Advertisement

ನಾರಾವಿ: ಸಂತ ಅಂತೋನಿ ಕನ್ನಡ,ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳು

08:11 PM Apr 19, 2019 | Sriram |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ನಾರಾವಿಯ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳು ಹಲವಾರು ವರ್ಷಗಳಿಂದ ನಾರಾವಿ ಪರಿಸರದ ಹಾಗೂ ಆಸುಪಾಸಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಯಶಸ್ವಿ ಪಾತ್ರ ನಿರ್ವಹಿಸುತ್ತಿವೆ. ಸಂಸ್ಥೆಗೆ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳೇ ಹೆಚ್ಚಾಗಿ ಆಗಮಿಸುತ್ತಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ.

Advertisement

ಕನ್ನಡ, ಆಂಗ್ಲ ಮಾಧ್ಯಮದಲ್ಲಿ ವಿದ್ಯಾರ್ಜನೆಗೆ ಅವಕಾಶ ಸಂಸ್ಥೆಯಲ್ಲಿ ಎಲ್‌ಕೆಜಿ, ಯುಕೆಜಿಯಿಂದ ಪದವಿ ಕಾಲೇಜಿನವರೆಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ವಿದ್ಯಾರ್ಜನೆಗೆ ಅವಕಾಶವಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಇತರ ಪಠ್ಯೇತರ ವಿಚಾರಗಳಲ್ಲಿಯೂ ತೊಡಗಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಪ್ರಸ್ತುತ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಗೆಯ್ಯುತ್ತಿದ್ದಾರೆ.

ಮೌಲ್ಯಾಧಾರಿತ ಶಿಕ್ಷಣ
ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ಬಿಕಾಂ., ಎ ಗ್ರೇಡ್‌ ಮಾನ್ಯತೆ ಹೊಂದಿರುವ ಸಂತ ಅಂತೋನಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ, ಸಂತ ಪೌಲ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ, ನಾರಾವಿ ಚರ್ಚ್‌ ಪ್ರೌಢಶಾಲೆ, ಸಂತ ಪೌಲ್‌ ಕನ್ನಡ ಮಾಧ್ಯಮ ಶಾಲೆ, ನಾರಾವಿ ಶಾಲೆಗಳು ಮಂಗಳೂರು ಕೆಥೊಲಿಕ್‌ ಬೋರ್ಡ್‌ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ.

ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಬಿಷಪ್‌ ಡಾ| ಪೀಟರ್‌ ಪೌಲ್‌ ಸಲ್ಡಾನ, ಸಂಚಾಲಕರಾಗಿ ವಂ| ಸೈಮನ್‌ ಡಿ’ಸೋಜಾ, ಪ್ರಾಂಶುಪಾಲರಾಗಿ ವಂ| ಅರುಣ್‌ ವಿಲ್ಸನ್‌ ಲೋಬೋ ಹಾಗೂ ನುರಿತ ಶಿಕ್ಷಕ ವೃಂದದವರು ಹಾಗೂ ಸಿಬಂದಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿದ್ದಾರೆ.

ವಿಶೇಷಗಳು
5ನೇ ತರಗತಿಯಿಂದ ಪದವಿಯವರೆಗೆ ಬಾಲಕ- ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ಸೌಲಭ್ಯ, ಬಸ್‌ ವ್ಯವಸ್ಥೆ, ಸುಸಜ್ಜಿತ ತರಗತಿ ಕೊಠಡಿ, ಆಟದ ಮೈದಾನ, ಮೌಲ್ಯಾಧಾರಿತ ಶಿಕ್ಷಣ, ಗುಣಮಟ್ಟದ ಕೌಶಲಾಭಿವೃದ್ಧಿಗೆ ಪೂರಕ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ.

Advertisement

ವಿಶೇಷ ತರಗತಿ
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ ಗಳಿಗೆ ವಿಶೇಷ ತರಗತಿ ನಡೆಸುವುದು, ವಿಜ್ಞಾನ ವಿಭಾಗದಲ್ಲಿ ಸುಸಜ್ಜಿತವಾದ ಲ್ಯಾಬ್‌, ಆಡಿಯೋ ವಿಜುವಲ್‌ ರೂಂ, ಸುಸಜ್ಜಿತ ಗ್ರಂಥಾಲಯ, ಸಿಇಟಿ ಕೋಚಿಂಗ್‌, ಬಡ ಹಾಗೂ ಮೆರಿಟ್‌ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ವ್ಯವಸ್ಥೆಯಿದೆ.

ಸಾಧನೆಗೆ ಪೂರಕ ಸೌಲಭ್ಯ
ಸುದೀರ್ಘ‌ ಇತಿಹಾಸವುಳ್ಳ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆಗೈದ ಹಲವಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮಗಳಲ್ಲಿ ನಾವು ನೀಡುವಂತಹ ಶಿಕ್ಷಣ, ಬಡಮಕ್ಕಳಿಗೆ ಸಿಗುವಂತಹ ಹಾಸ್ಟೆಲ್‌ ಸೌಲಭ್ಯ, ಪ್ರತಿ ವರ್ಷ ಮಕ್ಕಳ ಧನಾತ್ಮಕ ಪ್ರಗತಿ, ಶಿಕ್ಷಣದ ಬೆಳವಣಿಗೆಯಲ್ಲಿ ಸೃಜನಶೀಲತೆ ಹಾಗೂ ಉನ್ನತ ಸಾಧನೆಗೆ ಪೂರಕವಾದಂತಹ ಸೌಲಭ್ಯಗಳು, ಇವೆಲ್ಲವೂ ನಮ್ಮ ಶಿಕ್ಷಣ ಸಂಸ್ಥೆಯನ್ನು ಗುರುತಿಸುವಂತೆ ಮಾಡಿದೆ ಎನ್ನುತ್ತಾರೆ ಸಂಚಾಲಕರಾದ ವಂ| ಸೈಮನ್‌ ಡಿ’ಸೋಜಾ.

ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಕಾಳಜಿ
ನಾರಾವಿಯ ಸಂತ ಅಂತೋನಿ ಧರ್ಮಕೇಂದ್ರ ಆರಂಭಗೊಂಡು ಸರಿಸುಮಾರು 114 ವರ್ಷಗಳು ಕಳೆದವು. ಶಿಕ್ಷಣತಜ್ಞ ದಿ| ವಂ| ಫಾವೊಸ್ತಿನ್‌ ಕೋರ್ಟಿಯವರ ಶ್ರಮದಿಂದ ಪ್ರಾರಂಭಗೊಂಡ ಈ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತಾ ಬಂದಿವೆ. ವಿದ್ಯಾರ್ಥಿಗಳ ಹೆತ್ತವರ ಹಾಗೂ ಸಂಸ್ಥೆಯ ಮಧ್ಯೆ ಅವಿನಾಭಾವ ಸಂಬಂಧವಿದೆ. ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿಯನ್ನು ನೀಡುವಂತಹ ವ್ಯವಸ್ಥೆಯನ್ನು ನಮ್ಮ ಸಂಸ್ಥೆ ನೀಡುತ್ತದೆ. ನಮ್ಮ ಸಂಸ್ಥೆಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಕಾಳಜಿ ವಹಿಸುತ್ತಿವೆ ಎನ್ನುತ್ತಾರೆ ಪ್ರಾಂಶುಪಾಲರಾದ ವಂ| ಅರುಣ್‌ ವಿಲ್ಸನ್‌ ಲೋಬೊ.

Advertisement

Udayavani is now on Telegram. Click here to join our channel and stay updated with the latest news.

Next