ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆ ಜು.19 ಮತ್ತು 22 ರಂದುನಡೆಯಲಿದ್ದು ಜಿಲ್ಲೆಯಲ್ಲಿ 20,826 ವಿದ್ಯಾರ್ಥಿಗಳು ಪರೀಕ್ಷೆಬರೆಯಲು127 ಪರೀಕ್ಷಾಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.ಪ್ರತಿ ಪರೀûಾ ಕೆಂದ್ರಗಳಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರಿದ್ದು ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್,ಸ್ಯಾನಿಟೈಸ್ ಮಾಡಲಾಗುವುದು.
ಸೋಂಕು ಲಕ್ಷಣವಿರುವವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರಗಳಲ್ಲಿ 2 ಪ್ರತ್ಯೇಕ ಕೊಠಡಿಮೀಸಲಿರಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ(ಡಿಡಿಪಿಐ)ಕೆ.ಎಸ್.ಪ್ರಕಾಶ್‌ಮಾಹಿತಿನೀಡಿದರು.ಒಟ್ಟು 127 ಪರೀûಾ ಕೆಂದ್ರಗಳಲ್ಲಿ3765 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಅದರಲ್ಲಿ 2825 ಸಿಬ್ಬಂದಿಗೆಕೊರೊನಾ ಮೊದಲನೇ ಲಸಿಕೆ ನೀಡಲಾಗಿದ್ದು ಇನ್ನುಳಿದ 940 ಸಿಬ್ಬಂದಿ2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ವಿವರ ನೀಡಿದ್ದಾರೆ.ಪರೀಕ್ಷೆಗೆ ಹಾಜರಾಗುವ ಎಲ್ಲಾವಿದ್ಯಾರ್ಥಿಗಳಿಗೆ ಆಯಾಕ್ಷೇತ್ರದ ಶಾಸಕರುಸ್ಕೌಟ್ಸ್‌ಮತ್ತುಗೈಡ್ಸ್ ಹಾಗೂ ಭಾರತೀಯರೆಡ್‌ಕ್ರಾಸ್ ಸಂಸ್ಥೆ ವತಿಯಿಂದಉಚಿತವಾಗಿ ಮಾಸ್ಕ್ ವಿತರಿಸಲಾಗುವುದು.
ಪರೀಕ್ಷೆನಡೆಯುವ ಕೇಂದ್ರಗಳಲ್ಲಿಕೊಠಡಿ ಹಾಗೂ ಶೌಚಾಲಯ ಪರೀûಾ ಮುನ್ನ ಹಾಗೂ ಪರೀಕ್ಷೆಮುಗಿದ ನಂತರ ದಿನಕ್ಕೆ2 ಬಾರಿ ಸೋಂಕು ನಿವಾರಣ ದ್ರಾವಣಸಿಂಪಡಿಸಿ ಸ್ವತ್ಛಗೊಳಿಸಲಾಗುವುದು ಎಂದು ಹೇಳಿದ್ದಾರೆ.ಕೊರೊನಾ ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದ್ದು ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದಧೈರ್ಯವಾಗಿ ಪರೀಕ್ಷೆ ಬರೆಯಬೇಕು ಎಂದು ಹೇಳಿದ್ದಾರೆ.
ಬಸ್‌ಗಳಲ್ಲಿ ಪರೀಕ್ಷಾರ್ಥಿಗಳಿಗೆ ಉಚಿತ ಪ್ರಯಾಣ: ನಗರಹಾಗೂ ಗ್ರಾಮೀಣ ಪ್ರದೇಶಗಳಿಂದ ಪರೀಕ್ಷೆಗೆ ಆಗಮಿಸುವವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜು.19, 22 ರಂದುಮಾತ್ರ ಎಲ್ಲಾ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಸಂಚಾರವಿರಲಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರತೋರಿಸಿದರೆ ಉಚಿತ ಪ್ರಯಾಣ ಮಾಡಬಹುದು. ದೂರದಹಾಗೂ ಗ್ರಾಮೀಣ ಪ್ರದೇಶಗಳಿಂದ ನಿಗದಿತ ಸಮಯಕ್ಕೆಪರೀಕ್ಷೆಗೆ ಹಾಜರಾಗಲು ಕಷ್ಟವಾಗುವ ವಿದ್ಯಾರ್ಥಿಗಳುಮುಂಚಿತವಾಗಿ ತಿಳಿಸಿದರೆ ವಸತಿ ನಿಲಯದ ವ್ಯವಸ್ಥೆಮಾಡಲಾಗುವುದು ಎಂದು ತಿಳಿಸಿದ್ದಾರೆ .
ಪರೀಕ್ಷೆಗೆ ಒಎಂಆರ್ ಶೀಟ್: ಈ ಬಾರಿ ಪರೀಕ್ಷೆಯಲ್ಲಿವಿದ್ಯಾರ್ಥಿ ಗಳು ಒಎಂಆರ್‌ಶಿàಟ್‌ನಲ್ಲಿ ಸರಿ ಉತ್ತರಗಳಗುರುತು ಮಾಡುವ ಪದ್ಧತಿ ಅಳವಡಿಸಲಾಗಿದೆ. 3 ಬಣ್ಣದಒಎಂಆರ್ ಶೀಟ್ ಪರೀಕ್ಷೆಗೆ ಬಳಸಲಾಗುತ್ತಿದ್ದು, ಪ್ರಥಮ ಭಾಷೆಪರೀಕ್ಷೆಗೆ ಗುಲಾಬಿ ಬಣ್ಣ, ದ್ವಿತೀಯ ಭಾಷೆ ಪರೀಕ್ಷೆಗೆ ಕಿತ್ತಳೆಬಣ್ಣ, ತೃತೀಯ ಭಾಷೆ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗೆಹಸಿರುಬಣ್ಣದಒಎಂಆರ್‌ಶಿàಟ್‌ಗಳಿರುತ್ತವೆ. ಶಿಕ್ಷಕರುಮಾದರಿಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್‌ಗಳ ಮೂಲಕವಿದ್ಯಾರ್ಥಿಗಳಿಗೆ ಈಗಾಗಲೇ ಮಾಹಿತಿ ನೀಡಿ ಮನವರಿಕೆಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.