Advertisement
ಮುಖ್ಯ ಅತಿಥಿಯಾಗಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಂ. ವಿನಯ ಹೆಗ್ಡೆ ಪದವಿ ಪ್ರದಾನ ಭಾಷಣಗೈದರು. ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪದವಿ ಪಡೆದಿರುವುದು ಸಾಧನೆ ನಿಜ. ಆದರೆ ಅದು ವಿದ್ಯೆಯ ಕೊನೆಯಲ್ಲ, ಅರ್ಥಪೂರ್ಣ ಕಲಿಯುವಿಕೆಯ ಆರಂಭ ಎಂದರು.
ಪದವಿ ಶಿಕ್ಷಣ ಪಡೆದವರ ಮೇಲೆ ಬಹಳ ದೊಡ್ಡ ಹೊಣೆಗಾರಿಕೆ ಇದೆ, ಕನಸುಗಳನ್ನು ವಾಸ್ತವವಾಗಿ ಪರಿವರ್ತಿಸುವ ಸವಾಲಿನ ಸಮಯ ಇಲ್ಲಿಂದಲೇ ಆರಂಭವಾಗುತ್ತದೆ. ಬದುಕಿನ ಗಂಭೀರ ಸಾಧನೆಗೂ ಇಲ್ಲಿಂದಲೇ ತೊಡಗಬೇಕು. ಇದಕ್ಕೆ ಅಡೆ ತಡೆಗಳಿರುವುದು ಸಹಜ. ಆದರೆ ಎಲ್ಲ ತಡೆಗಳಿಗಿಂತ ನಮ್ಮ ಮನಸ್ಸಿನ ಆಗದು ಎಂಬ ಭಾವನೆಯೇ ದೊಡ್ಡ ತೊಡಕು. ಇದನ್ನು ಹೋಗಲಾಡಿಸಿದರೆ ಏನನ್ನೂ ಸಾಧಿಸಬಹುದು ಎಂದರು. ಅಧ್ಯಕ್ಷತೆಯನ್ನು ಕಾಲೇಜಿನ ಜಂಟಿ ಕಾರ್ಯದರ್ಶಿ ಡಾ| ಸಿ. ಎಂ. ಮರಿಯ ರೂಪಾ ಎ.ಸಿ. ವಹಿಸಿದ್ದರು. ಪ್ರಾಂಶು ಪಾಲೆ ಡಾ| ಸಿ. ಎಂ. ಜೆಸ್ವೀನಾ ಎ.ಸಿ. ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ರಿಜಿಸ್ಟ್ರಾರ್ ಚಾರ್ಲ್ಸ್ ಸ್ಟಾನಿ ಪಾಯಸ್, ಆಡಳಿತ ಮಂಡಳಿ ಸದಸ್ಯರು, ವಿವಿಧ ಡೀನ್‌ಗಳು ಉಪ ಸ್ಥಿತರಿದ್ದರು. ಡಾ| ಈಟಾ ಗೊನ್ಸಾಲ್ವಿಸ್ ಸ್ವಾಗತಿಸಿದರು. ಡಾ| ಕಾವ್ಯಶ್ರೀ ವಂದಿಸಿದರು. ಬಿಬಿಎ ವಿಭಾಗ ಮುಖ್ಯಸ್ಥೆ ಸಬೀನಾ ಡಿ’ ಸೋಜಾ ಕಾರ್ಯಕ್ರಮ ನಿರೂಪಿಸಿದರು.