Advertisement

SSLC, ದ್ವಿತೀಯ ಪಿಯು: ಮೊದಲ ಪರೀಕ್ಷೆಗೆ ನೋಂದಣಿ ಕಡ್ಡಾಯ

11:59 AM Feb 21, 2024 | Shreeram Nayak |

ಬೆಂಗಳೂರು: ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ಕ್ಕೆ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಪರೀಕ್ಷೆ-1ಕ್ಕೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಆ ಬಳಿಕ ಮೂರರಲ್ಲಿ ಯಾವುದಾದರೂ ಪರೀಕ್ಷೆಗೆ ಹಾಜರಾಗಬಹುದು. ಯಾವುದೇ ವಿಷಯದಲ್ಲಿ ಹಾಜರಾದ ವಿಷಯದಲ್ಲಿ ಪಡೆದ ಗರಿಷ್ಠ ಅಂಕವನ್ನು ಪರಿಗಣಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆ-1ಯ ಪೂರ್ವಭಾವಿ ಸಿದ್ಧತೆ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ಹಂಚಿಕೊಂಡರು.

Advertisement

ಈ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಕ್ರಮದಲ್ಲಿ 80 ಅಂಕಗಳಿಗೆ ಲಿಖೀತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಅಳವಡಿಸಿಕೊಳ್ಳಲಾಗಿದೆ. ಹಾಗೆಯೇ ರೆಗ್ಯುಲರ್‌ ವಿದ್ಯಾರ್ಥಿಗಳಿಗೆ ವಿತರಿಸುವ 80 ಅಂಕಗಳ ಪ್ರಶ್ನೆ ಪತ್ರಿಕೆಗಳನ್ನೇ ಖಾಸಗಿ ಅಭ್ಯರ್ಥಿಗಳಿಗೂ ವಿತರಿಸಲಾಗುತ್ತದೆ. ಖಾಸಗಿ ಅಭ್ಯರ್ಥಿಗಳು 80 ಅಂಕಗಳಿಗೆ ಗಳಿಸುವ ಅಂಕಗಳನ್ನು ನೂರು ಅಂಕಗಳಿಗೆ ಪರಿವರ್ತಿಸಿ ಫ‌ಲಿತಾಂಶ ಪ್ರಕಟಿಸಲಾಗುವುದು ಎಂದರು.

ವಿದ್ಯಾರ್ಥಿಗಳ ಗೊಂದಲ ಪರಿಹಾರಕ್ಕಾಗಿ ಮಂಡಳಿಯ ಜಾಲತಾಣದಲ್ಲಿ ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳನ್ನು ಸಿದ್ಧಪಡಿಸಿ ಪ್ರಕಟಿಸಲಾಗಿದೆ. ಪರೀಕ್ಷೆಯ ಮಾಹಿತಿಯನ್ನೊಳಗೊಂಡ ಪೋಸ್ಟರ್‌ಗಳನ್ನೂ ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ-2 2024ರ ಎಪ್ರಿಲ್‌ ಕೊನೆಯ ವಾರದಲ್ಲಿ ಹಾಗೂ ಎಸೆಸೆಲ್ಸಿ ಪರೀಕ್ಷೆ -2 ಮೇ ಮೂರನೇ ವಾರದಲ್ಲಿ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದ್ದಾರೆ.

ಒಂದು ತಿಂಗಳಲ್ಲಿ ಅಂಕಪಟ್ಟಿ
ತೇರ್ಗಡೆ ಹೊಂದಿದವರಿಗೆ ತುರ್ತಾಗಿ ಅಂಕಪಟ್ಟಿ ಅಗತ್ಯವಿದ್ದಲ್ಲಿ ಡಿಜಿಲಾಕರ್‌ನಿಂದ ಪಡೆಯಬಹುದು. ಒಂದು ವೇಳೆ ವಿದ್ಯಾರ್ಥಿ ಮೊದಲ ವಾರ್ಷಿಕ ಪರೀಕ್ಷೆ ಮಾತ್ರ ಬರೆಯುವ ನಿರ್ಧಾರ ಕೈಗೊಂಡಿದ್ದರೆ ಫ‌ಲಿತಾಂಶ ಪ್ರಕಟಗೊಂಡ ತಿಂಗಳೊಳಗೆ ಅಂಕಪಟ್ಟಿ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

Advertisement

ಮಾ.1ರಿಂದ 22ರ ವರೆಗೆ ದ್ವಿತೀಯ ಪಿಯು, ಮಾ.25 ರಿಂದ ಎ.6ರವರೆಗೆ ಎಸೆಸೆಲ್ಸಿ ಪರೀಕ್ಷೆ
ಮಾ.1ರಿಂದ 22ರ ವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು 3,30,644 ಬಾಲಕರು ಮತ್ತು 3,67,980 ಬಾಲಕಿಯರು ಸೇರಿ ಒಟ್ಟು 6,98,624 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 1,124 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಸೆಸೆಲ್ಸಿ ಪರೀಕ್ಷೆ ಮಾ.25 ರಿಂದ ಎ.6ರ ವರೆಗೆ ನಡೆಯಲಿದ್ದು, 4,58,427 ಬಾಲಕರು ಮತ್ತು 4,37,844 ಬಾಲಕಿಯರು ಸಹಿತ ಒಟ್ಟು 8,96,271 ವಿದ್ಯಾರ್ಥಿಗಳ ನೋಂದಣಿ ನಡೆದಿದ್ದು, ಶೇ.75ರ ಹಾಜರಾತಿ ಕಡ್ಡಾಯ ನಿಯಮದನ್ವಯ ಈ ಸಂಖ್ಯೆ ಕಡಿಮೆ ಆಗುವ ಸಂಭವವಿದೆ. 2,747 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ನ್ಯಾಯಾಲಯದ ಆದೇಶದಂತೆ ವಸ್ತ್ರಸಂಹಿತೆ
ಪರೀಕ್ಷಾ ಕೇಂದ್ರ ಪ್ರವೇಶ‌ಕ್ಕೆ ವಸ್ತ್ರ ಸಂಹಿತೆ ಬಗ್ಗೆ ನ್ಯಾಯಾಲಯದ ತೀರ್ಮಾನದ ಪ್ರಕಾರ ನಡೆದುಕೊಳ್ಳಲಾಗುವುದು. ಹಿಜಾಬ್‌ ಪ್ರಕರಣ ನ್ಯಾಯಾಲಯದಲ್ಲಿದ್ದು, ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು ಎಂದು ಸಚಿವರು ಹೇಳಿದರು.

ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿ
ಮಾ. 25: ಪ್ರಥಮ ಭಾಷೆ (ಕನ್ನಡ, ತೆಲುಗು , ಹಿಂದಿ,ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌)
ಮಾ. 27: ಸಮಾಜ ವಿಜ್ಞಾನ
ಮಾ. 30: ವಿಜ್ಞಾನ, ರಾಜ್ಯಶಾಸ್ತ್ರ
ಏ. 2: ಗಣಿತ, ಸಮಾಜ ಶಾಸ್ತ್ರ
ಏ. 3: ಅರ್ಥಶಾಸ್ತ್ರ
ಏ. 4: ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲೀಷ್‌, ಅರೆಬಿಕ್‌, ಪರ್ಶಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು)
ಏ. 6: ದ್ವಿತೀಯ ಭಾಷೆ (ಇಂಗ್ಲೀಷ್‌, ಕನ್ನಡ)
* ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆಯಲಿದೆ

ಪಿಯುಸಿ ವೇಳಾಪಟ್ಟಿ
ಮಾ. 1: ಕನ್ನಡ, ಅರೇಬಿಕ್‌ ಪರೀಕ್ಷೆ
ಮಾ. 4: ಗಣಿತ
ಮಾ. 5: ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ
ಮಾ.6: ಮಾಹಿತಿ ತಂತ್ರಜ್ಞಾನ, ರೀಟೈಲ…, ಆಟೋ ಮೊಬೈಲ…
ಮಾ.7: ಇತಿಹಾಸ , ಭೌತಶಾಸ್ತ್ರ
ಮಾ. 9: ಐಚ್ಛಿಕ ಕನ್ನಡ,ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ,ಗೃಹ ವಿಜ್ಞಾನ
ಮಾ.11: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾ. 13: ಇಂಗ್ಲಿಷ್‌
ಮಾ.15: ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ
ಮಾ. 16: ಅರ್ಥಶಾಸ್ತ್ರ
ಮಾ. 18: ಭೂಗೋಳ ಶಾಸ್ತ್ರ, ಜೀವಶಾಸ್ತ್ರ
ಮಾ. 20: ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಮಾ. 22: ಹಿಂದಿ
* ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಿ ಮಧ್ಯಾಹ್ನ 1.30ಕ್ಕೆ ಮುಕ್ತಾಯ

Advertisement

Udayavani is now on Telegram. Click here to join our channel and stay updated with the latest news.

Next