Advertisement

SSMB29: ರಾಜಮೌಳಿ ಸಿನಿಮಾಕ್ಕೆ ಮಹೇಶ್‌ ಬಾಬು ಲುಕ್‌ ಟೆಸ್ಟ್; ಬಹು ಅವತಾರದಲ್ಲಿ ಪ್ರಿನ್ಸ್?

11:45 AM Mar 05, 2024 | Team Udayavani |

ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್.ಎಸ್‌ ರಾಜಮೌಳಿ – ಮಹೇಶ್‌ ಬಾಬು ಕಾಂಬಿನೇಷನ್‌ ನಲ್ಲಿ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ಬರುತ್ತಿರುವುದು ಗೊತ್ತೇ ಇದೆ. ಈ ಸಿನಿಮಾಕ್ಕೆ ʼSSMB29ʼ ಎಂದು ಟೈಟಲ್‌ ಇಡಲಾಗಿದೆ.

Advertisement

“ಇದೊಂದು ವಿಶ್ವ ಪರ್ಯಟನೆಯುಳ್ಳ ಸಾಹಸಮಯವದ ಸಿನಿಮಾ, ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕರನ್ನು ಸೆಳೆಯಲಿದೆ. ಇದು ಜೇಮ್ಸ್‌ ಬಾಂಡ್‌ ಅಥವಾ ಇಂಡಿಯಾನ ಜೋನ್ಸ್‌  ಸಾಹಸದ ಹಾಗೆ ಭಾರತೀಯ ಶೈಲಿಯಲ್ಲಿ ಮೂಡಿಬರುವ ಚಿತ್ರ. ಥಿಯೇಟರ್‌ ನಲ್ಲಿ ಈ ಸಿನಿಮಾ ಎಲ್ಲರನ್ನೂ ರೋಮಾಂಚನಗೊಳಿಸಲಿದೆ” ಎಂದು ರಾಜಮಾಳಿ ಈ ಹಿಂದೆ ಹೇಳಿದ್ದರು.

ತೆರೆಮರೆಯಲ್ಲಿ ಸಿನಿಮಾದ ತಯಾರಿ ಜೋರಾಗಿ ನಡೆಯುತ್ತಿದ್ದು, ಇತ್ತೀಚೆಗೆ ಮಹೇಶ್‌ ಬಾಬು ಅವರು ಸಿನಿಮಾದಲ್ಲಿನ ವಿಭಿನ್ನ ಲುಕ್‌ ಗಳನ್ನು ಟೆಸ್ಟ್‌ ಮಾಡಿದ್ದಾರೆ ಎಂದು ʼತೆಲುಗು 123ʼ ವರದಿ ಮಾಡಿದೆ.

ಸಿನಿಮಾದಲ್ಲಿ ಮಹೇಶ್‌ ಬಾಬು ಬಹು ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರಗಳು ವಿಭಿನ್ನವಾಗಿರಲಿದೆ. ಅದಕ್ಕಾಗಿ ನಿರ್ದೇಶಕ ರಾಜಮೌಳಿ ಅವರೇ ಮಹೇಶ್‌ ಬಾಬು ಅವರ ಲುಕ್ ಟೆಸ್ಟ್‌ ಗಳನ್ನು ಮಾಡಿಸಿದ್ದಾರೆ. ಇದರಲ್ಲಿ ಒಟ್ಟು ಎಂಟು ವಿಭಿನ್ನ ಲುಕ್‌ ಗಳನ್ನು ಅಂತಿಮಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

ಇನ್ನು ಸಿನಿಮಾದ ನಾಯಕಿಯ ವಿಚಾರಕ್ಕೆ ಬಂದರೆ, ಖ್ಯಾತ ನಟಿ ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದಲ್ಲದೆ ಇಂಡೋನೇಷಿಯಾದ ನಟಿ ಚೆಲ್ಸಿಯಾ ಇಸ್ಲಾನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Advertisement

ಅಡ್ವೆಂಚರ್‌ ಜಂಗಲ್‌, ಸಾಹಸಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ರಾಮಾಯಣದ ಹನುಮಂತನಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next