಮಾರ ಮಣಿ ನುಣಚಿಕೊಳ್ಳುತ್ತಿದ್ದಾರೆ. ಸ್ಥಳೀಯರನ್ನು ಕೈ ಬಿಟ್ಟು ಬೇರೆಯವರನ್ನು ನೇಮಿಸಿಕೊಂಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಯಾವೂದೇ ಮುನ್ಸೂಚನೆ, ನೋಟಿಸ್‌ ಇಲ್ಲದೇ ಕೆಲಸದಿಂದ ತೆಗೆದು ಹಾಕಿದ್ದರಿಂದ ಸುಮಾರು 400 ಕುಟುಂಬಗಳು ಬೀದಿಗೆ ಬಿದ್ದಿದೆ. ಸ್ಥಳೀಯ ಶಾಸಕ, ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ನೌಕರರಿಂದ ಆಗಿರುವ ಪ್ರಮಾದ ಸರಿಪಡಿಸಿ ಮುಂದುವರಿಸಿಕೊಳ್ಳಬೇಕಿತ್ತು. ಸದರಿ ಕಂಪನಿಯವರು ಈ ಕೆಲಸಗಾರರನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸುವುದಾಗಿ ತಿಳಿಸಿದರು.

ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಕೆ. ಶರಣಪ್ಪ, ಮಲ್ಲಣ್ಣ ಪಲ್ಲೇದ್‌, ಜಿಪಂ ಸದಸ್ಯರಾದ ವಿಜಯ ನಾಯಕ್‌, ಕೆ. ಮಹೇಶ, ಬಸವರಾಜ್‌ ಹಳ್ಳೂರು, ಶಶಿಧರ ಕವಲಿ, ವಿಜಯಕುಮಾರ ಹಿರೇಮಠ, ಮಲ್ಲಿಕಾರ್ಜುನ ಮಸೂತಿ ಇತರರಿದ್ದರು.

ಟೋಲ್ಪ್ಲಾಜಾ ಕೆಲಸಗಾರರ ಪುನರ್‌ ನಿಯುಕ್ತಿಗೆ ತಮಗೆ ಅಧಿಕಾರ ಇಲ್ಲ ಎಂದು ಹೇಳುವ ಎನ್‌ಎಚ್ಎಐ ಯೋಜನಾ ನಿರ್ದೇಶಕ ವಿಜಯಕುಮಾರ ಮಣಿ ಅವರಿಗೆ, ಇಲ್ಲಿನ ಸರ್ವಿಸ್‌ ರಸ್ತೆ ಹದಗೆಟ್ಟಿದ್ದು, ಅದನ್ನು ಸರಿಪಡಿಸುವ ಅಧಿಕಾರ ಇಲ್ಲವೇ? • ದೊಡ್ಡನಗೌಡ
ಪಾಟೀಲ, ಮಾಜಿ ಶಾಸಕ
ಕೆಲಸಗಾರರನ್ನು ತೆಗೆದು ಹಾಕಿರುವುದು ಕಾನೂನು ಬಾಹಿರವಾಗಿದ್ದು, ಜಿಎಂಆರ್‌, ಓಎಸ್‌ಈ ಕಂಪನಿಯವರು ಸರ್ಕಾರದ ನಿಯಂತ್ರಣದಲ್ಲಿಲ್ಲ. ಈ ವಿಚಾರದಲ್ಲಿ ಸರ್ಕಾರ ಕಂಪನಿಯವರೇ ಹೇಳಿದಂತೆ ಕೇಳುತ್ತಿದೆ. ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ತಂದಿದ್ದು, ಮುಂದೆ ಸಂಸದರ ಆದೇಶಕ್ಕೂ ತಡೆಯಾಜ್ಞೆಗೂ ಈ ಕಂಪನಿಯವರು, ಹಿಂದೆ ಮುಂದೆ ನೋಡುವುದಿಲ್ಲ. • ಸಂಗಣ್ಣ ಕರಡಿ, ಸಂಸದ
2029ವರೆಗೂ ಈ ಕಂಪನಿಯವರು ಟೋಲ್ ವಸೂಲಿ, ಹೆದ್ದಾರಿ ನಿರ್ವಹಿಸಬೇಕಿದೆ. ಅವರ ಕೆಲಸದ ಬಗ್ಗೆ ಸದರಿ ಕಂಪನಿಯವರು ಸಿಬ್ಬಂದಿ ನಿಯೋಜಿಸಿಕೊಂಡಿದ್ದು, ಅದರ ಪ್ರಕಾರ ನಿರ್ವಹಿಸುತ್ತಿದ್ದಾರೆ. • ವಿಜಯಕುಮಾರ ಮಣಿ, ಯೋಜನಾ ನಿರ್ದೇಶಕ ಎನ್‌ಎಚ್ಎಐ
Advertisement

Udayavani is now on Telegram. Click here to join our channel and stay updated with the latest news.

Next