ಪರೀಕ್ಷೆ ಸಾಂಗವಾಗಿ ಜರಗಿದ್ದು ಗೊಂದಲಕ್ಕೆ ಅವಕಾಶ ಒದಗಿಸಲಿಲ್ಲ.
ಪ್ರಶ್ನೆ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ ಅಂಕಗಳ ಬೆನ್ನತ್ತು ವವರ ಪಾಲಿಗೆ ತುಸು ಕಠಿನವಾಗಿದೆ. ಆದರೆ ಸರಿಯಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಯಾಗದ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ಇತ್ತು. ಎಂದಿನ ಸಿದ್ಧ ಸೂತ್ರದ ಬದಲಾಗಿ ಸ್ವಲ್ಪ ವಿಭಿನ್ನ ರೀತಿಯ ಪ್ರಶ್ನೆ ಪತ್ರಿಕೆ ಇತ್ತು. ಆದರೂ ವಿದ್ಯಾರ್ಥಿಗಳು ಗೊಂದಲಗೊಂಡಿಲ್ಲ. ಕಲಿಯುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಪ್ರಶ್ನೆ ಪತ್ರಿಕೆ ಎಂದು ಶಿಕ್ಷಕರು ಪ್ರತಿಕ್ರಿಯಿಸಿದರು.
Advertisement
ಮಂಗಳೂರು: ಮಂಗಳವಾರ ನಡೆದ ವಿಜ್ಞಾನ ಮತ್ತು ರಾಜ್ಯಶಾಸ್ತ್ರ ಪರೀಕ್ಷೆಗೆ ಒಟ್ಟು 501 ಮಂದಿ ಗೈರಾಗಿದ್ದಾರೆ. ವಿಜ್ಞಾನ ಪರೀಕ್ಷೆಗೆ 29,907 ಮಂದಿಯ ಪೈಕಿ 29,407 ಮಂದಿ ಹಾಜರಾಗಿದ್ದು, 500 ಮಂದಿ ಗೈರು ಹಾಜರಾಗಿ ದ್ದಾರೆ. ವಿಶೇಷ ಅವಕಾಶದಡಿ ರಾಜ್ಯಶಾಸ್ತ್ರ ಪರೀಕ್ಷೆಗೆ ನೋಂದಣಿ ಮಾಡಿದ 9 ವಿದ್ಯಾರ್ಥಿಗಳ ಪೈಕಿ 8 ಮಂದಿ ಹಾಜರಾಗಿ ಓರ್ವ ವಿದ್ಯಾರ್ಥಿ ಗೈರಾಗಿದ್ದಾರೆ.
ವಿಜ್ಞಾನ ಪರೀಕ್ಷೆಗೆ ಜಿಲ್ಲೆಯ 13,811 ವಿದ್ಯಾರ್ಥಿಗಳ ಪೈಕಿ 188 ಮಂದಿ ಗೈರು ಹಾಜರಾಗಿದ್ದಾರೆ.