ಗುಂಡ್ಲುಪೇಟೆ: ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ರೈತನ ಮಗಳಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಚಿಕ್ಕತುಪ್ಪೂರು ಗ್ರಾಮದ ಸ್ಫೂರ್ತಿ ಮನೆಗೆ ಭೇಟಿ ನೀಡಿದ ಶಾಸಕ ನಿರಂಜನ್‌ಕುಮಾರ್ ಶಾಲು ಹೊದಿಸಿ ಆಕೆಯನ್ನು ಗೌರವಿಸಿದರು.
ತಾಲೂಕಿನ ಚಿಕ್ಕತುಪ್ಪೂರು ಮಹೇಶ್‌ರ ಮಗಳಾದ ಸ್ಫೂರ್ತಿ ಪಟ್ಟಣದ ಸೆಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 618 ಅಂಕಗಳನ್ನು ಪಡೆದು ಚಾಮರಾಜನಗರ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಳು.
ತಾಲೂಕಿಗೆ ಹೆಮ್ಮೆ ತಂದ ವಿದ್ಯಾರ್ಥಿನಿ ಸ್ಫೂರ್ತಿಗೆ ಅವರ ಚಿಕ್ಕತುಪ್ಪೂರು ನಿವಾಸಕ್ಕೆ ಭೇಟಿ ನೀಡಿ ಶಾಸಕ ನಿರಂಜನ್‌ಕುಮಾರ್ ಸನ್ಮಾನಿಸಿದರು. ಈ ವೇಳೆ ಗ್ರಾಪಂ ಸದಸ್ಯ ಗೌರಿಶಂಕರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಪುರಸಭಾ ಸದಸ್ಯ ಗೋವಿಂದರಾಜು ಇದ್ದರು.
ಪಿಯುಸಿ ಟಾಪರ್ ಸುರೇಶ್‌ಗೂ ಸನ್ಮಾನ: ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಕೂಲಿ ಕಾರ್ಮಿಕರ ಪುತ್ರ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸುರೇಶ್ ಮನೆಗೆ ಭೇಟಿ ನೀಡಿದ ಶಾಸಕ ನಿರಂಜನ್‌ಕುಮಾರ್ ಶಾಲು ಹೊದಿಸಿ ಗೌರವಿಸಿದರು.
ಅಣ್ಣೂರು ಕೇರಿ ನಿವಾಸಿಯಾದ ಹಿಂದುಳಿದ ಉಪ್ಪಾರ ಜನಾಂಗಕ್ಕೆ ಸೇರಿದ ಸುರೇಶ್ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ಪೋಷಕರು ಇಂದಿಗೂ ಕೂಲಿಗೆ ತೆರಳಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಕಡು ಬಡತನದಲ್ಲಿಯೂ ಕೂಡಾ ಈ ಸಾಧನೆ ಮಾಡಿರುವ ಸುರೇಶ್‌ಗೆ ಹುರಿದುಂಬಿಸಿ ಸ್ಫೂರ್ತಿ ತುಂಬಿದ ನಿರಂಜನ್ ಸುರೇಶ್ ಅವರ ಪೋಷಕರನ್ನು ಶ್ಲಾಘಿಸಿದರು.