Advertisement

ಪರೀಕ್ಷಾ ಕೇಂದ್ರಗಳ ಬಳಿ ಗುಂಪಿನ ಜಮಾವಣೆ: ಪೊಲೀಸರು-ಪೋಷಕರ ನಡುವೆ ಮಾತಿನ ಚಕಮಕಿ

04:24 PM Jun 25, 2020 | Team Udayavani |

ಕಲಬುರಗಿ: ಜಿಲ್ಲಾದ್ಯಂತ ಗುರುವಾರ ಎಸ್ಎಸ್ಎಲ್ ಸಿ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷಾ ಕೇಂದ್ರಗಳ ಬಳಿ ಪೋಷಕರು ಸಾಮಾಜಿಕ ಅಂತರ ಮರೆತು ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂತು. ಹೀಗಾಗಿ ಪೊಲೀಸರು ಮತ್ತು ಪೋಷಕರ ನಡುವೆ ನಗರದ ನೂತನ ವಿದ್ಯಾಲಯದ ಪರೀಕ್ಷಾ ಕೇಂದ್ರದ ಬಳಿ ಮಾತಿನ ಚಕಮಕಿ ನಡೆಯಿತು.

Advertisement

136 ಕೇಂದ್ರಗಳಲ್ಲಿ 43,714 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಕರೆತಂದ ಪೋಷಕರು ಗುಂಪು-ಗುಂಪಾಗಿ ಜಮಾವಣೆಗೊಂಡಿದ್ದರು.

ಪರೀಕ್ಷಾ ಕೇಂದ್ರದಿಂದ ದೂರಹೋಗಿ ಎಂದು ಪರೀಕ್ಷಾ ಸಿಬ್ಬಂದಿ ಮತ್ತು ಪೊಲೀಸರು ಹೇಳಿದರೂ, ಪಾಲಕರು ಕೇಳುತ್ತಿಲ್ಲ. ಇದರಿಂದ ಪೋಷಕರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ ಪಡುವಂತೆ ಆಗಿದೆ. ಈ ವೇಳೆ ನೂತನ ವಿದ್ಯಾಲಯದ ಪರೀಕ್ಷಾ ಕೇಂದ್ರದ ಬಳಿ ಕೆಲ ಪೋಷಕರು ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದ ಘಟನೆ ಸಹ ನಡೆಯಿತು.

ಪರೀಕ್ಷಾ ಕೇಂದ್ರದಿಂದ ತೆರಳುವಂತೆ ಸೂಚಿಸಿದರೂ ತೆರಳದ ಹಿನ್ನೆಲೆ ಪೋಷಕರನ್ನು ಪೊಲೀಸರು ದೂರ ತಳ್ಳಿ ಚದರಿಸಲು ಮುಂದಾದರೂ, ಆಗ ಪೊಲೀಸರು ಮತ್ತು ಪೋಷಕರ ನಡುವೆ ತೀವ್ರ ಮಾತಿನ‌ ಚಕಮಕಿ ನಡೆಯಿತು. ಕೇಂದ್ರದಿಂದ ದೂರ ಹೋಗಿ ಇಲ್ಲವಾದಲ್ಲಿ ನಿಮ್ಮ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆಯನ್ನೂ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next