Advertisement

ಎಸೆಸೆಲ್ಸಿ ಪರೀಕ್ಷೆ ತೇರ್ಗಡೆಗೆ ಐದು ಕೃಪಾಂಕ?

12:22 AM Jul 28, 2021 | Team Udayavani |

ಬೆಂಗಳೂರು: ಇತ್ತೀಚೆಗಷ್ಟೇ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆಯ ಅಂಕ ಸಿಗದ ವಿದ್ಯಾರ್ಥಿಗಳಿಗೆ 5 ಕೃಪಾಂಕಗಳನ್ನು ನೀಡಿ ತೇರ್ಗಡೆಗೊಳಿಸಲು ನಿರ್ಧರಿಸಲಾಗಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ಅತ್ಯಂತ ಸರಳ ರೀತಿಯಲ್ಲಿ ನಡೆಸಲಾಗಿತ್ತು. ಎರಡೇ ದಿನಗಳಲ್ಲಿ ಪರೀಕ್ಷೆಗಳನ್ನು ಮುಗಿಸಲಾಗಿದ್ದು, ಪ್ರತೀ ವಿಷಯಕ್ಕೆ ತಲಾ 40 ಅಂಕ ನಿಗದಿ ಮಾಡಲಾಗಿದೆ. ಒಟ್ಟು 240 ಅಂಕಗಳಿಗೆ ಪರೀಕ್ಷೆ ನಡೆದಿದೆ. ಪ್ರತೀ ವಿಷಯದ ಆಂತರಿಕ ಅಂಕಗಳನ್ನು ಸೇರಿಸಿ ಪೂರ್ಣ ಅಂಕ 625ರ ಅನ್ವಯವೇ ಫ‌ಲಿತಾಂಶ ನೀಡಲಾಗುತ್ತದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರತೀ ವಿಷಯದಲ್ಲಿ 40 ಅಂಕಗಳಿಗೆ ಪರೀಕ್ಷೆ ನಡೆದಿದ್ದು, ಅದನ್ನು 80 ಅಂಕಗಳಿಗೆ ಪರಿವರ್ತಿಸಲಾಗುತ್ತದೆ. ಹಾಗೆಯೇ ಆಂತರಿಕ ಅಂಕ 20ನ್ನು (ಪ್ರಥಮ ಭಾಷೆಗೆ 25) ಶಾಲೆಗಳಿಂದ ನೀಡಲಾಗುತ್ತದೆ. ಆಂತರಿಕ ಅಂಕ ಮತ್ತು ಪರೀಕ್ಷೆಯ ಅಂಕಗಳು ಸೇರಿ ಕನಿಷ್ಠ 30 ಅಥವಾ 35 ಅಂಕ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಗರಿಷ್ಠ 5ರಷ್ಟು ಕೃಪಾಂಕ ನೀಡಿ ಉತ್ತೀರ್ಣ ಮಾಡಲಾಗುತ್ತದೆ. ಪ್ರಸ್ತುತ ವರ್ಷ ಯಾರನ್ನೂ ಅನುತ್ತೀರ್ಣಗೊಳಿಸಲಾಗುವುದಿಲ್ಲ. ಹೀಗಾಗಿ ಕನಿಷ್ಠ ಅಂಕ ಪಡೆಯುವ ಕೆಲವು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲೇ ಬೇಕಿದೆ ಎಂದು ಮೂಲಗಳು ತಿಳಿಸಿವೆ.

ಎಸೆಸೆಲ್ಸಿ  ಪರೀಕ್ಷೆ ಬರೆದ ಎಲ್ಲ  ಮಕ್ಕಳನ್ನು ಉತ್ತೀರ್ಣಗೊಳಿಸಲಿದ್ದೇವೆ. ಚೆನ್ನಾಗಿ ಬರೆದ ವಿದ್ಯಾರ್ಥಿಗಳಿಗೆ ಉತ್ತಮ ಶ್ರೇಣಿ ಸಿಗಲಿದೆ. ಉತ್ತೀರ್ಣತೆಯ ಅಂಕ ಪಡೆಯದವರಿಗೆ ಕೃಪಾಂಕ ನೀಡಲಾಗುತ್ತದೆ. -ವಿ. ಅನ್ಬುಕುಮಾರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next