Advertisement
ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆದರೆ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರಾಟಕ್ಕೆ ಬಿಡದೆ ತೆಗೆದಿರಿಸಿಕೊಂಡಿದ್ದ ಬೆಳೆಗಾರರಿಗೆ ನಿರೀಕ್ಷಿತ ಬೆಲೆ ಏರಿಕೆ ಆಗದೇ ಇರುವುದು ನಿರಾಶೆಯನ್ನುಂಟುಮಾಡಿದೆ.
ಕಾಳುಮೆಣಸು ಧಾರಣೆಯಲ್ಲಿ ವಾರದ ಮಧ್ಯೆ 5 ರೂ. ಇಳಿಕೆ ಕಂಡರೂ ಮತ್ತೆ 5 ರೂ. ಏರಿಕೆಯಾಗಿದೆ. 315 ರೂ.ಗೆ ಮಾರುಕಟ್ಟೆಯಲ್ಲಿ ಖರೀದಿಯಾಗಿದೆ. ಲೋಕಲ್ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಕಾರಣದಿಂದ ದರ ಏರಿಕೆಯಾಗುವ ಸಾಧ್ಯತೆಯೂ ಇದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ. ಕೆಲ ಸಮಯಗಳ ಧಾರಣೆಯನ್ನು ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರೆದಿದೆ.
Related Articles
ರಬ್ಬರ್‌ನ ಬೆಲೆ ಈ ವಾರವೂ ಮತ್ತಷ್ಟು ಚೇತೋ ಹಾರಿ ಏರಿಕೆಯನ್ನು ಕಂಡಿರುವುದು ಬೆಳೆಗಾರರಲ್ಲಿ ಖುಷಿಯನ್ನು ತಂದಿದೆ. ಕಳೆದ ವಾರ 6.5 ರೂ.ನಷ್ಟು ಏರಿಕೆಯಾಗಿ 139.5 ರೂ.ಗೆ ತಲುಪಿದ್ದ ರಬ್ಬರ್ ಬೆಲೆ ಈ ವಾರ ಮತ್ತೆ 2 ರೂ. ಏರಿಕೆಯಾಗಿ 141.5 ರೂ.ಗೆ ಖರೀದಿ ನಡೆಸಿದೆ. ಆರ್‌ಎಸ್‌ಎಸ್4 ದರ್ಜೆ ಏರಿಕೆ ಕಂಡು ಕಂಡು 141.5 ರೂ., ಆರ್‌ಎಸ್‌ಎಸ್5 ದರ್ಜೆ ಏರಿಕೆ ಕಂಡು 136. 5 ರೂ., ಲಾಟ್ 131 ರೂ.ನಲ್ಲಿ ಖರೀದಿ ನಡೆಸಿದೆ. ಏರಿಕೆ ಕಂಡಿರುವ ಸಾðಪ್ 1 ದರ್ಜೆ 95 ರೂ. ಹಾಗೂ ಸ್ಕಾಪ್ 2 ದರ್ಜೆ 86 ರೂ. ರೂ.ನಲ್ಲಿ ಖರೀದಿ ನಡೆಸಿವೆ.
Advertisement
ತೆಂಗು ಧಾರಣೆ ಸಾಧಾರಣಕೆಲವು ತಿಂಗಳುಗಳಿಂದ ಉತ್ತಮ ಸರಾಸರಿ ಧಾರಣೆಯಲ್ಲಿ ಸಾಗಿದ್ದ ತೆಂಗಿಗೆ ಬೆಲೆ ಇಳಿಕೆಯಾಗಿದೆ. ಈ ವಾರ ಹೊಸ ತೆಂಗಿನ ಕಾಯಿ 24-25 ರೂ.ಗೆ ಖರೀದಿಯಾದರೆ, ಹಳೆಯ ತೆಂಗಿನಕಾಯಿ 25-26 ರೂ. ತನಕ ಖರೀದಿಯಾಗಿದೆ. ತೆಂಗಿನ ಕಾಯಿ ಬೆಲೆಯಲ್ಲಿ ಸದ್ಯ ಏರಿಕೆಯಾಗುವ ಸಾಧ್ಯತೆ ಕಾಣಿಸಿಕೊಂಡಿಲ್ಲ. ಕೊಕ್ಕೋ ಯಥಾಸ್ಥಿತಿ
ಕಳೆದ ಕೆಲ ಸಮಯಗಳಿಂದ ಕೊಕ್ಕೋ ಧಾರಣೆ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆ ಒಂದಷ್ಟು ಇಳಿಕೆಯ ಹಾದಿಯಲ್ಲೇ ಸಾಗಿದೆ. ಹಸಿ ಕೊಕ್ಕೋ ಧಾರಣೆ 57 ರೂ. ಗೆ ಖರೀದಿಯಾಗಿದೆ.