Advertisement

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ

12:30 AM Mar 20, 2019 | Team Udayavani |

ಬೆಂಗಳೂರು: ಆಡಳಿತ ಪಕ್ಷದ ಸದಸ್ಯರ ತೀವ್ರ ವಿರೋಧಕ್ಕೆ ಒಳಗಾಗಿದ್ದ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿರುವ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ(ಶಿಕ್ಷಕ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಅಧಿನಿಯಮ 2018ಕ್ಕೆ ರಾಜ್ಯಪಾಲ ರಿಂದ ಒಪ್ಪಿಗೆ ಪಡೆಯಲು ಸರ್ಕಾರ ಯಶಸ್ವಿಯಾಗಿದೆ. ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ತುಂಬುವ ಅಗತ್ಯವಿರುವ ಒಂದು ಸ್ಥಳವನ್ನು ಯಾವೊಬ್ಬ ಶಿಕ್ಷಕನೂ ಆಯ್ಕೆ ಮಾಡಿಕೊಳ್ಳದೇ ಇದ್ದಾಗ
ಸರ್ಕಾರವೇ ಇದನ್ನು ಭರ್ತಿ ಮಾಡಲಿದೆ ಎಂಬ ಪ್ರಮುಖಾಂಶ  ಸಹಿತವಾದ ತಿದ್ದುಪಡಿಗೆ ರಾಜ್ಯಪಾಲರು ಒಪ್ಪಿಗೆ
ಸೂಚಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರವರ್ಗಾವಣೆ ಪ್ರಕ್ರಿಯೆಗೆ ಬೇಕಾದ ಮಾರ್ಗಸೂಚಿ ಇಲಾಖೆಯಿಂದ ಹೊರಡಿಸುವ ಸಾಧ್ಯತೆ ಇದೆ.

Advertisement

ಆಡಳಿತ ಪಕ್ಷದಿಂದಲೇ ವಿರೋಧ ವ್ಯಕ್ತವಾಗಿತ್ತು: ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ)ವಿಧೇಯಕ-2018ಕ್ಕೆ ಫೆಬ್ರವರಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧದ ವ್ಯಕ್ತಪಡಿಸಿದ್ದರು. ಆದರೂ, ಉಭಯ ಸದನಗಳಲ್ಲೂ ಅಂಗೀಕಾರಗೊಂಡಿತ್ತು. ಮಾರ್ಗಸೂಚಿ ನಿಯಮದ ನಂತರ ಮತ್ತಷ್ಟು ವಿರೋಧ ವ್ಯಕ್ತವಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಈ ತಿದ್ದುಪಡಿ ಭ್ರಷ್ಟಾಚಾರಕ್ಕೆ ನೇರ ಅವಕಾಶ ಮಾಡಿಕೊಡುತ್ತದೆ. ಬಲಿಷ್ಠ ಶಿಕ್ಷಕರು ಸುಲಭದಲ್ಲಿ ವರ್ಗಾವಣೆ ಪಡೆಯಲಿದ್ದಾರೆ. ಈ ಹುದ್ದೆಯ ವರ್ಗಾವಣೆಗಾಗಿಯೇ ದಲ್ಲಾಳಿಗಳು ಹುಟ್ಟಿಕೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್‌ನಲ್ಲಿ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆಯಲು ತುದಿಗಾಲಿನಲ್ಲಿ ನಿಂತಿದ್ದರೆ, ಈಗಷ್ಟೇ ದ್ವಿತೀಯ ಪಿಯು ಮುಗಿಸಿರುವ ವಿದ್ಯಾರ್ಥಿಗಳು ಸಿಇಟಿಗೆ ಸಜ್ಜಾಗುತ್ತಿದ್ದಾರೆ. ಮಾ.21ರಿಂದ ಏ.4ರ ತನಕ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 8.41 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಬೇಕಾದ ಸಿದ್ಧ ತೆ ಮಾಡಿಕೊಂಡಿದೆ.

ಮಾ.18ಕ್ಕೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಮುಗಿಸಿರುವ (ಪ್ರಮುಖವಾಗಿ ವಿಜ್ಞಾನ ವಿಭಾಗದ) ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನೋಂದಣಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಏ.18 ಮತ್ತು 23ರಂದು ಚುನಾವಣೆ ನಡೆಯುವುದರಿಂದ ಸಿಇಟಿ ಪರೀಕ್ಷೆ ದಿನಾಂಕವನ್ನು ಏ.29 ಮತ್ತು 30ಕ್ಕೆ ನಿಗದಿ ಮಾಡಲಾಗಿದೆ. ಸಿಇಟಿಗೆ ನೋಂದಣಿ ಮಾಡಿಕೊಳ್ಳಲು ಮಾ.20ರ ತನಕವೂ ಅವಕಾಶ ನೀಡಲಾಗಿದೆ. ಈವರೆಗೂ ನೋಂದಣಿ ಮಾಡಿಕೊಳ್ಳದ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ //kea.kar.nic.in/ ನಲ್ಲಿರುವ ಲಿಂಕ್‌ ಬಳಸಿ ನೋಂದಣಿ ಮಾಡಿಕೊಳ್ಳಬಹು ದಾಗಿದೆ. ಮಾ.20 ಕಡೆಯ ದಿನವಾಗಿರುವುದರಿಂದ ಎಚ್ಚರಿಕೆಯಿಂದ ನೋಂದಣಿ ಮಾಡುವುದು ಅಗತ್ಯ ಎಂದು ಪ್ರಾಧಿಕಾರ ತಿಳಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಂದೇ ದಿನ ಬಾಕಿ ಇರುವುದು. ಆನ್‌ಲೈನ್‌ ಮೂಲಕ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪರೀಕ್ಷೆಗೆ ಹೋಗುವ ಮೊದಲು ಪ್ರವೇಶ ಪತ್ರ ಇತ್ಯಾದಿಗಳನ್ನು ಮನೆಯಿಂದಲೇ ಪರಿಶೀಲಿಸಿಕೊಂಡು ಹೋಗಬೇಕು. ಅಲ್ಲದೇ ಸ್ಮಾರ್ಟ್‌ ವಾಚ್‌ ಅಥವಾ ಮೊಬೈಲ್‌ ಫೋನ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವಂತಿಲ್ಲ. ಇದರ ಬಗ್ಗೆಯೂ ಎಚ್ಚರ ಇರಲಿ. ಪರೀಕ್ಷೆ ಒಂದೇ ದಿನ ಇರುವುದರಿಂದ ಓದಿದ ವಿಷಯಗಳನ್ನು ಹೆಚ್ಚೆಚ್ಚು ಮನನ ಮಾಡಿಕೊಳ್ಳುವುದು ಉತ್ತಮ. ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇ ಕೆಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು. ದ್ವಿತೀಯ ಪಿಯು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಫ‌ಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಮಾ.21ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. ಏಪ್ರಿಲ್‌ ಅಂತ್ಯಕ್ಕೆ ಫ‌ಲಿತಾಂಶವೂ ಬರಲಿದೆ. ಹಾಗೆಯೇ ಸಿಟಿಇಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ತಯಾರಿ ಆರಂಭಿಸಿದ್ದಾರೆ. ಸಿಇಟಿಗೆ ಸಂಬಂಧ ಮಾಹಿತಿ ವೆಬ್‌ಸೈಟ್‌ ಹಾಗೂ ಸಹಾಯವಾಣಿ ಕೇಂದ್ರಗಳಲ್ಲಿ ಲಭ್ಯವಿದೆ.

Advertisement

ಮೌಲ್ಯಮಾಪನಕ್ಕೆ ಗೈರಾದರೆ ಜೈಲು: ಇಲಾಖೆ ಎಚ್ಚರಿಕೆ ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿರ್ದಿಷ್ಟ ಕಾರಣವಿಲ್ಲದೇ ಗೈರಾಗುವ ಮೌಲ್ಯಮಾಪಕರಿಗೆ ಕಾನೂನಿನನ್ವಯ ಒಂದು ವರ್ಷ ಜೈಲು ಅಥವಾ 10 ಸಾವಿರ ರೂ. ದಂಡವನ್ನು ವಿಧಿಸಲಾಗುವುದು ಎಂದು ಪಪೂ ಶಿಕ್ಷಣ ಇಲಾಖೆ ಉಪನ್ಯಾಸಕರಿಗೆ ಎಚ್ಚರಿಕೆ ನೀಡಿದೆ.

ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯಕ್ಕೆ 18,005 ಸಹಾಯಕ ಮೌಲ್ಯಮಾಪಕರು ಹಾಗೂ 3,114 ಉಪಮುಖ್ಯ ಮೌಲ್ಯಮಾಪಕರನ್ನು ಇಲಾಖೆ ಗುರುತಿಸಿದೆ. ಮೌಲ್ಯಮಾಪನ ಪ್ರಕ್ರಿಯೆಗೆ ಗೈರಾಗುವುದು ಮಾತ್ರವಲ್ಲದೇ, ಮೌಲ್ಯಮಾಪನ ಕಾರ್ಯಕ್ಕೆ ಅಡ್ಡಿಪಡಿಸಿದರೂ ಈ ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನು ಸುವ್ಯವಸ್ಥೆ ಹಾಗೂ ಶಿಕ್ಷಣ ಕಾಯ್ದೆಯಡಿ ಅವಕಾಶ ಇದೆ. ಮೌಲ್ಯಮಾಪನ ನೇಮಕಾತಿ ಆದೇಶವನ್ನು ಉಪನ್ಯಾಸಕರ ಗಮನಕ್ಕೆ ತರಲು ಪ್ರಾಂಶುಪಾಲರಿಗೆ ಸೂಚಿಸಿರುವ ಇಲಾಖೆ, ಉಪನ್ಯಾಸಕರು ವಿನಾಕಾರಣ ಗೈರು ಹಾಜರಾದರೆ, ಪ್ರಾಂಶುಪಾಲರನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದೂ ಎಚ್ಚರಿಕೆ ನೀಡಿದೆ.

ಇಲಾಖೆಯಿಂದ ಈ ರೀತಿಯ ಎಚ್ಚರಿಕೆ ನೀಡುವುದು ಹೊಸತಲ್ಲ. ಬೇಡಿಕೆ ಈಡೇರಿಸುವಂತೆ ಸರ್ಕಾರದ ಮುಂದೆ
ಒತ್ತಾಯಿಸುವುದು ನಮ್ಮ ಸಂವಿಧಾನಬದ್ಧವಾದ ಹಕ್ಕು. ಮಂಗಳವಾರ ಸಂಘದ ಸಭೆ ನಡೆಸಿ ಮುಂದಿನ ನಿರ್ಣಯ ತೆಗೆದುಕೊಳ್ಳಲಿದ್ದೇವೆ.
● ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next