Advertisement

ಕ್ರೀಡಾಂಗಣ ಸಿಬ್ಬಂದಿ ವೇತನ ವಿಳಂಬ

05:43 PM Dec 13, 2019 | Team Udayavani |

ಶಿರಸಿ: ಮೂಲ ಸೌಕರ್ಯ, ವಾರ್ಷಿಕ ಅಗತ್ಯ ಕಾಮಗಾರಿ, ಸೂಕ್ತ ಕ್ರೀಡಾಂಗಣ ಸಾಮಗ್ರಿ ಕೊರತೆ, ಸಿಬ್ಬಂದಿ ವೇತನ ವಿಳಂಬದ ನೀತಿ ಖಂಡಿಸಿ ಜ.1 ರಂದು ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣಕ್ಕೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಸ್ಪಂದನ ನ್ಪೋರ್ಟ್ಸ್ ಅಕಾಡಮಿ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.

Advertisement

ಪದೇಪದೇ ಕ್ರೀಡಾಂಗಣದ ನಿರ್ವಹಣೆ ಕುರಿತು ಆಕ್ಷೇಪ, ಒತ್ತಾಯ, ಮನವಿ ನೀಡಿದ್ದಾಗ್ಯೂ ಕನಿಷ್ಠ ಮಟ್ಟದಕಾಮಗಾರಿ ಕೆಲಸ ಜರುಗಿಸದೇ ಸಂಪೂರ್ಣವಾಗಿ ಕ್ರೀಡಾಂಗಣದ ಅಭಿವೃದ್ಧಿಗೆ ಆಡಳಿತ ಮಂಡಳಿ ನಿರ್ಲಕ್ಷಿಸಿರುವುದರಿಂದ ಪ್ರತಿಭಟನೆ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಕ್ರೀಡಾಂಗಣದಲ್ಲಿನ ನಿರ್ವಹಣೆ ಮತ್ತು ಕನಿಷ್ಠ ಮಟ್ಟದಲ್ಲಿ ವಾರ್ಷಿಕವಾಗಿ ನಿರಂತರವಾಗಿ ಸ್ವತ್ಛ ಮಾಡದೇ, ಗಿಡಗಂಟಿಗಳು ಓಟದ ಪಥದಲ್ಲಿ ಬೆಳೆದಿರುವುದಲ್ಲದೇ ಕ್ರೀಡಾಂಗಣದಲ್ಲಿ ಉಬ್ಬು ತಗ್ಗು ಸಮತಟ್ಟು ಮಾಡುವಲ್ಲಿ ಕಾಮಗಾರಿ ಜರುಗಿಸದೇ ಇರುವುದು. ಮಳೆಗಾಲದಲ್ಲಿ ಕೆಸರುಗದ್ದೆ ಆಗುವ ಓಟದ ಪಥದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ದಶಕದಿಂದಲೂ ಸಾರ್ವಜನಿಕವಾಗಿ ಒತ್ತಾಯಿಸಿದಾಗ್ಯೂ ಕ್ರೀಡಾಂಗಣ ಬಗ್ಗೆ ನಿರ್ಲಕ್ಷಿಸಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ.

ಬಂದಿರುವಂಥ ವಾರ್ಷಿಕ ಭಾಡಿಗೆಗೂ ಸಹಿತ ಕ್ರೀಡಾಂಗಣದ ಅಭಿವೃದ್ಧಿಗೆ ವಿನಿಯೋಗಿಸದೇ ಇರುವುದು ವಿಷಾದಕರ. ಜಿಲ್ಲಾ ಮಟ್ಟದ ಕ್ರೀಡಾಂಗಣ ಎಂದು ಗುರುತಿಸಲ್ಪಟ್ಟಂತ ಮಾರಿಕಾಂಬಾ ಕ್ರೀಡಾಂಗಣದಲ್ಲಿ ತರಬೇತುದಾರರಿಲ್ಲದೇ ಎರಡು ದಶಕಗಳಾಗಿದ್ದು ಯುವ ಪ್ರತಿಭೆಗಳು ಮಾರ್ಗದರ್ಶನ, ತರಬೇತಿ ಹಾಗೂ ಪ್ರೋತ್ಸಾಹದಿಂದ ವಂಚಿತರಾಗುತ್ತಿದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದರೂ ಉತ್ತಮ ಮಾರ್ಗದರ್ಶಕರ ಕೊರತೆಯಿಂದ ಕ್ರೀಡಾಪಟುಗಳು ಪ್ರಶಸ್ತಿಗಾಗಿ ವಂಚಿತರಾಗುತ್ತಿರುವುದು ವಿಷಾದಕರ. ಅತ್ಯಾಧುನಿಕ ಕೌಶಲ್ಯ ಪೂರಿತ ಕ್ರೀಡಾಸಾಮಗ್ರಿ ಕೊರತೆ ಕ್ರೀಡಾಂಗಣದಲ್ಲಿ ಗೋಚರಿಸುತ್ತಿದ್ದು ಹೊಸ ತಂತ್ರಜ್ಞಾನದ ಕ್ರೀಡಾ ಸ್ಪರ್ಧೆಯ ಹೊಸನೀತಿ ಅಳತೆಯ ಕ್ರೀಡಾ ಸಾಮಗ್ರಿ ಕೊರತೆ ಇದ್ದು ಅದನ್ನು ಸರಿದೂಗಿಸುವ ಜವಾಬ್ದಾರಿ ಎದ್ದು ತೋರುತ್ತಿದೆ ಎಂದು ತಿಳಿಸಿದ್ದಾರೆ.

ಕ್ರೀಡಾಂಗಣದ ಸಂಪೂರ್ಣ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗೆ ಕಳೆದ 8 ತಿಂಗಳಿಂದ ವೇತನವನ್ನು ನೀಡದೇ ಜೀವನ ನಡೆಸುವುದು ಕಷ್ಟವಾಗಿದ್ದು ಎಂತಹವರನ್ನು ಮನಕುಲುಕಿಸುವಂತ ಸನ್ನಿವೇಶ ಎದುರಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next