Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ: ಇಬ್ಬರು ಡಿಬಾರ್‌

12:21 AM Apr 05, 2019 | Team Udayavani |

ಬೆಂಗಳೂರು: ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರ ಮುಕ್ತಾಯವಾಗಿದ್ದು, ತೃತೀಯ ಭಾಷೆ ಪರೀಕ್ಷೆ (ಹಿಂದಿ ಸೇರಿದಂತೆ ಇನ್ನಿತರ ವಿಷಯ)ಯಲ್ಲಿ ರಾಜ್ಯದಾದ್ಯಂತ 25,810 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

Advertisement

ಅಲ್ಲದೆ ಇಬ್ಬರು ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದಾರೆ.ಬೆಂಗಳೂರು ಉತ್ತರದಲ್ಲಿ 1064, ಬೆಂಗಳೂರು ದಕ್ಷಿಣದಲ್ಲಿ 1516, ರಾಮನಗರದಲ್ಲಿ 332, ಬೆಂಗಳೂರು ಗ್ರಾಮಾಂತರದಲ್ಲಿ 307, ಚಿಕ್ಕಬಳ್ಳಾಪುರದಲ್ಲಿ 514, ಕೋಲಾರದಲ್ಲಿ 553, ಮಧುಗಿರಿಯಲ್ಲಿ 402, ತುಮಕೂರಿನಲ್ಲಿ 822, ಚಾಮರಾಜ ನಗರದಲ್ಲಿ 340, ಮೈಸೂರಿನಲ್ಲಿ 1342, ಮಂಡ್ಯದಲ್ಲಿ 602, ಉಡುಪಿ 172, ಮಂಗಳೂರುನಲ್ಲಿ 445, ಕೊಡಗಿನಲ್ಲಿ 274, ದಾವಣಗೆರೆಯಲ್ಲಿ 829, ಚಿತ್ರದುರ್ಗದಲ್ಲಿ 981, ಚಿಕ್ಕಮಗಳೂರಿನಲ್ಲಿ 611, ಶಿವಮೊಗ್ಗದಲ್ಲಿ 750, ಹಾಸನದಲ್ಲಿ 745, ಹಾವೇರಿಯಲ್ಲಿ 721, ಗದಗ್‌ನಲ್ಲಿ 481, ಧಾರಾವಾಡದಲ್ಲಿ 629, ಚಿಕ್ಕೋಡಿಯಲ್ಲಿ 875, ಬೆಳಗಾವಿಯಲ್ಲಿ 628, ಬಾಗಲಕೋಟೆಯಲ್ಲಿ 589, ವಿಜಯಪುರದಲ್ಲಿ 1367, ಶಿರಶಿಯಲ್ಲಿ 264, ಉತ್ತರ ಕನ್ನಡದಲ್ಲಿ 189, ಯಾದಗಿರಿಯಲ್ಲಿ 997, ಕಲಬುರ್ಗಿಯಲ್ಲಿ 1806, ಕೊಪ್ಪಳದಲ್ಲಿ 553, ರಾಯಚೂರಿನಲ್ಲಿ 1101, ಬೀದರ್‌ನಲ್ಲಿ 1618 ಮತ್ತು ಬಳ್ಳಾರಿಯಲ್ಲಿ 1391 ವಿದ್ಯಾರ್ಥಿಗಳು ಗೈರಾಗಿದ್ದರು.

ಅಲ್ಲದೆ ಧಾರವಾಡದಲ್ಲಿ ಮತ್ತು ಬೆಳಗಾವಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದಾರೆ. ಸೋಮವಾರದಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದ್ದು, ಈ ತಿಂಗಳ ಅಂತ್ಯದಲ್ಲಿ ಫ‌ಲಿತಾಂಶ ಹೊರಬೀಳು ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next