ಮುಂಬಯಿ: ಇಂದು ಸಾರ್ವಜನಿಕ ವಲಯದ ಸೇವಾ ನಡಿಗೆ ಬಲು ಕಷ್ಟಕರ. ಆದರೂ ಈ ಸಂಸ್ಥೆ 75ರ ಮುನ್ನಡೆಯಲ್ಲಿ ಸಾಗುತ್ತಿರುವುದು ಅಭಿನಂದನೀಯ. ಪ್ರಾಮಾಣಿಕ ಮತ್ತು ಶ್ರಮದ ಗಳಿಕೆ ಎಂದೂ ಶಾಶ್ವತವಾಗಿರುತ್ತದೆ. ಇದಕ್ಕೆ ಈ ವಾರ್ಷಿಕೋತ್ಸವವೇ ಸಾಕ್ಷಿಯಾಗಿದೆ. ಬದಲಾವಣೆಯಲ್ಲಿ ಕಾಲಘಟ್ಟದಲ್ಲಿ ನಾವು ಬದಲಾಗಿ ಮುನ್ನಡೆಯುವ ಅಗತ್ಯವಿದೆ. ಆದರೆ ಎಂದಿಗೂ ನಮ್ಮ ಪರಂಪರೆ, ಸಂಸ್ಕೃತಿ ಮರೆಯದೆ ಅದರ ಪರಿಪಾಲನೆ ನಮ್ಮ ಆದ್ಯ ಕರ್ತವ್ಯ ಆಗಬೇಕು. ಆವಾಗಲೇ ನಮ್ಮ ಬದುಕು ಸಫಲತೆ ಕಾಣುವುದು ಎಂದು ಆದಾಯ ತೆರಿಗೆ ಇಲಾಖೆಯ ನಿವೃತ್ತ ಉನ್ನತಾಧಿಕಾರಿ ವಲೇರಿಯನ್ ಡೆಸಾ ನುಡಿದರು.
ಫೋರ್ಟ್ ಲಯನ್‌ಗೆàಟ್‌ನಲ್ಲಿ ಸುಮಾರು ಏಳೂವರೆ ದಶಕಗಳಿಂದ ಸೇವಾನಿರತ ಸೈಂಟ್ ಪಾವ್ಲ್‌ಸ್ ಕ್ಯಾಥೋಲಿಕ್ ಅಸೋಸಿಯೇಶನ್ ಮುಂಬಯಿ ಸಂಸ್ಥೆಯ ಅಸೋಸಿಯೇಶನ್‌ನ ಸೈಂಟ್ ಪಾವ್ಲ್ ಸಭಾಗೃಹದಲ್ಲಿ ನಡೆದ 75ನೇ ಸಂಸ್ಥಾಪನಾ ದಿನಾಚರಣೆ ಮತ್ತು ವಾರ್ಷಿಕೋತ್ಸವ ಸಂಭ್ರಮದಲ್ಲಿ ಅಮೃತ ಮಹೋತ್ಸವ ಆಚರಣೆಗೆ ಚಾಲನೆಯನ್ನಿತ್ತು “ಸೈಂಟ್ ಪಾವ್ಲ್ ಅಮೃತ ಮಹೋತ್ಸವ’ ಸ್ಮರಣ ಸಂಚಿಕೆಯ ಮುಖಪುಟವನ್ನು ಅನಾವರಣಗೊಳಿಸಿ ವಲೇರಿಯನ್ ಮಾತನಾಡಿದರು.
ಅತಿಥಿ ಅಭ್ಯಾಗತರಾಗಿ ಮಜಾYಂವ್ ಡಾಕ್ ಲಿಮಿಟೆಡ್ ಸಂಸ್ಥೆಯಸಹಾಯಕ ಮಹಾ ಪ್ರಬಂಧಕ ಅಲೊ#àನ್ಸ್ ಮಸ್ಕರೇನ್ಹಸ್, ಉದ್ಯಮಿಗಳಾದ ಸ್ಟೀವನ್ ಡಿಮೆಲ್ಲೋ, ಡೆನಿಸ್ ಕಾರ್ದೋಜಾ, ಹಿರಿಯ ಕವಿ, ಲೇಖಕ ವಿ. ಡಿಸಿಲ್ವಾ ಕಾಂಜೂರುಮಾರ್ಗ್, ಅಸೋಸಿಯೇಶನ್‌ನ ಹಿರಿಯ ಸದಸ್ಯ ಥೋಮಸ್ ನೊರೋನ್ಹಾ, ಉಪಸ್ಥಿತರಿದ್ದು ಸಂದಭೊìàಚಿತವಾಗಿ ಮಾತನಾಡಿ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು.
ಸಬಿನಾ ಡಿಮೆಲ್ಲೋ ಮತ್ತು ಎಲಿಜಾ ಮಾರ್ಟಿಸ್ ಅವರು ಅಧ್ಯಕ್ಷ ಸ್ಟೇನಿ ಫೆರ್ನಾಂಡಿಸ್ ಮತ್ತು ಪದಾಧಿಕಾರಿಗಳೊಂದಿಗೆ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನಿತ್ತು ಶುಭಹಾರೈಸಿದರು. ಗೌರವ ಕಾರ್ಯದರ್ಶಿ ಸ್ವಾಗತಿಸಿ ರಿಚಾರ್ಡ್ ಡಿ’ಸೋಜಾ ಸಂಸ್ಥೆಯ ಎಪ್ಪತ್ತೆ$çದರ ಸಾಮಾಜಿಕ ಸೇವಾ ಸಾಧನೆ, ಚಟುವಟಿಕೆ ತಿಳಿಸಿ ನಾವೆಲ್ಲರೂ ವಿಭಿನ್ನ ಪರಿವಾರದಿಂದ ಬಂದವರು. ಆದ್ದರಿಂದ ನಮ್ಮ ಮನೋಭಾವ, ಆಚಾರ ವಿಚಾರ, ನಡೆನುಡಿಗಳೂ ಭಿನ್ನವಾಗಿರುತ್ತವೆ. ಆದರೆ ಇಂತಹ ತಾರತಮ್ಯಗಳು ಸೈಂಟ್ ಪಾವ್É ಸಂಸ್ಥೆಯಲ್ಲಿ ಉದ್ಭವಿಸಿಲ್ಲ. ಆದ್ದರಿಂದ ಸಂಸ್ಥೆಯು ಎಲ್ಲರ ಪ್ರೀತ್ಯಾಧಾರಗಳಿಗೆ ಪಾತ್ರವಾಗಿ ಪ್ರತಿಷ್ಠಿತ ಸಂಸ್ಥೆಯಾಗಿ ಇಷ್ಟೆತ್ತರಕ್ಕೆ ಬೆಳೆದು ನಿಂತಿದೆ ಎಂದರು.
ವಾರ್ಷಿಕೋತ್ಸವದ ನಿಮಿತ್ತ ಬೆಳಗ್ಗೆ ಕೊಲಬಾದ ವುಡ್‌ಹೌಸ್ ಹೊಲಿನೇಮ್ ಕಾಥೆದ್ರಾಲ್‌ನಲ್ಲಿ ಸಂಭ್ರಮಿಕ ಅಭಿವಂದನಾ ಪೂಜೆ ನಡೆಸಲಾಗಿದ್ದು, ರೆ| ಫಾ| ರಿಚಾರ್ಡ್ ಡಿಸೋಜಾ ತ್ರಾಸಿ ಕೊಂಕಣಿಯಲ್ಲಿ ಪೂಜೆ ನೆರವೇರಿಸಿ ಅನುಗ್ರಹಿಸಿ, ನಾವು ಬರೇ ದಿನಾಚರಣೆ, ಹಬ್ಬಹರಿದಿನಗಳನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ನಾವು ಯಾರನ್ನು ಗೌರವಿಸುತ್ತೇವೆಯೋ ಅವರ ಜೀವನ ಶೈಲಿಯನ್ನು ನಮ್ಮಲ್ಲಿ ಅಳವಡಿಸಿ ಬಾಳಬೇಕು. ಆವಾಗಲೇ ಉತ್ಸವಗಳು ಅರ್ಥಪೂರ್ಣ ಆಗುತ್ತವೆ ಎಂದರು.
ಗೌರವ ಕೋಶಾಧಿಕಾರಿ ಮೈಕಲ್ ಲೊಬೋ, ಜೊತೆ ಕಾರ್ಯದರ್ಶಿ ಆ್ಯಂಟನಿ ನಜ್ರೆàತ್, ಜೊತೆ ಕೋಶಾಧಿಕಾರಿ ಸುನೀಲ್ ತಾವ್ರೋ ವೇದಿಕೆಯಲ್ಲಿ ಆಸೀನರಾಗಿದ್ದು, ಅಧ್ಯಕ್ಷ ಸ್ಟೇನಿ ಫೆರ್ನಾಂಡಿಸ್ ಅವರು ಅತಿಥಿಗಳು, ಉಪಸ್ಥಿತ ಹಿರಿಯ ಸದಸ್ಯರುಗಳಿಗೆ ಪುಷಗುಚ್ಚಗಳನ್ನಿತ್ತು ಗೌರವಿಸಿದರು. ವಿವಿಯನ್ ಮಚಾದೋ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರಸಾದ್ ನಜ್ರೆàತ್ ವಂದಿಸಿದರು. ಪ್ರವೀಣ್ ಅಲ್ಮೇಡ ಸಾಂತಾಕ್ಲೋಸ್ ಮೂಲಕ ನೆರೆದ ಸರ್ವರನ್ನು ರಂಜಿಸಿದರು.