Advertisement
ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಅಧ್ಯಯನವನ್ನು ಪೂರೈಸಿ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿದಾಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಾನವನು ತನ್ನ ಸಾಮರ್ಥ್ಯದ ಕುರಿತು ಸ್ವವಿಮರ್ಶೆ ಮಾಡಿಕೊಳ್ಳುವ ಮನಃಸ್ಥಿತಿಯನ್ನು ಹೊಂದಿರಬೇಕು. ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಲು ಕೇವಲ ಜ್ಞಾನ ಸಂಪಾದನೆಯೊಂದೇ ಸಾಲದು. ಉತ್ತಮ ನಡತೆ ಮತ್ತು ನೈತಿಕತೆಯೂ ವೃತ್ತಿ ಬದುಕಿನ ಯೋಗ್ಯತೆಯನ್ನು ನಿರ್ಧರಿಸುತ್ತದೆ. ಭಾವನೆಗಳನ್ನು ಇತರರಿಗೆ ತಲುಪಿಸಲು ಪರಿಣಾಮಕಾರಿಯಾದ ಭಾಷಾ ಜ್ಞಾನವೂ ಅತಿ ಅಗತ್ಯ ಎಂದರು. ಸಾಮರ್ಥ್ಯವನ್ನೂ ವೃದ್ಧಿಸಿಕೊಳ್ಳಿ
ವಿಭಾಗದ ಸಂಯೋಜಕ ಪ್ರೊ| ದಿನಕರ ರಾವ್ ಮಾತನಾಡಿ, ಶಿಕ್ಷಣ ಸಂಸ್ಥೆಯ ಏಳಿಗೆಯಲ್ಲಿ ಅಧ್ಯಯನಾಸಕ್ತ ವಿದ್ಯಾರ್ಥಿ ಸಮುದಾಯ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವ ಶಿಕ್ಷಕ ವೃಂದ ನಿರ್ಣಾಯಕ ಪಾತ್ರ ವಹಿಸುತ್ತದೆ. ಜ್ಞಾನದ ಮಟ್ಟವನ್ನು ಉನ್ನತೀಕರಿಸುವ ಜತೆಯಲ್ಲಿ ಸ್ಪರ್ಧೆಯನ್ನು ಎದುರಿಸಲು ಅಗತ್ಯವಿರುವ ಸಾಮರ್ಥ್ಯವನ್ನೂ ವೃದ್ಧಿಸಿಕೊಳ್ಳಬೇಕು ಎಂದು ಹೇಳಿ, ಶುಭ ಹಾರೈಸಿದರು.
Related Articles
Advertisement
ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ| ಮಂಜುಳಾ ಬಿ.ಸಿ. ಉಪಸ್ಥಿತರಿದ್ದರು. ಪವಿತ್ರಾ ಸ್ವಾಗತಿಸಿ, ಮಿಸ್ರಿಯಾ ವಂದಿಸಿದರು. ಶ್ವೇತಾ ಕುಮಾರಿ ನಿರೂಪಿಸಿದರು. ಅನಂತರ ವಿದ್ಯಾರ್ಥಿಗಳು ಮನರಂಜನ ಸ್ಪರ್ಧೆ ಸಂಯೋಜಿಸಿದರು.
ಸತತ ಪ್ರಯತ್ನವಿರಲಿಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೊನ್ಹಾ ಮಾತನಾಡಿ, ಅರ್ಥಶಾಸ್ತ್ರದ ವಿದ್ಯಾರ್ಥಿಗಳು ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞರ ಸಾಧನೆಗಳನ್ನು ಅಧ್ಯಯನಕ್ಕೆ ಮಾದರಿಯಾಗಿ ಪರಿಗಣಿಸಬೇಕು. ಸಾರ್ಥಕತೆಗೆ ಸತತ ಪ್ರಯತ್ನವೇ ಮೂಲಮಂತ್ರ. ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದರು.