Advertisement
ಜಿಲ್ಲಾಡಳಿತ ಪ್ರತೀ ವರ್ಷದಂತೆ ಮೇ 15ರಿಂದ ಸೆ. 15ರ ವರಗೆ ದ್ವೀಪಕ್ಕೆ ಜನ ಪ್ರವೇಶ ನಿರ್ಬಂಧ ಹೇರುತ್ತದೆ. ಈ ಸಮಯದಲ್ಲಿ ಪ್ರವಾಸಿ ಬೋಟುಯಾನಗಳು ಸ್ಥಗಿತಗೊಳ್ಳುತ್ತವೆ. ಮಲ್ಪೆ ಬೀಚ್‌ನಲ್ಲೂ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಇರುತ್ತದೆ. ಇದೀಗ ಸೆ. 26ರಿಂದ ಮತ್ತೆ ತೆರೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಳೆಗಾಲದಲ್ಲಿ ನಾಲ್ಕು ತಿಂಗಳಿಂದ ಇಲ್ಲಿ ಜನಸಂಚಾರ ಇರದೇ ಬೆಳೆದು ನಿಂತ ಹುಲ್ಲನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತದೆ. ಐಲ್ಯಾಂಡ್ ಸುತ್ತ ಸಮುದ್ರತೀರದಲ್ಲಿ ಕಸಕಡ್ಡಿ, ಪ್ಲಾಸಿಕ್ ತ್ಯಾಜ್ಯಗಳು ದಡದಲ್ಲಿ ಸಂಗ್ರಹವಾಗಿದ್ದು ಇದೀಗ ಸ್ವಚ್ಛಗೊಳಿಸಲಾಗುತ್ತಿದೆ. ಐಲ್ಯಾಂಡ್‌ನ ಪ್ರವೇಶ ದ್ವಾರ, ವೈಟಿಂಗ್ ಲಾಂಚ್, ಕ್ಯಾಂಟೀನ್, ಶೌಚಾಲಯದ ದುರಸ್ತಿ ಪಡಿಸಲಾಗುತ್ತದೆ. ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯಿಂದ ಎಲ್ಲ ಕೆಲಸಗಳು ನಡೆಯುತ್ತಿವೆ. ಐಲ್ಯಾಂಡ್‌ನ್ನು ಸ್ವಚ್ಛಗೊಳಿಸಲು ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ. ಈ ಬಾರಿ ಪ್ರವಾಸಿಗರ ಸುರಕ್ಷೆೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಸಮುದ್ರದ ವಾತಾವರಣ ಹಾಗೂ ಐಲ್ಯಾಂಡಿನ ಸ್ಥಿತಿಗತಿಯನ್ನು ನೋಡಿಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುವುದು.
-ಎಂ. ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ
Related Articles
Advertisement