Advertisement
ಜಿಲ್ಲೆಯ 5 ವಲಯಗಳ ಪೈಕಿ ಕುಂದಾಪುರ ಪ್ರಥಮ, ಕಾರ್ಕಳ ಎರಡನೇ ಸ್ಥಾನ, ಬ್ರಹ್ಮಾವರ 3ನೇ, ಬೈಂದೂರು ವಲಯ 4ನೇ ಹಾಗೂ ಉಡುಪಿ 5 ನೇ ಸ್ಥಾನ ಗಳಿಸಿದೆ. ಜಿಲ್ಲೆ ಶೇ. 88.11 ಫಲಿತಾಂಶ ಗಳಿಸುವ ಮೂಲಕ ರಾಜ್ಯಕ್ಕೆ 5 ನೇ ಸ್ಥಾನ ಪಡೆದಿದೆ.
ಕುಂದಾಪುರ ವಲಯವೂ ಕಳೆದ 3 ವರ್ಷಗಳಿಂದ ಸತತವಾಗಿ ಅಗಸ್ಥಾನವನ್ನು ಕಾಯ್ದುಕೊಂಡಿರುವುದು ವಿಶೇಷ. ಕಳೆದ ವರ್ಷ ಕುಂದಾಪುರ – ಶೇ. 90.18, ಕಾರ್ಕಳ – ಶೇ. 89.44, ಉಡುಪಿ- ಶೇ. 87.47, ಬೈಂದೂರು – ಶೇ. 85.09 ಅನುಕ್ರಮವಾಗಿ 1 ರಿಂದ 5 ಸ್ಥಾನಗಳನ್ನು ಪಡೆದಿತ್ತು. ಕಳೆದ ಬಾರಿ 5ನೇ ಸ್ಥಾನ ಪಡೆದಿದ್ದ ಬೈಂದೂರು ವಲಯ ತನ್ನ ಫಲಿತಾಂಶವನ್ನು ಶೇ. 1.86 ರಷ್ಟು ವೃದ್ಧಿಸುವುದರೊಂದಿಗೆ ಉಡುಪಿಯನ್ನು ಹಿಂದಿಕ್ಕಿ 4 ನೇ ಸ್ಥಾನಕ್ಕೇರಿದೆ. ಕುಂದಾಪುರ : 12 ಶಾಲೆಗಳಿಗೆ ಶೇ.100
ಕಳೆದ ಬಾರಿ 5 ಶಾಲೆಗಳು ಮಾತ್ರ ಶೇ.100 ಫಲಿತಾಂಶ ಪಡೆದಿದ್ದರೆ, ಈ ಬಾರಿ ಒಟ್ಟು 12 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿದೆ. 21 ಸರಕಾರಿ ಪ್ರೌಢಶಾಲೆಗಳಿದ್ದು, ಶೇ. 89.74, 7 ಅನುದಾನಿತ ಪ್ರೌಢಶಾಲೆಗಳಿದ್ದು, ಶೇ. 85.71 ಹಾಗೂ 13 ಅನುದಾನ ರಹಿತ ಪ್ರೌಢಶಾಲೆಗಳಿದ್ದು, ಶೇ. 96.03 ಫಲಿತಾಂಶ ಗಳಿಸಿದೆ. ಕುಂದಾಪುರ ವಲಯದಲ್ಲಿ ಒಟ್ಟು 2,262 ಮಂದಿ ಪರೀಕ್ಷೆ ಬರೆದಿದ್ದು, ಅದರಲ್ಲಿ 2,061 ಮಂದಿ ತೇರ್ಗಡೆಯಾಗಿದ್ದಾರೆ.
Related Articles
ಬೈಂದೂರು ವಲಯದಲ್ಲಿ ಒಟ್ಟು 5 ಶಾಲೆಗಳು ಶೇ. 100 ಫಲಿತಾಂಶ ಗಳಿಸಿದೆ. ಚಿತ್ತೂರು ಸರಕಾರಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ಶಾಲೆ, ಶುಭದಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಿರಿಮಂಜೇಶ್ವರ, ವಿವೇಕಾನಂದ ಪ್ರೌಢಶಾಲೆ ಉಪ್ಪುಂದ, ಎಚ್‌ಎಂಎಂಎಸ್ ಬೈಂದೂರು ಪ್ರೌಢಶಾಲೆ ಶೇ. 100 ಪ್ರತಿಶತ ಫಲಿತಾಂಶ ಪಡೆದಿದೆ. ಒಟ್ಟು 1,901 ಮಂದಿ ಪರೀಕ್ಷೆ ಬರೆದಿದ್ದು, 1,672 ಮಂದಿ ತೇರ್ಗಡೆಯಾಗಿದ್ದಾರೆ.
Advertisement
ಕಾರ್ಕಳ ತಾ. ಜಿಲ್ಲೆಗೆ ದ್ವಿತೀಯಕಾರ್ಕಳ ತಾಲೂಕು ಎಸೆಸೆಲ್ಸಿ ಫಲಿತಾಂಶದಲ್ಲಿ ಶೇ.88.63 ಫಲಿತಾಂಶ ದಾಖಲಿಸಿ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದೆ. ಪರೀಕ್ಷೆಗೆ ಹಾಜರಾದ 2667 ವಿದ್ಯಾರ್ಥಿಗಳ ಪೈಕಿ 2364 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 1326 ಗಂಡು, 1341 ಹೆಣ್ಣು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 1133 ಗಂಡು ಹಾಗೂ 1231 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾರ್ಕಳ ತಾ. ಶೇ.90 ಫಲಿತಾಂಶ ದಾಖಲಿಸಿತ್ತು. 2 ಸರಕಾರಿ, 3 ಅನುದಾನಿತ, 6 ಅನುದಾನರಹಿತ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. ಎಲ್ಲರ ಪರಿಶ್ರಮ
ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಶೇ.100 ಫಲಿತಾಂಶ ಗಳಿಸಿದ್ದರೆ, ಆ ವಿಷಯಗಳ ಶಿಕ್ಷಕರನ್ನು ಗೌರವಿಸುವ ಪರಿಪಾಠ ಮಾಡಲಾಗಿದ್ದು, ಈ ಬಾರಿ ಇದು ದ್ವಿಗುಣವಾಗಿದೆ. ಪ್ರತಿ ತಿಂಗಳಿಗೊಮ್ಮೆ ಮುಖ್ಯ ಶಿಕ್ಷಕರ ಸಭೆ ಕರೆದು ಫಲಿತಾಂಶ ವೃದ್ಧಿಸುವ ಕುರಿತು ಚರ್ಚಿಸಲಾಗುತ್ತಿತ್ತು.
– ಅಶೋಕ್ ಕಾಮತ್,
ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಾಪುರ ಫಲ ನೀಡಿದ
“ಟಾರ್ಗೆಟ್-90′
ಈ ಬಾರಿ “ಟಾರ್ಗೆಟ್ 90 ಪ್ಲಸ್’ ಯೋಜನೆ ಮೂಲಕ ಹಿಂದಿಗಿಂತ ಹೆಚ್ಚಿನ ಫಲಿತಾಂಶ ಗಳಿಸಿದ್ದೇವೆ. ಮುಖ್ಯ ಶಿಕ್ಷಕರ ಸಭೆ ಕರೆದು ಫಲಿತಾಂಶ ಹೆಚ್ಚಿಸುವ ಕುರಿತಂತೆ ಚರ್ಚಿಸಲಾಗಿದೆ. ಎಲ್ಲ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ಮಕ್ಕಳ ನಿರಂತರ ಪರಿಶ್ರಮದಿಂದ ಉತ್ತಮ ಫಲಿತಾಂಶ ಬಂದಿದೆ.
– ಜ್ಯೋತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬೈಂದೂರು ಮಿಷನ್ 100
ಕಳೆದ ಎರಡು ತಿಂಗಳಿನಿಂದ ಮಿಷನ್ 100 ಎಸ್‌ಎಸ್‌ಎಲ್‌ಸಿ ಕಾರ್ಕಳ ಅಭಿಯಾನವನ್ನು ಆರಂಭಿಸಿದ್ದೇವೆ. ಇದರ ಪೂರ್ಣಫಲ ಮುಂದಿನ ಶೈಕ್ಷಣಿಕ ವರ್ಷದ ಫಲಿತಾಂಶದಲ್ಲಿ ನಿಚ್ಚಳವಾಗಿ ದೊರೆಯಲಿದೆ.
-ಶಶಿಧರ್ ಜಿ.ಎಸ್.,
ಕ್ಷೇತ್ರ ಶಿಕ್ಷಣಾ ಧಿಕಾರಿ, ಕಾರ್ಕಳ ಲಯವಾರು ಫಲಿತಾಂಶ (ಶೇ.)
ಕುಂದಾಪುರ – 90.93
ಕಾರ್ಕಳ- 88.63
ಬ್ರಹ್ಮಾವರ – 88.39
ಬೈಂದೂರು – 87.95
ಉಡುಪಿ – 85.62