Advertisement

ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾ ಪುಣ್ಯಕ್ಷೇತ್ರ: ಫೆ. 20ರಿಂದ 24ರ ತನಕ ವಾರ್ಷಿಕ ಮಹೋತ್ಸವ

01:08 AM Feb 15, 2022 | Team Udayavani |

ಕಾರ್ಕಳ: ಸ್ಥಳೀಯ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಫೆ. 20ರಿಂದ 24ರ ವರೆಗೆ ಕೋವಿಡ್‌-19 ಮಾರ್ಗದರ್ಶಿ ನಿಯಮಗಳ ಪ್ರಕಾರ ಜರಗಲಿದೆ.

Advertisement

ಈ ಅವಧಿಯಲ್ಲಿ ಒಟ್ಟು 30 ಬಲಿಪೂಜೆಗಳು ಜರಗಲಿವೆ. ಫೆ. 20ರ ಬೆಳಗ್ಗೆ 10ಕ್ಕೆ ಶಿವಮೊಗ್ಗದ ಧರ್ಮಾಧ್ಯಕ್ಷ ಅ|ವಂ| ಫ್ರಾನ್ಸಿಸ್‌ ಸೆರಾವೊ ಎಸ್‌.ಜೆ., ಸಂಜೆ 4ಕ್ಕೆ ಮಂಗಳೂರು ಧರ್ಮಾಧ್ಯಕ್ಷ ಅ|ವಂ| ಪೀಟರ್‌ ಪಾವ್ಲ್ ಸಲ್ಡಾನ್ಹಾ, ಫೆ. 21ರ ಬೆಳಗ್ಗೆ 10ಕ್ಕೆ ಉಡುಪಿ ಧರ್ಮಾಧ್ಯಕ್ಷ ಅ|ವಂ| ಜೆರಾಲ್ಡ್‌ ಲೋಬೋ, ಫೆ. 22ರ ಬೆಳಗ್ಗೆ 10ಕ್ಕೆ ಬಳ್ಳಾರಿ ಧರ್ಮಾಧ್ಯಕ್ಷ ಅ|ವಂ| ಹೆನ್ರಿ ಡಿ’ಸೋಜಾ, ಫೆ. 23ರ ಬೆಳಗ್ಗೆ 10ಕ್ಕೆ ನಿವೃತ್ತ ಧರ್ಮಾಧ್ಯಕ್ಷ ಅ|ವಂ| ಅಲೋಶಿಯಸ್‌ ಪಾವ್ಲ್ ಡಿ’ ಸೋಜಾ, ಫೆ. 24ರ ಸಂಜೆ 4ಕ್ಕೆ ಬೆಳ್ತಂಗಡಿ ಧರ್ಮಾಧ್ಯಕ್ಷ ಅ|ವಂ| ಲಾರೆನ್ಸ್‌ ಮುಕ್ಕುಯಿ ಅವರು ಉತ್ಸವದ ವಿಶೇಷ ಬಲಿಪೂಜೆ ನೆರವೇರಿಸುವರು.

ಇದನ್ನೂ ಓದಿ:ಉಚ್ಚ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು : ಸಿಎಂ ಬೊಮ್ಮಾಯಿ

ಈ ದಿನಗಳಲ್ಲಿ ಬೆಳಗ್ಗೆ 8, 10, 12, ಅಪರಾಹ್ನ 2, 4, 7 ಗಂಟೆ ಸಹಿತ 6 ಬಲಿಪೂಜೆ ನಡೆಯಲಿವೆ ಎಂದು ಧರ್ಮಕೇಂದ್ರದ ನಿರ್ದೇಶಕ, ಪ್ರ. ಗುರು ವಂ| ಅಲ್ಬನ್‌ ಡಿ’ಸೋಜಾ; ಕೇಂದ್ರದ ಪಾಲನ ಮಂಡಳಿ ಉಪಾಧ್ಯಕ್ಷ ಸಂತೋಷ್‌ ಡಿ’ಸಿಲ್ವಾ ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next