Advertisement
ಉಡುಪಿ ಬಸ್ ನಿಲ್ದಾಣದ ಬಳಿಕ ಸರಕಾರಿ ಶಾಲೆಗೆ ಇವರು ಹಾಜರಾಗಿದ್ದು, ಛಲದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಕಾರ್ಕಳ ತಾಲೂಕಿನ ಪರಪ್ಪುವಿನ ವಿಜೇತ ವಿಶೇಷ ಮಕ್ಕಳ ವಸತಿ ಶಾಲೆಯ ಅಂಧ ವಿದ್ಯಾರ್ಥಿ ಶಿವಾನಂದ (27) ಶ್ರವಣದೋಷವಿದ್ದ ಅಂಕಿತಾ, ಬುದ್ಧಿಮಾಂದ್ಯ ಸಮಸ್ಯೆ ಇರುವ ರಾಘವೇಂದ್ರ ಮತ್ತು ಚಿರಂಜನ್ ಹಾಗೂ ಚೇತನಾ ವಿಶೇಷ ಮಕ್ಕಳ ಶಾಲೆಯ ಅಂಧ ವಿದ್ಯಾರ್ಥಿ ಮಂಜುನಾಥ, ವಿಶೇಷ ಮಕ್ಕಳಾದ ರವಿ, ಶ್ರೇಯಸ್, ಆಶ್ರಯ್ ಮತ್ತು ಸನತ್. ಕಾರ್ಕಳದ ಖಾಸಗಿ ಶಾಲೆಯೊಂದರ ಅಭಿತ್ ಮತ್ತು ಇನ್ನೋರ್ವ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ.ಶಿಕ್ಷಕರ ಸುಪರ್ದಿಯಲ್ಲಿ…
ವಿಶೇಷ ಮಕ್ಕಳನ್ನು ಪರೀಕ್ಷೆಗೆ ಕರೆದುಕೊಂಡು ಬಂದು, ಮುಗಿದ ಬಳಿಕ ಅವರನ್ನು ಕರೆದುಕೊಂಡು ಹೋಗುವ ಕರ್ತವ್ಯಕ್ಕೆ ಅವರ ಶಿಕ್ಷಕರು, ಹೆತ್ತವರು ಬೆಂಗಾವಲಾಗಿದ್ದರು. ವಿಜೇತ ವಿಶೇಷ ಮಕ್ಕಳ ಶಾಲೆಯ ಮುಖ್ಯೋ ಪಾಧ್ಯಾಯಿನಿ ಕಾಂತಿ ಹರೀಶ್, ಶಿಕ್ಷಕಿ ಶ್ವೇತಾ. ಚೇತನಾ ವಿಶೇಷ ಮಕ್ಕಳ ಶಾಲೆಯ ಶಿಕ್ಷಕಿಯರಾದ ಸಂಧ್ಯಾ, ಮಂಜುಳಾ ಅವರು ಮಕ್ಕಳನ್ನು ಪರೀಕ್ಷೆಗೆ ಬಸ್ಸಿನಲ್ಲಿ ಕರೆದುಕೊಂಡು ಬಂದಿದ್ದರು. ಹೆತ್ತವರು, ಶಿಕ್ಷಕಿಯರು ಪರೀಕ್ಷೆ ಮುಕ್ತಾಯವರೆಗೂ ಶಾಲೆಯ ಅಂಗಳದಲ್ಲೇ ಕುಳಿತುಕೊಂಡಿದ್ದರು.
ಮಂಗಳಮುಖೀಯೂ ಹಾಜರ್
ಅಂಧ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಬರೆಯಲು ಬೇರೊಬ್ಬರಿಗೆ ಅವಕಾಶ ಕಲ್ಪಿಸ ಲಾಗಿದ್ದು, ಅಭಿತ್ ಪರ ಹರ್ಷ ಹಾಗೂ ಶಿವಾನಂದ ಅವರ ಪರ ಅವಿನಾಶ್ ಕಾಮತ್ ಪರೀಕ್ಷೆ ಬರೆದಿದ್ದಾರೆ. ಮಂಗಳಮುಖೀ ನಗ್ಮಾ ಅವರೂ ಪರೀಕ್ಷೆ ಬರೆದಿದ್ದಾರೆ.
ಅಂಧ ವಿದ್ಯಾರ್ಥಿಗಳಾದ ಮಂಜುನಾಥ, ಶಿವಾನಂದ್ ಉತ್ತಮ ಹಾಡುಗಾರರು. ರಾಘವೇಂದ್ರ ಫುಟ್‌ಬಾಲ್‌ನಲ್ಲಿ ಮತ್ತು ಯೂನಿಫೈಡ್ ಟೀಮ್ ಗೇಮ್‌ನಲ್ಲಿ ರಾಷ್ಟ್ರಮಟ್ಟ, ಶಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಆಟಗಾರ. ಚಿರಂಜನ್ ಅವರು ಸೈಕ್ಲಿಂಗ್‌ನಲ್ಲಿ ರಾಜ್ಯಮಟ್ಟದಲ್ಲಿ ಪದಕ ಪಡೆದಿದ್ದಾರೆ. ಆಶ್ರಯ್ ಮತ್ತು ಸನತ್ ಪೈಂಟಿಂಗ್ ಕಲಾವಿದರಾಗಿದ್ದಾರೆ.