Advertisement

ಎಸ್ಸೆಸ್ಸೆಲ್ಸಿ ಫಲಿತಾಂಶ : ಆಶಾ ಕಾರ್ಯಕರ್ತೆಯ ಮಗಳಿಗೆ 625 ಅಂಕ

01:20 PM Aug 10, 2021 | Team Udayavani |

ಬಾಗಲಕೋಟೆ: ಕೋವಿಡ್ ಸಂಕಷ್ಟದ ಮಧ್ಯೆಯೂ ಆನ್‌ಲೈನ್‌ ಮೂಲಕ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಫಲಿತಾಂಶ ಬಂದಿದ್ದು, ತಾಲೂಕಿನ ಮುಚಖಂಡಿ ತಾಂಡಾ ನಂ.1ರ ವಿದ್ಯಾರ್ಥಿನಿ ಗಂಗಮ್ಮ ಬಸಪ್ಪ ಹುಡೇದ (ಟಕ್ಕಳಕಿ) 625ಕ್ಕೆ 625ಕ್ಕೆ ಪಡೆಯುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾಳೆ.

Advertisement

ತಾಲೂಕಿನ ಮುಚಖಂಡಿ ಗ್ರಾಮದ ಇಲೆಕ್ಟ್ರಿಕಲ್‌ ಕೆಲಸ ಮಾಡಿಕೊಂಡಿರುವ ತಂದೆ ಬಸಪ್ಪ, ಆಶಾ ಕಾರ್ಯಕರ್ತೆ ಆಗಿರುವ ಗೀತಾ ಅವರ ಪುತ್ರಿ ಗಂಗಮ್ಮ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾಳೆ. ಮಗಳ ಈ ಸಾಧನೆಗೆ ಹುಡೇದ ದಂಪತಿ ಹಾಗೂ ಇಡೀ ಮುಚಖಂಡಿ ಗ್ರಾಮ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಮುಚಖಂಡಿ ತಾಂಡಾ ನಂ.1ರ ಶ್ರೀ ದುರ್ಗಾದೇವಿ ಪ್ರೌಢಶಾಲೆಯಲ್ಲಿ 9 ಮತ್ತು 10ನೇ ತರಗತಿ ಅಧ್ಯಯನ ಮಾಡಿದ ಗಂಗಮ್ಮ, 1ರಿಂದ 4ನೇ ತರಗತಿಯನ್ನು ವಿವೇಕಾನಂದ ಪ್ರಾಥಮಿಕ ಶಾಲೆ, 5ರಿಂದ 7ರ ವರೆಗೆ ಮುಚಖಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 9 ಮತ್ತು 10ನೇ ತರಗತಿಯನ್ನು ಮುಚಖಂಡಿ ತಾಂಡಾ ನಂ.1ರ ದುರ್ಗಾದೇವಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಳೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯವೇ ಗಮನ ಸೆಳೆಯುವ ಸಾಧನೆ ಮಾಡಿರುವ ವಿದ್ಯಾರ್ಥಿನಿ ಗಂಗಮ್ಮ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅನಾರೋಗ್ಯದಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ತಾಯಿ ಗೀತಾ, ಆನಂದದ ಕಣ್ಣೀರು ಹಾಕಿ, ನನ್ನ ಮಗಳು ಕ್ರಿಯಾಶೀಲವಾಗಿದ್ದು, ಅಧ್ಯಯನದಲ್ಲಿ ಚುರುಕಾಗಿದ್ದಾಳೆ. ಆದರೆ, ಹಾರ್ಟ್‌ ಸಮಸ್ಯೆಯಿದ್ದರೂ ನಿತ್ಯವೂ ಅಧ್ಯಯನ ಮಾಡಿ ಅತೀ ಹೆಚ್ಚು ಅಂಕ ಪಡೆದಿರುವುದು ಖುಷಿ ನೀಡಿದೆ ಎಂದು ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next